Featured
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ:ಆನ್ಲೈನ್ನಲ್ಲಿ 11ನೇ ಘಟಿಕೋತ್ಸವ ಆಯೋಜನೆ
![](https://risingkannada.com/wp-content/uploads/2020/08/akkahamahadevi-VV-2.jpg)
ರೈಸಿಂಗ್ ಕನ್ನಡ :
ವಿಜಯಪುರ:
ರಾಜ್ಯದ ಏಕೈಕ ಮಹಿಳಾ ವಿಶ್ವ ವಿದ್ಯಾಲಯ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವವನ್ನು ಆನ್ಲೈನ್ನಲ್ಲಿ ಆಯೋಜಿಸಲು ವಿವಿ ನಿರ್ಧರಿಸಿದೆ.
ಕೊರೊನಾ ಹಿನ್ನೆಲೆಯಲ್ಲಿ ಘಟಿಕೋತ್ಸವವನ್ನು ಆನ್ಲೈನ್ ಮೂಲಕ ಸಂಘಟಿಸಲು ಮಹಿಳಾ ವಿ.ವಿ ಮುಂದಾಗಿದೆ. ಸಭೆ, ಸಮಾರಂಭಗಳಿಗೆ ನಿರ್ಬಂಧ ಇರುವ ಹಿನ್ನೆಲೆ ವಿವಿಯ ಯೂ ಟ್ಯೂಬ್ ಚಾನಲ್, ಅಕ್ಕ ಟಿವಿ, ಗೂಗಲ್ ಮೀಟ್, ಫೇಸ್ಬುಕ್ ಲೈವ್ ಸೇರಿದಂತೆ ಹಲವು ಸಾಮಾಜಿಕ ತಾಣಗಳನ್ನು ಬಳಸಿಕೊಂಡು ಘಟಿಕೋತ್ಸವ ಆಚರಿಸಲು ನಿರ್ಧರಿಸಲಾಗಿದೆ.
ರಾಜ್ಯಪಾಲರು ಆನ್ ಲೈನ್ ಮೂಲಕ ಘಟಿಕೋತ್ಸವ ಆಚರಣೆಗೆ ಈಗಾಗಲೇ ಅನುಮತಿ ನೀಡಿದ್ದು ಸೆಪ್ಟೆಂಬರ್ ಕೊನೆ ವಾರದಲ್ಲಿ ಮಹಿಳಾ ವಿ.ವಿ ಯ ಅಂಬೇಡ್ಕರ್ ಸಭಾಭವನದಲ್ಲಿ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಘಟಿಕೋತ್ಸವಕ್ಕೆ ರಾಜ್ಯಪಾಲ ವಜುಬಾಯಿ ವಾಲಾ ಅವರು ಆನ್ಲೈನ್ ಮೂಲಕ ಮುಖ್ಯಭಾಷಣ ಮಾಡಲಿದ್ದಾರೆ.
![Puranik Full](https://risingkannada.com/wp-content/uploads/2020/07/full-plate.jpg)
ಘಟಿಕೋತ್ಸವದಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಕೊರೊನಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು. 72ಕ್ಕಿಂತ ಹೆಚ್ಚು ಬಂಗಾರದ ಪದಕ ವಿಜೇತೆಯರು, ನಗರದ ಗಣ್ಯರು, ವಿವಿಐಪಿಗಳು ಸೇರಿ 200-250 ಜನರಿಗೆ ಮಾತ್ರ ಆಹ್ವಾನ ನೀಡಲು ನಿರ್ಧರಿಸಿದ್ದಾರೆ. ಈ ಬಾರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಬ್ಬರು ಮಹಿಳೆಯರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುವುದು.
ಬಂಗಾರದ ಪದಕ ವಿಜೇತೆಯರು ಸಹಿತ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ಉಳಿದ 10,500 ಪದವಿ, ಸ್ನಾತಕೋತ್ತರ ಪದವೀಧರೆಯರಿಗೆ ಅವರ ವಿಳಾಸಕ್ಕೆ ಸರ್ಟಿಫಿಕೇಟ್ ಕಳುಹಿಸಿಕೊಡುವ ಯೋಚನೆಯಲ್ಲಿದ್ದಾರೆ.
ವಿಶ್ವವಿದ್ಯಾಲಯದಲ್ಲಿ 10 ಪದವಿ, 32 ಸ್ನಾತಕೋತ್ತರ ಪದವಿ ಹಾಗೂ ಮೂರು ಪಿಜಿ ಡಿಪ್ಲೋಮಾ ಕೋರ್ಸ್ ಗಳಿವೆ. ಘಟಿಕೋತ್ಸವವನ್ನು ನೇರವಾಗಿ ಆನ್ ಲೈನ್ ಮೂಲಕ ವೀಕ್ಷಿಸಲು ಅವಕಾಶ ನೀಡುವ ವ್ಯವಸ್ಥೆ ಮಾಡಲಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?