Featured
ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!
ಆಯುರ್ವೇದ ಭಾರತೀಯ ಜೀವನದ ಒಂದು ಭಾಗ. ಯಾವ ಕಾಯಿಲೆ ಬೇಕಾದರೂ ಇರಲಿ ಮೊದಲು ನೆನಪಾಗುವುದೇ ಮನೆ ಮದ್ದು. ಮನೆಯಲ್ಲೇ ಇರುವ ವಸ್ತುಗಳಿಂದ ತಯಾರಿಸುವ ಮದ್ದಿನ ಸಾಕಷ್ಟು ಶಕ್ತಿ ಅಡಗಿದೆ. ರೋಗವನ್ನು ಕೊಲ್ಲುವ ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸುವ ತಾಕತ್ತು ಮನೆಮದ್ದಿಗಿದೆ. ಕೊರೊನಾ ವಿರುದ್ಧ ಹೋರಾಟ ಮಾಡುವ ಈ ಸಮಯದಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿಗಳು ಹೆಚ್ಚಾಗಿ ಇರಬೇಕು. ಇದಕ್ಕಾಗಿ ಪುರಾಣಿಕ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಅನವಂಶೀಯ ವೈದ್ಯರ ಪರಿಷತ್ ಮನೆಯಲ್ಲೇ, ಮನೆಯಲ್ಲೇ ಸಿಗುವ ವಸ್ತುಗಳಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೇಗೆ ಹೆಚ್ಚಿಸಿಕೊಡಬಹುದು ಎಂದು ಹೇಳಿಕೊಡುತ್ತಿದೆ.
ಬೇಕಾಗಿರುವ ಸಾಮಾಗ್ರಿಗಳು
- ಸೋಯಾಬೀನ್ 200 ಗ್ರಾಂ
- ಅಶ್ವಗಂಧ ಬೇರು 4
- ಕಲ್ಲುಸಕ್ಕರೆ
- ಒಣದ್ರಾಕ್ಷಿ 50 ಗ್ರಾಂ
- ಬಾದಾಮಿ 50 ಗ್ರಾಂ
- ಗೋಡಂಬಿ 50ಗ್ರಾಂ
ತಯಾರಿಸುವುದು ಹೇಗೆ..?
ಮೇಲಿನ ಎಲ್ಲಾ ವಸ್ತುಗಳನ್ನು ಬಿಸಿನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಆನಂತರ ಒಂದು ಪಾತ್ರೆಯಲ್ಲಿ 2 ಲೀಟರ್ ನೀರು ಮತ್ತು 2 ಲೀಟರ್ ಹಾಲು ಹಾಕಿಕೊಂಡು ಸೋಯಾಬಿನ್, ಅಶ್ವಗಂಧ ಬೇರು ಮತ್ತು ಕಲ್ಲುಸಕ್ಕರೆಯನ್ನು ಹಾಕಿ ಬೇಯಿಸಿಕೊಳ್ಳಬೇಕು. ಸುಮಾರು ಹೊತ್ತಿನ ಬಳಿಕ ಇದು ಗಟ್ಟಿಯಾಗುತ್ತದೆ. ಆಗ ಒಣದ್ರಾಕ್ಷಿ, ಬಾದಾಮಿ ಮತ್ತು ಗೋಡಂಬಿಯನ್ನು ಸೇರಿಸಿಕೊಂಡು ಚೆನ್ನಾಗಿ ಕಲಸಿಕೊಳ್ಳಬೇಕು. ಕೆಲ ಸಮಯದ ನಂತರ ಇದು ಬಿಸ್ಕೆಟ್ ವಾಸನೆಯನ್ನು ಸೂಸುತ್ತದೆ. ಆಗ ಇದನ್ನು ಬಿಸಿಲಿನಲ್ಲಿ ಒಣಗಲು ಇಡಿ. ಇ ಗಟ್ಟಿಯನ್ನು ಪೌಡರ್ ಮಾಡಿಕೊಂಡು ಅಥವಾ ಇಡಿಯಾಗಿ ಪ್ರತಿದಿನ 2 ರಿಂದ 3 ಬಾರಿ ಸೇವಿಸಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಸೂಚನೆ: ಸಕ್ಕರೆ ಕಾಯಿಲೆ/ ಶುಗರ್ ಪೇಷಂಟ್ಗಳು ಕಲ್ಲುಸಕ್ಕರೆಯನ್ನು ಉಪಯೋಗಿಸದೆಯೇ, ಪಾಕ ತಯಾರು ಮಾಡಿಕೊಳ್ಳಬೇಕು.
ಏನು ಲಾಭ..?
ಸೊಯಾಬಿನ್ ಹೈ ಪ್ರೊಟಿನ್ ಅನ್ನು ದೇಹಕ್ಕೆ ಒದಗಿಸಿಕೊಡುತ್ತದೆ. ಅಶ್ವಗಂಧ ನರ ದೌರ್ಬಲ್ಯ ಮತ್ತು ಲೈಂಗಿಕ ಸಮಸ್ಯೆಗಳಿಗೆ ರಾಮಬಾಣ. ಬಾದಮಿ, ಗೋಡಂಬಿ ಮತ್ತು ಒಣ ದ್ರಾಕ್ಷಿಯಿಂದ ದೇಹಕ್ಕೆ ಸಾಕಷ್ಟು ವಿಟಮಿನ್ಗಳು ಸಿಗುತ್ತವೆ.
ಆಯುರ್ವೇದ ಚಿಕಿತ್ಸೆ, ಮದ್ದು ಹಾಗೂ ಮನೆಮದ್ದಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಳಾಸವನ್ನು ಸಮಪರ್ಕಿಸಿ.
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?
ಪ್ರಭಾಸ್ ಫ್ಯಾನ್ಸ್ ದಿಲ್ ಖುಷ್ : ಈ ವರ್ಷ ರಾಧೆ ಶ್ಯಾಮ್.. ಮುಂದಿನ ವರ್ಷ ಸಲಾರ್ ರಿಲೀಸ್ಗೆ ಮುಹೂರ್ತ ಫಿಕ್ಸ್