Featured
ಡಿಕೆ ಶಿವಕುಮಾರ್ ಪತ್ನಿ ಉಷಾ, ತಾಯಿ ಗೌರಮ್ಮಗೂ ಇಡಿ ಸಮನ್ಸ್ : ಡಿಕೆಶಿಗೆ ಜಾಮೀನು ಸಿಗುತ್ತಾ..?
ನವದೆಹಲಿ/ಬೆಂಗಳೂರು : ಮಾಜಿ ಸಚಿವ ಡಿಕೆ ಶಿವಕುಮಾರ್ ತಿಹಾರ್ ಜೈಲಿನಲ್ಲಿದ್ದು ಸದ್ಯಕ್ಕೆ ಬಿಡುಗಡೆ ಭಾಗ್ಯ ಸಿಗುವಂತೆ ಕಾಣ್ತಿಲ್ಲ. ಯಾಕಂದ್ರೆ, ಈಗಾಗಲೇ ಡಿಕೆ ಪ್ರಕರಣದಲ್ಲಿ ಮಗಳು ಐಶ್ವರ್ಯ, ಸಹೋದರ ಡಿಕೆ ಸುರೇಶ್ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಹಲವರ ವಿಚಾರಣೆ ನಡೆದಿದೆ. ಇದೀಗ ಇಡಿ ಅಧಿಕಾರಿಗಳು ಡಿಕೆಶಿ ಪತ್ನಿ ಉಷಾ ಹಾಗೂ ತಾಯಿ ಗೌರಮ್ಮ ಅವರಿಗೂ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಿದ್ದಾರೆ.
ದೆಹಲಿಯ ಜಾರಿ ನಿರ್ದೇಶನಾಲಯ ಕಚೇರಿಗೆ ಅಕ್ಟೋಬರ್ 17ರ ಗುರುವಾರ ವಿಚಾರಣೆಗೆ ಬರುವಂತೆ ಡಿಕೆಶಿ ಪತ್ನಿ ಉಷಾ ಅವರಿಗೆ ತಿಳಿಸಿದ್ದಾರೆ. ಡಿಕೆಶಿ ತಾಯಿ ಗೌರಮ್ಮ ನಾಳೆ ಅಂದ್ರೆ, ಮಂಗಳವಾರ ಇಡಿ ಕಚೇರಿಗೆ ಹೋಗಬೇಕಿದೆ.
ಗೌರಮ್ಮ ಅವರ ಖಾತೆಯಿಂದ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿದೆ. ಗೌರಮ್ಮ, ಡಿಕೆಶಿ ಹಾಗೂ ಡಿಕೆ ಸುರೇಶ್ ನಡುವೆ ಹಣದ ವ್ಯವಹಾರ ನಡೆದಿದೆ. ಇದರ ಜೊತೆಗೆ ಗೌರಮ್ಮ ಹಾಗೂ ಡಿಕೆಶಿ ಪುತ್ರಿ ಐಶ್ವರ್ಯ ನಡುವೆಯೂ ಹಣಕಾಸಿನ ವ್ಯವಹಾರ ನಡೆದಿರೋದು ತನಿಖೆಯಲ್ಲಿ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಗೌರಮ್ಮ ವಿಚಾರಣೆ ನಡೆಯಲಿದೆ. ಈ ನಡುವೆ, ಡಿಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ಕೂಡ ನಾಳೆ ನಡೆಯಲಿದ್ದು, ಜೈಲೋ ಬೇಲೋ ಅನ್ನೋದು ಕೂಡ ನಾಳೆ ನಿರ್ಧಾರವಾಗಲಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?