Featured
ಡಾ.ರಾಜ್ ಅಭಿಮಾನಿಗಳಿಗೆ ಸಂತಸದ ಸುದ್ದಿ – ಅಣ್ಣಾವ್ರ ಮತ್ತೊಂದು ಸಿನಿಮಾ ಹೊಸ ರೂಪದಲ್ಲಿ
![](https://risingkannada.com/wp-content/uploads/2020/07/d545522df496e96140c563ac279a6c92.gif)
ರೈಸಿಂಗ್ ಕನ್ನಡ :
ಸಿನಿಮಾ ಡೆಸ್ಕ್ :
ಕನ್ನಡದ ಖ್ಯಾತ ಚಿತ್ರನಿರ್ಮಾಣ ಸಂಸ್ಥೆ, ಶ್ರೀ ಮುನೇಶ್ವರ ಫಿಲಂಸ್ ಪ್ರೇಕ್ಷಕರಿಗೆ ರಸದೌತಣ ನೀಡೋಕೆ ಸಜ್ಜಾಗಿದೆ. ಆದ್ರೆ, ಅದಕ್ಕೆ ಕೊರೊನಾ ಸಂಕಷ್ಟ ದೂರವಾಗಬೇಕು ಅಷ್ಟೆ. ಸಂಸ್ಥೆಯ ಮಾಲೀಕರಾದ ಎಂ. ಮುನಿರಾಜುರವರು ಈ ವಿಷ್ಯವನ್ನ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ ಆ ಸಂತಸದ ವಿಷ್ಯ ಏನಪ್ಪಾ ಅಂದ್ರೆ, 1977ರಲ್ಲಿ ತೆರೆ ಕಂಡು ಗಂಧದಗುಡಿಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದ ಭಾಗ್ಯವಂತರು ಚಿತ್ರವನ್ನ ಮತ್ತೆ ಪ್ರೇಕ್ಷಕರ ಮುಂದೆ ತರೋಕೆ ಸಜ್ಜಾಗಿದ್ದಾರೆ.
![](https://risingkannada.com/wp-content/uploads/2020/07/02-0-00-00-00-1-1024x576.jpg)
ಹೊಸ ತಂತ್ರಜ್ಞಾನದಲ್ಲಿ ಸಿನಿಮಾಸ್ಕೋಪ್ 7.1-ಡಿ.ಐಯನ್ನು ಅಳವಡಿಸಿಸಲಾಗಿದೆ. ಕಿವಿಗಳಿಗೆ ಇಂಪು ಕೊಡುವಂತಹ ಸೌಂಡಿಂಗ್ ರೀತಿಯಲ್ಲಿ ತಯಾರು ಮಾಡಿದ್ದಾರೆ. ಡಾ. ರಾಜ್‌ಕುಮಾರ್ ಮತ್ತು ಬಿ.ಸರೋಜಾದೇವಿ ಅಭಿನಯದ ಈ ಚಿತ್ರ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ. ಕೌಟುಂಬಿಕ ಕಾಳಜಿಯ ಈ ಚಿತ್ರ ಈಗಿನವರಿಗೂ ಈಗಿನ ತಂತ್ರಜ್ಞಾನದಲ್ಲೇ ತಲುಪಬೇಕು ಅನ್ನೋದು ಶ್ರೀ ಮುನೇಶ್ವರ ಫಿಲಂಸ್ ಸಂಸ್ಥೆಯ ಉದ್ದೇಶವಾಗಿದೆ.
ಜೋಡಿ ಜೀವಗಳಾದ ರಾಜನ್-ನಾಗೇಂದ್ರ ಸಂಗೀತ, ಕವಿರತ್ನ ಚಿ. ಉದಯಶಂಕರ್ ಗೀತರಚನೆ ಇರೋ ಈ ಚಿತ್ರ ಮತ್ತಷ್ಟು ಕಲರ್‌ಫುಲ್ ಆಗಿಬರಲಿರೋ ಸಂಗತಿ ನಿಜಕ್ಕೂ ಖುಷಿವಿಚಾರವೇ ಸರಿ. ಕರ್ನಾಟಕದ ಹೆಮ್ಮೆಯ ಕುಳ್ಳು ದ್ವಾರಕೀಶ್ ಚಿತ್ರ ಸಂಸ್ಥೆಯಲ್ಲಿ ತಯಾರಾಗಿದ್ದ ಈ ಸೂಪರ್ ಹಿಟ್ ಚಿತ್ರ ಆದಷ್ಟು ಬೇಗ ಹೊಸ ರೂಪದರಲ್ಲಿ ಬರಲಿ ಅಂತ ಆಶಿಸೋಣ.
![](https://risingkannada.com/wp-content/uploads/2020/04/RISING-KANNADA-logo-150px.jpg)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?