Featured
ಮಟನ್ ತಿನ್ನೋದ್ರಿಂದ ಕ್ಯಾನ್ಸರ್ ಬರುತ್ತೆ : ಕಾಯಿಲೆ ಬಾರದೇ ಇರಲು ಏನ್ಮಾಡಬೇಕು.?
ರೈಸಿಂಗ್ ಕನ್ನಡ : ಕ್ಯಾನ್ಸರ್ ಹಲವು ವಿಧಗಳಲ್ಲಿ ಬರುತ್ತೆ. ಕ್ಯಾನ್ಸರ್ ಕೂಡ ವಿವಿಧ ರೀತಿಯಲ್ಲೇ ಇದೆ. ಇದರಲ್ಲಿ ದೊಡ್ಡ ಕರುಳಿಗೆ ಬರುವ ಕ್ಯಾನ್ಸರ್ ಕೂಡ ಒಂದು. ಇದನ್ನ ಕೊಲೊರೆಕ್ಟಲ್ ಕ್ಯಾನ್ಸರ್ ಅಂತ ಕರೀತಾರೆ. ಇದೇನಾದ್ರೂ ಬಂದ್ರೆ, ದೊಡ್ಡ ಕರುಳು ಬೆಳವಣಿಗೆಯಲ್ಲಿ ಬದಲಾವಣೆ ಆಗುತ್ತೆ. ತೂಕ ಕಡಿಮೆ ಆಗುತ್ತೆ. ಸುಸ್ತು, ಅಲಸ್ಯ ಹೆಚ್ಚಾಗುತ್ತೆ. ಜೊತೆಗೆ ಮೂತ್ರದಲ್ಲಿ ರಕ್ತ ಬರಲು ಶುರುವಾಗಿದೆ. ಈ ರೀತಿಯಾ ಯಾವುದೇ ಲಕ್ಷಣಗಳು ಇದ್ರೆ, ಈಗಲೇ ಜಾಗೃತಿಯಾದ್ರೆ ಒಳ್ಳೇದು.
ದೊಡ್ಡ ಕರುಳಿನ ಕ್ಯಾನ್ಸರ್ ಬರೋದು ಪ್ರಮುಖವಾಗಿ ಆಹಾರ ಪದ್ಧತಿಯಿಂದ ಅನ್ನೋದು ಗೊತ್ತಾಗಿದೆ. ಅದರಲ್ಲೂ ಮಾಂಸ ಸೇವನೆ ಮಾಡೋವ್ರಿಗೆ ಈ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಅಂತಾರೆ ತಜ್ಞರು. ಪ್ರಾಣಿ ಮಾಂಸ, ಫ್ರೈ, ಆಯಿಲ್, ಹೆಚ್ಚು ಸ್ಪೈಸಿ ತಿನ್ನೋದ್ರಿಂದ ಈ ಕ್ಯಾನ್ಸರ್ ಬರಬಹುದು. ಕ್ಯಾನ್ಸರ್ ವಾಸಿ ಮಾಡಬಹುದಾದರೂ, ಮೊದಲ ಹಂತದಲ್ಲಿ ಮಾತ್ರ ಸಾಧ್ಯವಾಗುತ್ತೆ. ರೆಡಿಯೋ ಥೆರಫಿ, ಕಿಮೋ ಥೆರಫಿ ಮಾಡಬೇಕಾಗುತ್ತೆ. ಆದ್ರೆ, ಮೊದಲ ಹಂತ ದಾಟಿದ್ರೆ, ಚಿಕಿತ್ಸೆ ಕಷ್ಟಸಾಧ್ಯ.
ಎಷ್ಟು ಮಾಂಸ ತಿಂದ್ರೆ ಪ್ರಮಾದ..?
ವಿಶ್ವ ಆರೋಗ್ಯ ಸಂಸ್ಥೆ ಲೆಕ್ಕಗಳ ಪ್ರಕಾರ, ಒಬ್ಬ ಮನುಷ್ಯ ಒಂದು ದಿನಕ್ಕೆ 50 ಗ್ರಾಂಗಿಂತಲೂ ಹೆಚ್ಚು ಮಾಂಸ ತಿನ್ನಬಾರದು. ಆದ್ರೆ, ಒಂದು ವಾರಕ್ಕೆ 350 ಗ್ರಾಮ್ ಮಾಂಸ ಮಾತ್ರ ತಿನ್ನಬೇಕು. ವಾರಕ್ಕೆ 350 ಗ್ರಾಂಗಿಂತಲೂ ಹೆಚ್ಚು ಮಾಂಸ ಸೇವನೆ ಮಾಡಿದ್ರೆ, ಅಂಥವರಿಗೆ ಸಮಸ್ಯೆ ಆಗೋ ಸಾಧ್ಯತೆ ಹೆಚ್ಚಿರುತ್ತೆ. ಅದರಲ್ಲೂ ಪ್ರಮುಖವಾಗಿ ಫ್ರೈ ಮಾಡಿರೋ ಮಾಂಸ ತಿನ್ನಬಾರದು. ಮನೆಯಲ್ಲಿ ಮಾಂಸ ಮಾಡಿಕೊಂಡ್ರೆ ಒಳ್ಳೇದು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?