International News
18 ದೇಶಗಳಲ್ಲಿ ಶುರುವಾಗಿದೆ ಆರ್ಥಿಕ ಹಿಂಜರಿತ
ಇಂಗ್ಲೆಂಡ್, ಜಪಾನ್ ಹಾದಿಯಲ್ಲಿ 18 ದೇಶಗಳು ಆರ್ಥಿಕ ಹಿಂಜರಿತದ ಭೀತಿ ಎದುರಿಸುತ್ತಿವೆ. ಈ 18 ದೇಶಗಳ ಪೈಕಿ ಬಹುತೇಕ ದೇಶಗಳು ಯುರೋ ಒಕ್ಕೂಟಕ್ಕೆ ಸೇರಿವೆ. ಡೆನ್ಮಾರ್ಕ್, ಲಕ್ಸೆಂಬರ್ಗ್, ಬಹ್ರೈನ್, ಕೆನಡಾ, ದಕ್ಷಿಣ ಆಫ್ರಿಕಾ ಸೇರಿ 14 ದೇಶಗಳು ಆರ್ಥಿಕ ಹಿಂಜರಿತದ ಭೀತಿ ಎದುರಿಸುತ್ತಿವೆ. ಜರ್ಮನಿ ಈಗಾಗಲೇ ಶೇಕಡ 0.3ರಷ್ಟು ಜಿಡಿಪಿ ಕುಸಿತ ಕಂಡಿದೆ. ಯುರೋ ಒಕ್ಕೂಟದ ಅತ್ಯಂತ ದೊಡ್ಡ ಆರ್ಥಿಕತೆಯಾದ ಜರ್ಮನಿ ಜಿಡಿಪಿ ಕುಸಿತ ಕಂಡಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ.
ಭಾರತಕ್ಕೆ ಕಾದಿದೆಯಾ ಆರ್ಥಿಕ ಹಿಂಜರಿತದ ಭೀತಿ?
ಆಧುನಿಕ ಯುಗದಲ್ಲಿ ಜಗತ್ತು ಸಣ್ಣ ಹಳ್ಳಿಯ ರೀತಿ ಬದಲಾಗಿದೆ. ಜಗತ್ತಿನಲ್ಲಿ ಆಗುವ ಪ್ರತಿಯೊಂದು ಪರಿಣಾಮಗಳು ಸಹ ಎಲ್ಲ ದೇಶಗಳ ಮೇಲೆ ಪ್ರಭಾವ ಬೀರುತ್ತವೆ. ಯುರೋ ಒಕ್ಕೂಟದಲ್ಲಿ ಆರ್ಥಿಕ ಹಿಂಜರಿತ ಶುರುವಾಗಿರುವುದರಿಂದ ಭಾರತದ ಆರ್ಥಿಕತೆಯ ಮೇಲೂ ಪ್ರಭಾವ ಬೀರಲಿದೆ. ಭಾರತದ ಮಾಹಿತಿ ತಂತ್ರಜ್ಞಾನ ಉದ್ಯಮದ ರಫ್ತಿನಲ್ಲಿ ಇಳಿಕೆಯಾಗುವ ಸಂಭವ ಇದೆ.
ಇದರ ಜೊತೆಗೆ ಆಮದಾಗುವ ವಸ್ತುಗಳ ಬೆಲೆ ಹೆಚ್ಚಳದಿಂದ ಭಾರತದ ಆರ್ಥಿಕತೆಯ ಮೇಲೆ ಹೆಚ್ಚಿನ ಒತ್ತಡ ಬೀರಲಿದೆ. ಇಷ್ಟಾದರೂ ಭಾರತದಲ್ಲಿ ಹೆಚ್ಚಿನ ಜನ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿರುವುದರಿಂದ ಭಾರತದ ಆರ್ಥಿಕತೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?