ಆರೋಗ್ಯ
ಮನುಷ್ಯನಿಗೆ ಹಂದಿಯ ಕಿಡ್ನಿಯನ್ನು ಕಸಿ ಮಾಡಿದ ವೈದ್ಯರು
![](https://risingkannada.com/wp-content/uploads/2024/03/pigkidney.png)
ಬೆಂಗಳೂರು: ಇದೇ ಮೊದಲ ಬಾರಿಗೆ ವೈದ್ಯರ ತಂಡವೊಂದು ಆನುವಂಶಿಕವಾಗಿ ಮಾರ್ಪಾಟು ಮಾಡಿದ ಹಂದಿಯ ಮೂತ್ರ ಪಿಂಡಗಳನ್ನು ಜೀವಂತ ವ್ಯಕ್ತಿಗೆ ಕಸಿ ಮಾಡಿದ್ದಾರೆ.
ಅಮೆರಿಕದ ಬೋಸ್ಟನ್ನಲ್ಲಿ ಇಂಥದ್ದೊಂದು ವೈದ್ಯಕೀಯ ಸಾಧನೆ ನಡೆದಿದೆ. ಅಂತಿಮ ಹಂತದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ 62 ವರ್ಷದ ರಿಚರ್ಡ್ ಸ್ಟೇಮನ್ ಎಂಬುವವರಿಗೆ ನಾಲ್ಕು ಗಂಟೆಗಳ ಶಸ್ತ್ರ ಚಿಕಿತ್ಸೆಯ ಬಳಿಕ ಹಂದಿಯ ಕಿಡ್ನಿ ಜೋಡಿಸಲಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ.
![](https://risingkannada.com/wp-content/uploads/2024/03/pigkidneyy-1024x1024.png)
ಈ ಕಸಿ ವಿಧಾನವು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ವಿಶ್ವದಾದ್ಯಂತದ ಲಕ್ಷಾಂತರ ರೋಗಿಗಳಿಗೆ ಭರವಸೆ ನೀಡುತ್ತದೆ ಎಂದು ಆಸ್ಪತ್ರೆಯ ಕ್ಲಿನಿಕಲ್ ಟ್ರಾನ್ಸಾಂಟ್ ಟಾಲರೆನ್ಸ್ ನಿರ್ದೇಶಕ ಡಾ.ತತ್ಸುವೊ ಕವಾಯಿ ಹೇಳಿದ್ದಾರೆ.
ಮಾನವ ಕಸಿಗಾಗಿ ಅಂಗಗಳ ನಿರಂತರ ಕೊರತೆಯನ್ನು ಪರಿಹರಿಸಲು ಕ್ಲೋನಿಂಗ್ ಮತ್ತು ಜೀನ್-ಎಡಿಟಿಂಗ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದಕ್ಕೆ ಈ ಸರ್ಜರಿ ಪ್ರೇರಣೆ ನೀಡಲಿದೆ. ಪ್ರಸ್ತುತ 103,000 ಕ್ಕೂ ಹೆಚ್ಚು ಜನರು ಅಂಗಾಂಗಗಳಿಗಾಗಿ ಕಾಯುವ ಪಟ್ಟಿಯಲ್ಲಿದ್ದಾರೆ. ಪ್ರತಿದಿನ ಸುಮಾರು 17 ಜನರು ಅಂಗಾಂಗ ಪಡೆಯಲು ಸಾಧ್ಯವಾಗದ ಕಾರಣ ಸಾಯುತ್ತಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?