Featured
ಡಿಕೆಶಿ ಆಯ್ತು, ಈಗ ಡಿಕೆ ಸುರೇಶ್ ಸರದಿ : ಡಿಕೆಸು ಕೂಡ ಅರೆಸ್ಟ್ ಆಗ್ತಾರಾ..?
ರೈಸಿಂಗ್ ಕನ್ನಡ : ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಬಂಧನದ ಬೆನ್ನಲ್ಲೇ ಈಗ ಇಡಿ ಬಿಸಿ ಡಿಕೆ ಸುರೇಶ್ಗೂ ಕಾಡುವ ಸಾಧ್ಯತೆ ಇದೆ. ಡಿಕೆಶಿ ಸಹೋದರ, ಸಂಸದ ಡಿಕೆ ಸುರೇಶ್ಗೂ ಇಡಿ ವಿಚಾರಣೆ ಬಿಸಿ ತಟ್ಟಲಿದೆ. ದೆಹಲಿಯಲ್ಲಿ ಸಿಕ್ಕಿದ್ದ 8.5 ಕೋಟಿ ನಗದಿನಲ್ಲಿ ನನ್ನದೂ 21.38 ಲಕ್ಷ ಹಣ ಇದೆ ಎಂದು ಡಿಕೆ ಸುರೇಶ್ ಘೋಷಿಸಿಕೊಂಡಿದ್ದರು. ಲೋಕಸಭಾ ಚುನಾವಣೆ ಅಫಿಡವಿಟ್ನಲ್ಲಿ ಹಣದ ಬಗ್ಗೆ ಡಿಕೆಸು ತೋರಿಸಿದ್ರು. ಇದೇ ಪ್ರಕರಣದಲ್ಲಿ ಡಿಕೆಸು ಲಾಕ್ ಆಗುವ ಲಕ್ಷಣಗಳು ಕಾಣ್ತಿವೆ.
ಈಗಾಗಲೇ ಡಿಕೆಶಿ ಪುತ್ರಿ ಐಶ್ವರ್ಯ, ಡಿಕೆಶಿ ಆಪ್ತೆ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿಚಾರಣೆಯನ್ನ ಇಡಿ ನಡೆಸಿದೆ. ಸುಮಾರು 185 ಮಂದಿಗೆ ಇಡಿ ನೊಟೀಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ ಎನ್ನಲಾಗಿದೆ. ಇದೇ ಪ್ರಕರಣದಲ್ಲಿ ಡಿಕೆ ಸುರೇಶ್ ಅವರನ್ನೂ ವಿಚಾರಣೆಗೆ ಒಳಪಡಿಸೋ ಸಾಧ್ಯತೆ ಇದೆ. ಡಿಕೆಶಿಯಂತೆ ಡಿಕೆ ಸುರೇಶ್ ಅವರನ್ನೂ ಕೂಡ ಇಡಿ ಬಂಧಿಸುತ್ತಾ ಅನ್ನೋ ಅನುಮಾನ ಕಾಡ್ತಿದೆ.
ಈ ಮಧ್ಯೆ, ಡಿಕೆಶಿ ಜಾಮೀನು ಅರ್ಜಿಯ ತೀರ್ಪು ಇದೇ ಬುಧವಾರ ಬರಲಿದ್ದು, ಅಲ್ಲಿವರೆಗೆ ಡಿಕೆ ಶಿವಕುಮಾರ್ ತಿಹಾರ್ ಜೈಲಿನಲ್ಲೇ ಇರಬೇಕಿದೆ. ಸದ್ಯ, ಡಿಕೆಶಿ ಆರೋಗ್ಯ ಸ್ಥಿರವಾಗಿದ್ದು, ಪ್ರತಿದಿನ ಆರೋಗ್ಯ ತಪಾಸಣೆ ನಡೆಯುತ್ತಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?