Featured
ಐಪಿಎಲ್ ಟೈಟಲ್ ಪ್ರಾಯೋಜಕತ್ವ ಪಡೆದ ಡ್ರೀಮ್ ಇಲೆವೆನ್ – ಕೇವಲ ಒಂದು ವರ್ಷಕ್ಕೆ ನೀಡಿದ ಹಣ ಎಷ್ಟು ಗೊತ್ತಾ?


ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಐಪಿಎಲ್13ನೇ ಆವೃತ್ತಿಯ ಸಿದ್ದತೆಗಳು ಸಮರೋಪಾದಿಯಲ್ಲಿ ನಡೆಯುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಚೀನಾ ಮೂಲಕ ಟೈಟಲ್ ಸ್ಪಾನ್ಸರ್ ವಿವೋವನ್ನ ಬಿಸಿಸಿಐ ಉದ್ದೇಶಪೂರ್ವಕವಾಗಿ ಕೈಬಿಟ್ಟಿತ್ತು. ಭಾರತ ಚೀನಾ ಗಡಿ ವಿವಾದದಿಂದಾಗಿ, ವಿವೋ ಟೈಟಲ್ ಸ್ಪಾನ್ಸರ್ ಅನ್ನ ಈ ಆವೃತ್ತಿಗೆ ಕೈಬಿಡಲಾಗಿತ್ತು.
ಹೊಸ ಟೈಟಲ್ ಸ್ಪಾನ್ಸರ್‌ಗಾಗಿ ಬಿಡ್ಡಿಂಗ್ ಪ್ರಕ್ರಿಯೆ ನಡೆಸಿದ ಬಿಸಿಸಿಐ ಅಂತಿಮವಾಗಿ ಟೈಟಲ್ ಪ್ರಾಯೋಜಕತ್ವದ ಹಕ್ಕನ್ನ ಆನ್‌ಲೈನ್ ಗೇಮಿಂಗ್ ಕಂಪೆನಿ ಡ್ರೀಮ್ ಇಲೆವೆನ್‌ಗೆ ನೀಡಿದೆ.
ಒಂದು ವರ್ಷದ ಟೈಟಲ್ ಪ್ರಾಯೋಜಕತ್ವಕ್ಕಾಗಿ, ಬರೋಬ್ಬರಿ 222 ಕೋಟಿ ಹಣವನ್ನ ನೀಡಿ ಹಕ್ಕನ್ನ ಖರೀದಿಸಿದೆ. ಇದಕ್ಕಾಗಿ ನಡೆದ ಭಾರೀ ಪೈಪೋಟಿಯಲ್ಲಿ ಕೆಲ ಕಂಪೆನಿಗಳು 220 ಕೋಟಿವರೆಗೂ ಬಿಡ್ಡಿಂಗ್ ಕರೆದಿವೆ. ಆದ್ರೆ, ಅಂತಿಮವಾಗಿ ಡ್ರೀಮ್ ಇಲೆವೆನ್ ಇದನ್ನ ತನ್ನ ತೆಕ್ಕೆಗೆ ಪಡೆದುಕೊಂಡಿದೆ.
ಟಾಟಾ ಸನ್ಸ್(180 ಕೋಟಿ), ಬೈಜೂಸ್(125 ಕೋಟಿ), ಮತ್ತು ಅನ್ ಅಕಾಡೆಮಿ(210 ಕೋಟಿ) ಕಂಪೆನಿಗಳು ಕೂಡ, ಶೀರ್ಷಿಕೆ ಪ್ರಾಯೋಕತ್ವಕ್ಕಾಗಿ ಪೈಪೋಟಿ ನಡೆಸಿದ್ದವು.
ಈ ಹಿಂದೆ ಚೀನಾದ ಮೊಬೈಲ್ ಕಂಪೆನಿ ವಿವೋ 5 ವರ್ಷಗಳ ಟೈಟಲ್ ಪ್ರಾಯೋಜಕತ್ವಕ್ಕೆ, ವರ್ಷಕ್ಕೆ 440 ಕೋಟಿಯಂತೆ ಹಣ ನೀಡಿತ್ತು. ಆದ್ರೀಗ ಡ್ರೀಮ್ ಇಲೆವೆನ್‌ಗೆ ಅರ್ಧಕ್ಕೆ ಅರ್ಧದಷ್ಟು ಹಣಕ್ಕೆ ಟೈಟಲ್ ಪ್ರಾಯೋಜಕತ್ವ ನೀಡಲಾಗಿದೆ. ಅಂದ್ರೆ, ವರ್ಷಕ್ಕೆ ಕೇವಲ 1 ವರ್ಷಕ್ಕೆ 222 ಕೋಟಿ ಹಣ ನೀಡಿ, ಅಚ್ಚರಿ ಮೂಡಿಸಿದೆ.
ಒಟ್ಟಿನಲ್ಲಿ ಟೈಟಲ್ ಪ್ರಾಯೋಜಕತ್ವದ ಸಮಸ್ಯೆ ಬಗೆಹರಿದಿದ್ದು, ಐಪಿಎಲ್ ಚಟುವಟಿಕೆಗಳು ಮತ್ತಷ್ಟು ಗರಿಗೆದರಲಿವೆ. ಇದರೊಂದಿಗೆ, ಐಪಿಎಲ್ ವೇಳಾಪಟ್ಟಿಯೂ ಶೀಘ್ರವೇ ಬಿಡುಗಡೆಗೊಳ್ಳಲಿದೆ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















