ಬೆಂಗಳೂರು
ಬಿಲ್ಡರ್ ನಾಗರಾಜ್ ರೆಡ್ಡಿ ಮನೆ ಮೇಲೆ ಇಡಿ ರೇಡ್!
ಆನೇಕಲ್ : ಬಿಲ್ಡರ್ ಹಾಗೂ ಉದ್ಯಮಿ ಬಿ.ಟಿ. ನಾಗರಾಜ್ ರೆಡ್ಡಿ ಮನೆ ಹಾಗೂ ಕಚೇರಿ ಮೇಲೆ ಇಡಿ ದಾಳಿ ನಡೆದಿದೆ. ಏಕಕಾಲದಲ್ಲಿ ಮನೆ ಹಾಗೂ ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರದಲ್ಲಿನ ಉದ್ಯಮಿ ಬಿ.ಟಿ. ನಾಗರಾಜರೆಡ್ಡಿ ಮನೆ ಮತ್ತು ಕಛೇರಿಯಲ್ಲಿ ದಾಖಲೆಗಳನ್ನ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಮಹೇಂದ್ರ ಹೋಮ್ಸ್ ಗ್ರೂಪ್ ಅಪ್ ಕಂಪನಿಗಳ ಮಾಲೀಕ ಬಿ.ಟಿ.ನಾಗರಾಜ್ ರೆಡ್ಡಿ ಮಾಜಿ ಎಮ್ಎಲ್ಸಿ ಬಿ.ಟಿ. ದಯಾನಂದರೆಡ್ಡಿ ಸಹೋದರರಾಗಿದ್ದು, ಮಧ್ಯರಾತ್ರಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಂಪನಿಗಳು ಹಾಗೂ ಮನೆಯ ಮೇಲೆ ಏಕಕಾಲಕ್ಕೆ ದಾಳಿ ಮಾಡಲಾಗಿದೆ. ಹಲವು ದಾಖಲೆಗಳು ಮತ್ತು ನಗದು ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಮಹೇಂದ್ರ ಹೋಮ್ಸ್ ಹೆಸರಿನಲ್ಲಿ ಅಪಾರ್ಟ್ಮೆಂಟ್ ಗಳ ನಿರ್ಮಾಣ ಮತ್ತು ವಾಣಿಜ್ಯ ಮಳಿಗೆಗಳಲ್ಲಿ ಹೆಚ್ಚು ಹೂಡಿಕೆ ಮಾಡಿದ್ದ ಬಿ.ಟಿ.ನಾಗರಾಜರೆಡ್ಡಿಯವರನ್ನ ಇಡಿ ಅಧಿಕಾರಿಗಳು ವ್ಯವಹಾರಗಳನ್ನ ಟ್ರ್ಯಾಕ್ ಮಾಡುತ್ತಿದ್ದಾರೆ. ಇದೀಗ ದಾಳಿ ನಡೆಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?