Featured
ಸರ್ಕಾರದ ಮಾರ್ಗಸೂಚಿಯಂತೆ ಈದ್ ಹಬ್ಬ- ಮಾಜಿ ಸಚಿವರಿಂದ ದೇಶಕ್ಕಾಗಿ ಪ್ರಾರ್ಥನೆ

ರೈಸಿಂಗ್ ಕನ್ನಡ:
ವಿಶ್ವಕುಮಾರ್, ಬೀದರ್:
ತ್ಯಾಗ ಬಲಿದಾನದ ಪ್ರತೀಕವೆ ಈದ್ ಹಬ್ಬ. ಮುಸಲ್ಮಾನರ ಪವಿತ್ರ ಹಬ್ಬಕ್ಕೂಈ ಬಾರಿ ಕೊರೊನಾ ಅಡ್ಡಿಯಾಗಿದೆ. ಗಡಿನಾಡು ಬೀದರ್ ಜಿಲ್ಲೆಯಲ್ಲಿ ಈದ್,ರಂಜಾನ್ ಬಕ್ರಿದ್ ಹಬ್ಬ ಬಂತೆಂದರೆ ಸಾಕು ಈಡಿ ಬೀದರ್ ಜಿಲ್ಲೆ ಕಳೆ ಕಟ್ಟುತ್ತಿತ್ತು, ಆದರೆ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಕೊರೊನಾ ಸೊಂಕಿತರ ಸಂಖ್ಯೆ ಏರಿಕೆಯಾಗುತ್ತಲೆ ಇರುವುದರಿಂದ ಜಿಲ್ಲೆಯ ಜನತೆಯಲ್ಲಿ ಆತಂಕ ಮನೆ ಮಾಡಿದೆ.
ಶನಿವಾರ ಪವಿತ್ರ ಹಬ್ಬ ಈದ್ ಮೇಲೂ ಕೊರೊನಾ ಕಣ್ಣು ಬಿದ್ದಿತ್ತು ವಕ್ಕರಿಸಿದೆ. ನಗರದ ಈದ್ಗಾ ಮೈದಾನದಲ್ಲಿ ಕೆವಲ ಬೆರಳೆಣಿಕೆಯಷ್ಟು ಜನ ಮಾತ್ರ ಸಾಮಾಜಿಕ ಅಂತರ ಕಾಪಾಡಿಕೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮಾಜಿ ಸಚಿವ ರಹೀಂ ಖಾನ್ ಸೇರಿದಂತೆ ಇತರರು ಸಾಮೂಹಿಕ ಪ್ರಾಥನೆಯಲ್ಲಿ ಭಾಗಿಯಾಗಿದ್ದರು. ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಆದಷ್ಟು ಬೇಗ ನಿವಾರಣೆ ಆಗಲಿ ಎಂದು ಅಲ್ಲಾ ಬಳಿ ಪ್ರಾಥನೆ ಮಾಡಿದ್ದೇವೆ. ಅಲ್ಲಾಹುವಿನ ಕೃಪೆ ಎಲ್ಲರ ಮೇಲಿದೆ, ಆದಷ್ಟು ಬೇಗ ನಮ್ಮನ್ನ ಈ ಸಂಕಷ್ಟದಿಂದ ಪಾರು ಮಾಡುತ್ತಾರೆ ಎನ್ನುವ ನಂಬಿಕೆ ನಮಗಿದೆ ಎಂದು ಮಾಜಿ ಕ್ರೀಡಾಸಚಿವ ರಹೀಂ ಖಾನ್ ಹೇಳಿದರು. ಸರ್ಕಾರ ನೀಡಿರುವ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾಥನೆಮಾಡಿದ್ದೆವೆ. ಬೀದರ್ ಜಿಲ್ಲೆಯ ಜನತೆ ಅನಾವಶ್ಯಕವಾಗಿ ಮನೆ ಬಿಟ್ಟು ಹೊರಬರಬೇಡಿ, ಎಂದು ಜನತೆಯಲ್ಲಿಮನವಿ ಮಾಡಿದರು.
You may like

ಚಕ್ರವರ್ತಿಗೆ ನಿರ್ಬಂಧ: ಪ್ರಿಯಾಂಕ್ ವಿರುದ್ಧ ಸಿಡಿದ ಸೂಲಿಬೆಲೆ

ನಾರಂಜ ಸಹಕಾರಿ ಸಕ್ಕರೆ ಕಾರ್ಖಾನೆಯ ನೂತನ ಅಧ್ಯಕ್ಷರಾಗಿ ಸಿದ್ರಾಮ್ ಅವಿರೋಧ ಆಯ್ಕೆ

ನೀಟ್ ಪರೀಕ್ಷೆಯಲ್ಲಿ 9ನೇ ಸ್ಥಾನ : ಉಸ್ತುವಾರಿ ಸಚಿವ ಪ್ರಭುಚೌಹಾಣ್ರಿಂದ ಅಭಿನಂದನೆ

ಬೀದರ್ನ ಕಾರಂಜ ಜಲಾಶಯಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಭೇಟಿ:ನೀರಿನ ಮಟ್ಟ ಪರಿಶೀಲಿಸಿದ ಕೈ ನಾಯಕ

ವರುಣಾಘಾತಕ್ಕೆ ಬೀದರ್ ಜನತೆ ತತ್ತರ: ರಾಜ್ಯ ಹೆದ್ದಾರಿಗೆ ಜಲ ದಿಗ್ಬಂಧನ

ಗಡಿನಾಡಿನ ನಿಸ್ವಾರ್ಥ ಸೇವಕ- ಸಮಾಜಸೇವೆಯಲ್ಲೇ ಖುಷಿ ಕಾಣುವ ಮಹಾನುಭಾವ

















