Featured
ಉತ್ತರ ಪ್ರವಾಹ: ಹಿಂದೂ ಕುಟುಂಬಕ್ಕೆ ಆಸರೆಯಾದ ಮಸೀದಿ: ಭಾವೈಕ್ಯತೆಗೆ ಮಾದರಿಯಾದ ವಿಜಯಪುರ
ರೈಸಿಂಗ್ ಕನ್ನಡ:
ವಿಜಯಪುರ :
ಪ್ರವಾಹದಲ್ಲಿ ಬೀದಿಪಾಲಾಗಿದ್ದ ಕುಟುಂಬಕ್ಕೆ ಮಸೀದಿಯೇ ಆಸರೆಯಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದ್ದು ಭಾವೈಕ್ಯತೆಗೆ ಮಾದರಿಯಾಗಿದೆ.
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹೊಳೆಸಂಕ ಗ್ರಾಮ ಪ್ರವಾಹಕ್ಕೆ ತುತ್ತಾಗಿದೆ. ಭೀಮೆಯ ಪ್ರವಾಹದಿಂದ ನಲುಗಿದ್ದ ಹೊಳೆಸಂಕ ಗ್ರಾಮ ಜಲಾವೃತವಾಗಿದೆ.
ಇದರ ಪರಿಣಾಮ ನೆರೆ ನಿಂತರೂ ಮನೆಯಲ್ಲಿ ಕೆಸರು ತುಂಬಿ ಬದುಕೇ ಮೂರಾಬಟ್ಟೆಯಾಗಿದೆ. ಪ್ರವಾಹದಲ್ಲಿ ಮನೆ ಜಲಾವೃತವಾಗಿರುವುದರಿಂದ ಇಲ್ಲಿನ ಹಿಂದೂ ಕುಟುಂಬ ಬೀದಿಗೆ ಬಂದಿದೆ.
ಹಿಂದು ಕುಟುಂಬಕ್ಕೆ ಆಶ್ರಯಕೊಟ್ಟ ಇಲ್ಲಿನ ಜಾಮಿಯಾ ಮಸೀದಿ ಆಶ್ರಯಕೊಟ್ಟಿದೆ. ಸೌರಾಬಾಯಿ ಕಾಂಬಳೆ ಎನ್ನುವ ಮಹಿಳೆಯ ಬಡಕುಟುಂಬ ಕಳೆದ ನಾಲ್ಕು ದಿನಗಳಿಂದ ಇಲ್ಲಿನ ಜಾಮಿಯಾ ಮಸೀದಿಯಲ್ಲಿ ವಾಸಮಾಡುತ್ತಿದೆ. ಜಾಮಿಯಾ ಮಸೀದಿ ಪ್ರಾರ್ಥನೆ ಮಾಡುವ ಮಸೀದಿಯನ್ನೆ ಉಳಿದುಕೊಳ್ಳಲು ಕೊಟ್ಟು ಮಾನವೀಯತೆ ಮೆರೆದಿದೆ.
ನಾಲ್ಕು ಜನರನ್ನ ಹೊಂದಿರೋ ಸೌರಾಬಾಯಿ ಕುಟುಂಬ ಮಸೀದಿಯಲ್ಲೇ ಅಡುಗೆ ಮಾಡಿ ಬದುಕು ನಡೆಸ್ತಿದೆ. ಈ ಹೊಳೆಸಂಕ ಗ್ರಾಮ ಭಾವೈಕ್ಯತೆಗೆ ಮಾದರಿಯಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?