ಕ್ರೀಡೆ
ಇಂಗ್ಲೆಂಡ್ಗೆ ಆರಂಭಿಕ ಆಘಾತ : ನೆರವಿಗೆ ಬಂದ ಜೋ ರೂಟ್

ರಾಂಚಿಯಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ಆರಂಭಿಕ ಆಘಾತ ಕಂಡಿತ್ತು. ಭಾರತದ ಪರ ಪದಾರ್ಪಣೆ ಮಾಡಿದ ಆಕಾಶ್ ದೀಪ್ ಇಂಗ್ಲೆಂಡ್ ತಂಡದ ಪ್ರಮುಖ ಮೂರು ವಿಕೆಟ್ಗಳನ್ನು ಉರುಳಿಸಿ ಮಿಂಚಿದರು. ಇವರಿಗೆ ಉತ್ತಮ ನೆರವು ನೀಡಿದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಎರಡು ವಿಕೆಟ್ಗಳನ್ನು ಪಡೆದರೆ ಸ್ಪಿನ್ನರ್ಗಳಾದ ಅಶ್ವಿನ್ ಮತ್ತು ಜಡೇಜಾ ತಲಾ ಒಂದು ವಿಕೆಟ್ ಉರುಳಿಸಿದ್ದಾರೆ.
ಒಂದು ಹಂತದಲ್ಲಿ 112 ರನ್ಗೆ 5 ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಇಂಗ್ಲೆಂಡ್ಗೆ ಆಸರೆಯಾದ ಜೋ ರೂಟ್, ಆರನೇ ವಿಕೆಟ್ಗೆ ಬೆನ್ ಫೋಕ್ಸ್ ಜೊತೆ ಸೇರಿ ಶತಕದ ಜೊತೆಯಾಟವಾಡಿದರು. ಇದರಿಂದಾಗಿ ಇಂಗ್ಲೆಂಡ್ ಸಂಕಷ್ಟದಿಂದ ಪಾರಾಗಿದೆ. ಆರಂಭದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಭಾರತೀಯ ಬೌಲರ್ಗಳು ಚೆಂಡ ಹಳೆಯದಾಗುತ್ತಿದ್ದಂತೆ ಲಯ ಕಳೆದುಕೊಂಡ ಪರಿಣಾಮ ಇಂಗ್ಲೆಂಡ್ ಮೊದಲ ದಿನದಾಟದ ಅಂತ್ಯದ ವೇಳೆಗೆ 7 ವಿಕೆಟ್ ಕಳೆದುಕೊಂಡು 302 ರನ್ ಗಳಿಸಿದೆ. ಶತಕ ಪೂರೈಸಿ ಔಟ್ ಆಗದೇ ಉಳಿದಿರುವ ಜೋ ರೂಟ್ ಎರಡನೇ ದಿನ ಒಲ್ಲಿ ರಾಬಿನ್ಸನ್ ಜೊತೆ ಆಟ ಮುಂದುವರಿಸಲಿದ್ದಾರೆ.
ಇಷ್ಟು ದಿನ ಆಕ್ರಮಣಕಾರಿ ಆಟ ಅಳವಡಿಸಿಕೊಂಡು ಕಡಿಮೆ ಮೊತ್ತಕ್ಕೆ ವಿಕೆಟ್ ಒಪ್ಪಿಸುತ್ತಿದ್ದ ಜೋ ರೂಟ್ ತಮ್ಮ ಹಿಂದಿನ ರಕ್ಷಣಾತ್ಮಕ ಆಟದ ಮೊರೆ ಹೋದ ಪರಿಣಾಮ ಇಂಗ್ಲೆಂಡ್ ಉತ್ತಮ ಮೊತ್ತ ಕೂಡಿಸಲು ನೆರವಾಗಿದೆ.

You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?