Featured
ಕೊರೊನಾ ನಿಯಂತ್ರಣದಲ್ಲಿ 2,000 ಕೋಟಿ ಅಕ್ರಮದ ಶಂಕೆ? – ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆರೋಪ..!
ರೈಸಿಂಗ್ ಕನ್ನಡ :
ಬೆಂಗಳೂರು :
ವಿರೋಧ ಪಕ್ಷದ ನಾಯಕ ಹಾಗೆ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಫುಲ್ ಗರಂ ಆಗಿದ್ದಾರೆ. ಅದ್ರಲ್ಲೂ ಕೊರೊನಾ ವಿಚಾರದಲ್ಲಿ ರಾಜ್ಯಸರ್ಕಾರದಲ್ಲಿ 2 ಸಾವಿರ ಕೋಟಿಯ ಅಕ್ರಮವಾಗಿದೆ ಅನ್ನೋ ಶಂಕೆ ವ್ಯಕ್ತಪಡಿಸಿದ್ದಾರೆ. ಕೊರೊನಾ ನಿಯಂತ್ರಣದಲ್ಲೇ ಇಷ್ಟೊಂದು ಅಕ್ರಮವಾಗಿದ್ರೆ, ಉಳಿದ ಯೋಜನೆಗಳ ಗತಿ ಏನು ಅಂದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಕೋವಿಡ್-19 ವಿಚಾರದಲ್ಲಿ, ಸರ್ವಪಕ್ಷ ಸದಸ್ಯರು ಇರುವ ಸಮಿತಿ ರಚನೆಯಾಗಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ, ನಮ್ಮಲ್ಲಿ ಕ್ವಾರಂಟೈನ್ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ. ಮನೆಯಲ್ಲೇ ಕ್ವಾರಂಟೈನ್ ಆಗಿ ಅಂತಾರೆ. ಅದಕ್ಕೆ ಸರ್ಕಾರ ಏನು ಮಾಡಲಿದೆ. ಚಿಕಿತ್ಸೆಗೆ ಹೋದವರಿಗೆ ಸರಿಯಾಗಿ ಆಹಾರವೂ ಸಿಗೋದಿಲ್ಲ. ಇದರ ಬಗ್ಗೆ ಸೂಕ್ತವಾದ ತನಿಖೆ ಆಗಬೇಕು ಎಂದಿದ್ದಾರೆ.
ರಾಜ್ಯದಲ್ಲಿ ಸರಿಯಾದ ಬೆಡ್ ವ್ಯವಸ್ಥೆ ಇಲ್ಲ. ಇಲ್ಲೀಯವರೆಗೆ 30-40 ಸಾವಿರ ಬೆಡ್‌ಗಳನ್ನ ಸಿದ್ಧಪಡಿಸಬೇಕಿತ್ತು. ಆದ್ರೀಗ ನಾಲ್ಕೂವರೆ ಸಾವಿರ ಬೆಡ್‌ಗಳು ಮಾತ್ರ ಇವೆ. ಎಲ್ಲವೂ ಸೇರಿ ಸುಮಾರು 2000 ಕೋಟಿ ರೂಪಾಯಿಗಳಷ್ಟು ಲೂಟಿ ಆಗಿರುವ ಶಂಕೆ ಇದೆ ಅಂತ ಗಂಭೀರವಾಗಿ ಆರೋಪಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?