ಟ್ರೆಂಡಿಂಗ್
ವಿಶ್ವದಾದ್ಯಂತ ಉಂಟಾದ ಅಂತರ್ಜಾಲ ಸಮಸ್ಯೆಗೇನು ಕಾರಣ ಗೊತ್ತಾ?
![](https://risingkannada.com/wp-content/uploads/2024/03/watershortage.jpg)
ಪ್ರಪಂಚದಾದ್ಯಂತ ಜಲಂತರಗಾಮಿ ಇಂಟರ್ನೆಟ್ ಸಂಚಾರ ವ್ವಸ್ಥೆಯನ್ನು ಮರುಮಾರ್ಗಗೊಳಿಸುವುದರ ಜೊತೆಗೆ ಕೆಂಪು ಸಮುದ್ರದಲ್ಲಿ ಇನ್ನೂ ಕಾರ್ಯನಿರ್ವಹಿಸಬಹುದಾದ 11 ಕೇಬಲ್‌ಗಳ ಮೂಲಕ ಟ್ರಾಫಿಕ್ ಸಮಸ್ಯೆಯನ್ನು ತಗ್ಗಿಸಲು ಕಂಪನಿ ಟಾಟಾ ಕಮ್ಯುನಿಕೇಷನ್ ಈಗ ಕ್ರಮ ಕೈಗೊಳ್ಳುತ್ತಿದೆ.
ಏಷ್ಯಾ – ಆಫ್ರಿಕಾ-ಯುರೋಪ್, ಯುರೋಪ್ ಇಂಡಿಯಾ ಗೇಟ್‌ವೇ, ಸೀಕಾಮ್ ಮತ್ತು ಟಿಜಿಎನ್ ಗಲ್ಫ್ ಕೇಬಲ್‌ಗಳನ್ನು ಕತ್ತರಿಸಿದ ಕಾರಣ ಅಂತರ್ಜಾಕ ಸೇವೆಯಲ್ಲಿ ವ್ಯತ್ಯಯವಾಗುವಂತಾಗಿದೆ. ಇದರಲ್ಲಿ ಸಿಯಾಕಾಮ್ ಮತ್ತು ಟಿಜಿಎನ್ ಗಲ್ಫ್ ಕೇಬಲ್‌ನಲ್ಲಿ ಟಾಟಾ ಕಮ್ಯೂನಿಕೇಷನ್ (Tata Communication) ಒಂದು ಭಾಗವಾಗಿದೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಟಾಟಾ ಕಮ್ಯೂನಿಕೇಷನ್, ಸಮಸ್ಯೆ ಕಂಡು ಬಂದ ತಕ್ಷಣ ಸೂಕ್ತ ಪರಿಹಾರ ಕ್ರಮಗಳನ್ನು ಪ್ರಾರಂಭಿಸಲಾಗಿದೆ. ನಾವು ವಿವಿಧ ಕೇಬಲ್ ಕಂಪನಿಗಳನಲ್ಲಿ ಹೂಡಿಕೆ ಮಾಡಿದ್ದೇವೆ. ಈ ರೀತಿಯ ಸಮಸ್ಯೆಯಾದಾಗ ನಮ್ಮ ಸೇವೆಗಳನ್ನು ಸ್ವಯಂಚಲಿತವಾಗಿ ಮರುಹೊಂದಿಸಲು ಸಾಧ್ಯವಾಗುತ್ತದೆ ಎಂದು ಹೇಳಿದೆ. ಡೇಟಾ ಕೇಬಲ್ ತುಂಡಾಗಿದ್ದು ಹೇಗೆ ಎಂಬುದಕ್ಕೆ ಯಾವುದೇ ಅಧಿಕೃತ ವಿವರ ಸಿಕ್ಕಿಲ್ಲ. ಪ್ಯಾಲೆಸ್ತೀನ್ (Palestine) ಮೇಲೆ ಇಸ್ರೇಲ್ (Israel) ದಾಳಿ ಮಾಡುತ್ತಿರುವುದಕ್ಕೆ ಪ್ರತಿಯಾಗಿ ಯೆಮೆನ್ ಮೂಲದ ಹೌತಿ ಬಂಡುಕೋರರು (Houthi Rebels) ಈ ಕೃತ್ಯ ಎಸಗಿರಬಹುದು ಎಂದು ಮಾಧ್ಯಮಗಳು ಶಂಕಿಸಿ ವರದಿ ಮಾಡಿವೆ.
ಬ್ರಿಟಿಷ್ ಮತ್ತು ಯುಎಸ್ ಮಿಲಿಟರಿ ಕಾರ್ಯಾಚರಣೆಯಿಂದ ಈ ಕೇಬಲ್ ತುಂಡಾಗಿದೆ ಎಂದು ಯೆಮೆನ್ ಸರ್ಕಾರವು ದೂಷಿಸಿದೆ. ಜಲಾಂತರ್ಗಾಮಿ ಕೇಬಲ್‌ಗಳನ್ನು ದುರಸ್ತಿ ಮಾಡಲು ಮತ್ತು ನಿರ್ವಹಿಸಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ನಾವು ಉತ್ಸುಕವಾಗಿದ್ದೇವೆ ಎಂದು ಯೆಮೆನ್ ಹೇಳಿದೆ. ಯುದ್ಧ ನಿಲ್ಲಿಸಲು ಇಸ್ರೇಲ್ ಮೇಲೆ ಒತ್ತಡ ಹೇರುವ ಸಂಬಂಧ ಹೌತಿ ಬಂಡುಕೋರರು ಆರಂಭದಲ್ಲಿ ಕೆಂಪು ಸಮುದ್ರದಲ್ಲಿ ಸಂಚರಿಸುವ ಇಸ್ರೇಲ್ ಸರಕು ಸಾಗಾಣೆ ಹಡುಗಗಳ ಮೇಲೆ ದಾಳಿ ನಡೆಸುತ್ತಿದ್ದರು. ಈಗ ಆ ಭಾಗದಲ್ಲಿ ಸಂಚರಿಸುತ್ತಿದ್ದ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಆರಂಭಿಸಿದ್ದಾರೆ. ಪರಿಣಾಮ ಕೆಂಪು ಸಮುದ್ರದ ಮೂಲಕ ಏಷ್ಯಾ-ಯುರೋಪ್ ಮೂಲಕ ಸಾಗುವ ಹಡಗುಗಳು ಈಗ ಆಫ್ರಿಕಾ ಖಂಡವನ್ನು ಸುತ್ತು ಹಾಕಿ ಯುರೋಪ್‌ಗೆ ತೆರಳುತ್ತಿವೆ ಎಂದು ಹೇಳಲಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?