International News
ಕೊಪ್ಪಳದಲ್ಲಿ ನೀರಿನ ಬರ : ಶಾಲೆ ಬಿಟ್ಟರೂ ಕೊಡ ಹಿಡಿದು ನಿಂತರು
ಕೊಪ್ಪಳ: ಬೇಸಿಗೆ ಆರಂಭದಲ್ಲಿಯೇ ಕೊಪ್ಪಳ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಕೊಳವೆಬಾವಿಗಳು ಬತ್ತುತ್ತಿದ್ದು ಒಂದು ಬಿಂದಿಗೆ ನೀರಿಗಾಗಿಯೂ ಜನರು ಪರದಾಡುತ್ತಿದ್ದಾರೆ. ಓದಿಗಿಂತ ಹನಿ ನೀರು ಮುಖ್ಯ ಎಂದು ಶಾಲೆ ಬಿಟ್ಟು ನೀರು ಹಿಡಿಯಲು ಕೆಲ ಮಕ್ಕಳು ತಮ್ಮ ಓದನ್ನೇ ತ್ಯಾಗ ಮಾಡುವಂತಹ ಸ್ಥಿತಿ ಕೊಪ್ಪಳದಲ್ಲಿ ನಿರ್ಮಾಣವಾಗಿದೆ. ಹೆತ್ತವರು ಕೂಲಿ ಕೆಲಸಕ್ಕೆ ಹೋದ್ರೆ, ಮಕ್ಕಳು ನೀರು ಹಿಡಿಯೋ ಅನಿವಾರ್ಯತೆ ಎದುರಾಗಿದೆ.
ನೀರಿನ ಸಮಸ್ಯೆಯಿಂದ ಮಕ್ಕಳು ಸರಿಯಾಗಿ ಓದಲಿಕ್ಕಾಗದೇ ವಿಧ್ಯೆಯಿಂದ ವಂಚಿತರಾಗುತ್ತಿದ್ದಾರೆ. ಮಕ್ಕಳು, ಮಹಿಳೆಯರು ಬಿಂದಿಗೆ ನೀರಿಗಾಗಿ ಗಂಟೆಗಟ್ಟಲೆ ಕಾಯುತ್ತಿದ್ದಾರೆ. ಕೊಪ್ಪಳ ತಾಲೂಕಿನ ಇಂದಿರಾ ನಗರ ತಾಂಡಾದಲ್ಲಿ ನೀರಿಗಾಗಿ ಪರಿತಪಿಸುವಂತಹ ಸ್ಥಿತಿ ಇದೆ. ತಾಂಡಾದಲ್ಲಿ ಸಾವಿರಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ಆದರೆ ತಾಂಡಾಕ್ಕೆ ನೀರು ಪೂರೈಕೆ ಮಾಡುತ್ತಿದ್ದ ಕೊಳವೆ ಬಾವಿಗಳು ಬತ್ತಿವೆ.
ಇದೀಗ ಪರ್ಯಾಯವಾಗಿ ನೀರು ಪೂರೈಕೆ ಮಾಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ತಾಂಡಾ ನಿವಾಸಿಗಳು ಖಾಸಗಿ ವ್ಯಕ್ತಿ ಬಳಿ ಕಾದು ಕಾದು ನೀರು ತಗೆದುಕೊಂಡು ಹೋಗುತ್ತಿದ್ದಾರೆ. ಕರೆಂಟ್ ಇದ್ದಾಗ ಬೇರೆಲ್ಲ ಕೆಲಸ ಬಿಟ್ಟು ನೀರು ಹಿಡಿಯಲು ಓಡುವಂತಾಗಿದೆ.
ತಾಂಡಾದಲ್ಲಿ ಮನೆ ಮನೆಗೆ ಗಂಗೆ ಯೋಜನೆಯಡಿ ನಲ್ಲಿ ಸಂಪರ್ಕ ಇದೆ. ಆದ್ರೆ ಜಲಜೀವನ ಮಿಷನ ಯೋಜನೆ ಕೈಕೊಟ್ಟಿದೆ. ನಲ್ಲಿ ಸಂಪರ್ಕ ಕೊಟ್ಟರು ಇಲ್ಲಿವರಗೆ ಹನಿ ನೀರು ಕೂಡ ಬಂದಿಲ್ಲ ಎಂದು ತಾಂಡಾ ನಿವಾಸಿಗಳು ಆಕ್ರೋಶ ಹೊರ ಹಾಕಿದ್ದಾರೆ. ಹಾಗೂ ತಮಗೆ ಶಾಶ್ವತ ನೀರು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?