Connect with us

ರಾಜಕೀಯ

ಸಿದ್ದರಾಮಯ್ಯನವರೆ ನಿಮಗೆ ಮಾನ ಮರ್ಯಾದೆ ಇದೆಯಾ.?

ಚಿಕ್ಕಬಳ್ಳಾಪುರ : ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಇವತ್ತು ಚಿಕ್ಕಬಳ್ಳಾಪುರದಲ್ಲಿ ಸರ್ಕಾರದ ವಿರುದ್ದ ಕಿಡಿಕಾರಿದ್ರು. ಲಜ್ಜೆಗೆಟ್ಟ ಸರ್ಕಾರ ಸರಿಯಾಗಿ ಆಡಳಿತ ನಡೆಸೋಕು ಬರ್ತಿಲ್ಲ ಅಂತಾ ಆರೋಪಿಸಿದ್ರು. ಹಾವೇರಿ ಘಟನೆ ಬಗ್ಗೆ ವಾಕ್ ಸಮರ ಆರಂಬಿಸಿದ ಅವರು ಸಿದ್ದರಾಮಯ್ಯ ಸರ್ಕಾರ ಲಜ್ಜೆಗೆಟ್ಟ ಸರ್ಕಾರವಾಗಿದೆ. ಹಾವೇರಿ ಜಿಲ್ಲೆ ಒಣ ಮೆಣಸಿಕಾಯಿ ಮಾರುಕಟ್ಟೆ ಪ್ರಕರಣದಲ್ಲಿ ಸರ್ಕಾರ ಸಂಪೂರ್ಣ ಸೋತಿದೆ.

ಸಮರ್ಪಕ ಮಾಹಿತಿ ಮತ್ತು ದಾಸ್ತಾನ ನಿರ್ವಹಣೆಯಲ್ಲಿ ಸರ್ಕಾರ ಸೋತಿದೆ. ಹೀಗಾಗಿ ಇಂತಹ ಘಟನೆ ನಡೆಯಲು ಅವಕಾಶವಾಗಿದೆ. ಆದ್ರೆ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ರೈತರ ಮೇಲೆ ಪ್ರಕರಣ ದಾಖಲಿಸಲು ಮುಂದಾಗಿದೆ. ಇದು ನಿಜಕ್ಕೂ ಖೇದನೀಯ ಅಂತ ಆರೋಪಿಸಿದ್ದಾರೆ.

ಇದ್ದಕ್ಕಿದ್ದಂತೆ ದರದಲ್ಲಿ ವ್ಯತ್ಯಯ ಆದ್ರೆ ಯಾವ ರೈತ ಸುಮ್ಮನಿರ್ತಾನೆ 20 ಸಾವಿರ ಇದ್ದ ಕ್ವಿಂಟಾಲ್ ಮೆಣಸಿನಕಾಯಿ ಏಕಾಏಕಿ ಹತ್ತು ಸಾವಿರಕ್ಕೂ ಕಡಿಮೆ ದರಕ್ಕೆ ಇಳಿದ್ರೆ ಕೋಪ ಬಾರದೆ ಹೋಗುತ್ತಾ ರೈತರಿಗೆ ಅಂತಾ ಪ್ರಶ್ನಿಸಿದ್ದಾರೆ. ಹೀಗಾಗಿ ಹಾವೇರಿ ಘಟನೆಗೆ ಸರ್ಕಾರವೇ ನೇರ ಹೊಣೆ, ಸರ್ಕಾರದ ವೈಫಲ್ಯವೇ ಈ ಎಲ್ಲಾ ಘಟನೆಗೆ ಕಾರಣ ಎಂದು ದೂರಿದ್ದಾರೆ.

ಮಾರುಕಟ್ಟೆ ನಿಭಾಯಿಸಲು ಶಕ್ತಿ ಇದೆಯಾ ಅಂತಾ ಸರ್ಕಾರ ಚಿಂತಿಸಬೇಕಿತ್ತು ಆದ್ರೆ ಇದ್ಯಾವುದನ್ನೂ ಚಿಂತಿಸದ ಸರ್ಕಾರ ಘಟನೆಯ ದಿನ ರೈತರನ್ನು ಬಂಧಿಸಲು ಮುಂದಾಗಿದೆ. ಇನ್ನು ಈ ವಿಚಾರದಲ್ಲಿ ರೈತರದೇನೂ ತಪ್ಪಿಲ್ಲ ಎಂದಿರುವ ಕೃಷಿ ಸಚಿವ ಚಲುವರಾಯ ಸ್ವಾಮಿ ಇನ್ನ್ನೂ ಯಾಕೆ ರೈತರನ್ನು ಜೈಲಿನಿಂದ ಮುಕ್ತಿ ಮಾಡಿಲ್ಲ. ಅವರ ಮೇಲೆ ಪ್ರಕರಣ ದಾಖಲಿಸುವ ಮುನ್ನವೇ ಸಚಿವರು ಕ್ರಮ ಕೈಗೊಳ್ಳಬೇಕಿತ್ತು. ಅದನ್ನು ಬಿಟ್ಟು ಈಗ ಮಾಧ್ಯಮಗಳ ಮುಂದೆ ಬಂದು ಮೊಸಳೆ ಕಣ್ಣಿರು ಸುರಿಸ್ತಿದಾರೆ.

ಅವರಿಗೆ ಸಮರ್ಪಕವಾಗಿ ಕೆಲಸ ಮಾಡೋಕೆ ಬರುತ್ತಾ ಹೇಳಿ. ಸರ್ಕಾರ ಮುಂದಾಲೋಚನೆ ಮಾಡದೆ ಕೆಲಸ ಮಾಡಿದೆ. ರೈತರಿಗೆ ಕ್ಷಮೆ ಕೇಳಬೇಕು. ರೈತರನ್ನು ಯಾಕೆ ಜೈಲಲ್ಲಿ ಇಟ್ಟಿದೀರಿ, ಅವರದೇನೂ ತಪ್ಪಿಲ್ಲ ಅಂದ್ಮೇಲೆ ಅವರನ್ನು ಜೈಲಿಂದ ಬಿಡುಗಡೆ ಮಾಡಿ. ತಕ್ಷಣವೇ ರೈತರನ್ನು ಬಿಡುಗಡೆ ಮಾಡಿ ಇಲ್ಲಾಂದ್ರೆ ನಮ್ಮ ಹೋರಾಟ ಶುರು ಆಗುತ್ತೆ ಎಂದು ಎಚ್ಚರಿಸಿದ್ದಾರೆ. ರೈತರಿಗೆ ಸಿಟ್ಟು ಬರೋದು ಬೇಡ್ವೇನ್ರಿ. ದರದಲ್ಲಿ ಇದ್ದಕ್ಕಿದ್ದಂತೆ ವ್ಯತ್ಯಯ ಆದ್ರೆ ರೈತರಿಗೆ ಸಿಟ್ಟು ಬರೋಲ್ವಾ.. ರೈತರಿಗೆ ಸಿಟ್ಟು ಬರಬಾರದು ಅಂತಾ ಸಿದ್ದರಾಮಯ್ಯ ಹೇಳಲಿ ನೊಡೋಣ ಅಂತಾ ಪ್ರಶ್ನಿಸಿದ್ದಾರೆ.

Advertisement

ಇನ್ನು ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು ….. ಕಾವೇರಿ ವಿಚಾರದಲ್ಲಿ ಸರ್ಕಾರ ಮೂರ್ಖತನ ತೋರಿದೆ. ರಾಜ್ಯ ಸರ್ಕಾರ ನಾಡಿಗೆ ದ್ರೋಹ, ವಂಚನೆ ಮಾಡಿದೆ. ನೀರಿಗೆ ಹಾಹಾಕಾರ ರಾಜ್ಯದಲ್ಲಿ ಶುರುವಾಗಿದೆ. ಇಂತಹ ಸಮಯದಲ್ಲಿ ತಮಿಳುನಾಡಿಗೆ ಸಹಕಾರ ಕೊಡೋದು ಎಷ್ಟು ಸರಿ. ರಾಜಕೀಯ ಹೊಂದಾಣಿಕೆಗಾಗಿ ತಮಿಳುನಾಡಿಗೆ ನೀರು ನೀಡೋದು ಎಷ್ಟು ಸರಿ. ಇಲ್ಲಿರೋ ರೈತರು ನೀರಿಗಾಗಿ ಪರದಾಡ್ತಿದಾರೆ. ಆದ್ರೆ ರಾಜ್ಯ ಸರ್ಕಾರಕ್ಕೆ ಸ್ವಲ್ಪವೂ ಅದರ ಬಗ್ಗೆ ಚಿಂತೆ ಇಲ್ಲ.

ತಕ್ಷಣ ತಮಿಳು ನಾಡಿಗೆ ನೀರು ಹರಿಸೋದು ನಿಲ್ಲಿಸಲಿ. ಇಲ್ಲಾಂದ್ರೆ ಮತ್ತೆ ನಮ್ಮ ಹೋರಾಟ ಶುರುವಾಗಲಿದೆ ಅದನ್ನ ಸರ್ಕಾರ ಎದುರಿಸಲಿ ಎಂದು ಎಚ್ಚರಿಕೆ ನೀಡಿದ್ದಾರೆ. ಸಿದ್ದರಾಮಯ್ಯಗೆ ಮರ್ಯಾದೆ ಇದ್ರೆ ಹೇಳಲಿ. ರೈತರ ಪರವಾಗಿ ಸಿದ್ದರಾಮಯ್ಯ ಸರ್ಕಾರ ಇಲ್ಲ. ಬಿಜೆಪಿ ತಂದ ಕೃಷಿ ಖಾಯ್ದೆ ರಾಜ್ಯ ಸರ್ಕಾರ ಅನುಷ್ಟಾನಕ್ಕೆ ತರಲು ಮುಂದಾಗಿದೆ. ಹೀಗಿರುವಾಗ ಯಾವ ರೀತಿಯಲ್ಲಿ ಸಿದ್ದರಾಮಯ್ಯ ಸರ್ಕಾರ ರೈತರ ಪರವಾಗಿ ನಿಂತಿದೆ ಹೇಳಿ. ಸಿದ್ದರಾಮಯ್ಯಗೆ ಮಾನ ಮರ್ಯಾದೆ ಇದೆಯಾ ಅಂತಾ ಕೇಳಿದ್ದಾರೆ.

ಬೆಂಗಳೂರು1 year ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು1 year ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು1 year ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು1 year ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು1 year ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು1 year ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು1 year ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು1 year ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured6 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured6 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured1 year ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured6 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ