Featured
ಪ್ರತಿದಿನ ಮೂಸಂಬಿ ತಿನ್ನಿರಿ – ರೋಗಗಳಿಂದ ದೂರ ಇರಿ!
ರೈಸಿಂಗ್ ಕನ್ನಡ:
ಮೂಸಂಬಿ ಹಣ್ಣಿನಲ್ಲಿರುವ ವಿಟಮನ್ ಸಿ ಮತ್ತು ಎ ರಕ್ತದಲ್ಲಿರುವ ಬಿಳಿ ಜೀವಕೋಶಗಳನ್ನು ಉತ್ವಾದಿಸಲು ಉತ್ತೇಜಿಸುತ್ತದೆ. ಇದರಿಂದ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಸುಧಾರಿಸುತ್ತದೆ.
ಮಳೆಗಾಲದ ಸಮಯದಲ್ಲಿ ಶೀತ,ಜ್ವರ,ಅಸ್ವಸ್ಥತೆ, ಅತಿಸಾರ ಮುಂತಾದ ಸಮಸ್ಯೆಗಳು ಕಾಣಿಸುತ್ತದೆ, ಇದಕ್ಕೆ ಮುಖ್ಯ ಕಾರಣ ಮಾನ್ಸೂನ್ ಸಂಧರ್ಭದಲ್ಲಿ ನಾವು ಸೇವಿಸುತ್ತಿರುವ ಆಹಾರ ಮೂಲ ಕಾರಣವಾಗುತ್ತದೆ.
ದಿನನಿತ್ಯದ ಆಹಾರಗಳ ಬಗ್ಗೆ ಕಾಳಜಿವಹಿಸಿದರೆ ಮಾನ್ಸೂನ್ ನಲ್ಲಿ ಉಂಟಾಗುವ ಕಾಯಿಲೆಗಳಿಂದ ಪಾರಾಗಬಹುದು.
ಮಳೆಗಾಲದಲ್ಲಿ ಸಮತೋಲಿತ ಆಹಾರಗಳನ್ನು ಸೇವಿಸಲು ಪ್ರಯತ್ನಿಸಿ. ಆಹಾರಗಳೊಂದಿಗೆ ಹಣ್ಣುಗಳನ್ನು ಸೇವಿಸುವುದು ಅಭ್ಯಾಸ ಮಾಡಿಕೊಳ್ಳಬೇಕು. ಪ್ರತಿನಿತ್ಯ ಕನಿಷ್ಟ ಮೂರು ಹಣ್ಣುಗಳನ್ನು ತಿನ್ನಲು ಪ್ರಯತ್ನಿಸಿದರೆ,ಅದು ಸಾಧ್ಯವಾಗದೇ ಇದ್ದರೆ ಎರಡು ಮೂಸಂಬಿ ಹಣ್ಣುಗಳನ್ನಾದರೂ ತಿನ್ನಬೇಕು.
ಮಾನ್ಸೂನ್ ಕಾಲದಲ್ಲಿ ಮೂಸಂಬಿ ಹಣ್ಣುಗಳು ಹೆಚ್ಚಾಗಿ ಸಿಗುತ್ತವೆ. ವಿಟಮಿನ್ ಎ ಮತ್ತು ಬಿ ಕಾಂಪ್ಲೆಕ್ಸ್ , ಪ್ಲಾವೊನೈಡ್, ಅಮೈನೋ ಆ್ಯಸಿಡ್ , ಕ್ಯಾಲ್ಸಿಯಂ, ಅಯೋಡಿನ್, ಫಾಸ್ಪರಸ್,ಸೋಡಿಯಂ,ಮ್ಯಾಂಗನೀಸ್ ಮೊದಲಾದ ಅಂಶಗಳು ಮೂಸಂಬಿಯಲ್ಲಿ ಹೇರಳವಾಗಿದೆ. ಅಂಟಿ-ಆ್ಯಕ್ಸಿಡೆಂಟ್ ಅಂಶಗಳು ಇದರಲ್ಲಿ ಹೇರಳವಾಗಿರುವುದರಿಂದ ಮಳೆಕಾಲದ ಉಪಯುಕ್ತ ಹಣ್ಣುಗಳಲ್ಲಿ ಮೂಸಂಬಿಗೆ ಮೊದಲ ಸ್ಥಾನವಿದೆ.
ಈ ಹಣ್ಣಿನಲ್ಲಿ ಪೊಟಾಶಿಯಂ, ಫೊಲಿಕ್ ಆ್ಯಸಿಡ್, ಕ್ಯಾಲ್ಸಿಯಂ ಕೊಲೆಸ್ಟ್ರಾಲ್ ಅಂಶಗಳಿದ್ದು ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ರಕ್ತದ ಜೀವಕೋಶಗಳಲ್ಲಿ ಎಲೆಕ್ಟ್ರೋಲೈಟ್ ಸಮತೋಲನ ಕಾಪಾಡಿಕೊಳ್ಳುವಲ್ಲಿ ಈ ಅಂಶಗಳು ಸಹಾಯಕವಾಗಿದೆ. ಈ ಹಣ್ಣಿನಲ್ಲಿರುವ ಪೊಟಾಶಿಯಂ ಮೆದುಳಿಗೆ ಆಮ್ಲಜನಕವನ್ನು ಪೂರೈಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಮೂಸಂಬಿ ಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಎ ರಕ್ತದಲ್ಲಿರುವ ಬಿಳಿ ಜೀವಕೋಶಗಳನ್ನು ಉತ್ವಾದಿಸಲು ಉತ್ತೇಜಿಸುತ್ತದೆ. ಇದರಿಂದ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಸುಧಾರಿಸುತ್ತದೆ. ಹಾಗೆಯೇ ದೇಹದಲ್ಲಿ ಕಬ್ಬಿನಾಂಶವನ್ನು ಹೆಚ್ಚಿಸಲು ಮೂಸಂಬಿ ಹಣ್ಣಿನ ಸೇವನೆ ಉತ್ತಮ.
You may like
ಮಗುವಿನ ವಿಚಾರಕ್ಕೆ ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್!
ತೂಕ ಇಳಿಸಬೇಕೆಂಬ ದೊಡ್ಡ ಸಮಸ್ಯೆಗೆ ಇದುವೇ ಪರಿಹಾರ; ಹೀಗೆ ಮಾಡಿದ್ರೆ ಸ್ಲಿಮ್ ಆಗೋದು ಪಕ್ಕಾ!
RCB ತಂಡದಲ್ಲಿ ಅಬ್ಬರಿಸುತ್ತಿದ್ದಾನೆ ಸೆಹ್ವಾಗ್ ಸೋದರಳಿಯ!
ಬಿಳಿ ಅಥವಾ ಗುಲಾಬಿ ಇವೆರಡರಲ್ಲಿ ಯಾವ ಬಣ್ಣದ ಸೀಬೆಹಣ್ಣು ಆರೋಗ್ಯಕ್ಕೆ ಬೆಸ್ಟ್!
ಮನುಷ್ಯನಿಗೆ ಹಂದಿಯ ಕಿಡ್ನಿಯನ್ನು ಕಸಿ ಮಾಡಿದ ವೈದ್ಯರು
ಐಸ್ ಕ್ರೀಂಗೆ ವೀರ್ಯ: ತೂ ಅಸಹ್ಯ..!