Featured
ಕೊರೊನಾ ಪರೀಕ್ಷೆಯಲ್ಲಿ ಅಮೆರಿಕ-ಭಾರತ ಅಣ್ತಮ್ಮ ಇದ್ದಂಗೆ – ಡೊನಾಲ್ಡ್ ಟ್ರಂಪ್
![](https://risingkannada.com/wp-content/uploads/2020/07/trump-modi.jpg)
ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಕೋವಿಡ್ ಸೋಂಕು ಪರೀಕ್ಷೆಯಲ್ಲಿ ಅಮೆರಿಕ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಎರಡನೇ ಪ್ಲೇಸ್‌ನಲ್ಲಿ ಭಾರತವಿದೆ ಎಂದಿರುವ ಟ್ರಂಪ್, ಕೊರೊನಾ ವಿರುದ್ಧ ತನ್ನ ಆಡಳಿತ ಯಾವ ರೀತಿಯಲ್ಲಿ ಹೊರಾಡುತ್ತಿದೆ ಅನ್ನೋದ್ರ ಬಗ್ಗೆ ಮಾಹಿತಿ ನೀಡುವಾಗ ಈ ವಿಷ್ಯ ತಿಳಿಸಿದ್ರು.
ಅಲ್ಲದೇ ಕೊರೊನಾದಿಂದಾಗಿ ಕಳೆದುಕೊಂಡ ಪ್ರತಿಯೊಂದು ಅಮೂಲ್ಯ ಜೀವದ ಬಗ್ಗೆಯೂ ತಾವು ಸಂತಾಪ ವ್ಯಕ್ತಪಡಿಸಿದರು. ನಾವು ಲಸಿಕೆಯನ್ನ ಅಭಿವೃದ್ಧಿಪಡಿಸಿ, ಕೊರೊನಾವನ್ನ ಓಡಿಸುತ್ತೇವೆ ಎಂದು ಮೃತಪಟ್ಟ ಪ್ರತಿಯೊಬ್ಬರ ಗೌರವಾರ್ಥವಾಗಿ ಪ್ರತಿಜ್ಞೆ ಮಾಡಿದರು. ಲಸಿಕೆ ಕಂಡುಹಿಡಿಯುವ ದಿಕ್ಕಿನಲ್ಲಿ ಅಮೆರಿಕಾ ಗಮನಾರ್ಹ ಸಾಧನೆ ಮಾಡುತ್ತಿದೆ ಎಂದಿರುವ ಟ್ರಂಪ್, ಜನರು ನಿರೀಕ್ಷಿಸಿರುವುದಕ್ಕಿಂತ ಮುಂಚಿತವಾಗಿಯೇ ಲಸಿಕೆ ಬಿಡುಗಡೆಯಾಗುವು ಸಾಧ್ಯತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
ಅಮೆರಿಕಾದಲ್ಲಿ ಈವರೆಗೆ 38 ಲಕ್ಷಕ್ಕೂ ಹೆಚ್ಚು ಜನ ಕೊರೊನಾ ಸೋಂಕಿಗೆ ಒಳಗಾಗಿದ್ದು, 1.40 ಲಕ್ಷಕ್ಕೂ ಹೆಚ್ಚು ಮಂದಿ ಕೊನೆಯುಸಿರೆಳೆದಿದ್ದಾರೆ. ಕೋವಿಡ್ ಪರೀಕ್ಷೆಯಲ್ಲಿ ನಾವು ಮುಂಚೂಣಿಯಲ್ಲಿದ್ದು, ಸುಮಾರು ಐದು ಕೋಟಿ ಪರೀಕ್ಷೆಗಳನ್ನ ಮಾಡಿದ್ದೇವೆ. ಭಾರತದಲ್ಲಿ 1.20 ಕೋಟಿ ಪರೀಕ್ಷೆಗಳು ನಡೆದಿವೆ. ಇಧನ್ನು ಬಿಟ್ಟರೇ ಉಳಿದ ದೇಶಗಳು 40 ರಿಂದ 70 ಲಕ್ಷಗಳ ಆಸುಪಾಸಿನಲ್ಲಿ ಪರೀಕ್ಷೆಗಳನ್ನು ನಡೆಸಿವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
ಈ ಚೀನಾ ವೈರಸ್ ಅತ್ಯಂತ ಅಪಾಯಕಾರಿಯಾದ್ದು, ಅದನ್ನ ಚೀನಾದಿಂದ ಹೊರಬರಲು ಬಿಡಬಾರದಿದ್ದು. ಈಗ ಇಡೀ ಜಗತ್ತು ಸಂಕಷ್ಟು ಅನುಭವಿಸುತ್ತಿದೆ, ಇದು ಯಾರನ್ನೂ ಗುರಿಯಾಗಿಸುತ್ತಿದೆ, ಹೇಗೆ ನಿರ್ವಹಿಸಬೇಕು ಎಂಬುದು ಈಗ ನಮಗೆ ಮನವರಿಕೆಯಾಗಿದೆ. ನಾವು ಅತ್ಯಂತ ಶಕ್ತಿಶಾಲಿಯಾದ ಕಾರ್ಯಯೋಜನೆಯನ್ನೂ ರೂಪಿಸುತ್ತಿದ್ದೇವೆಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
![](https://risingkannada.com/wp-content/uploads/2020/07/WhatsApp-Image-2020-07-01-at-10.22.16-AM-27-1024x576-1.jpg)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?