Featured
ಡಿಕೆ ಶಿವಕುಮಾರ್ಗೆ ತಿಹಾರ್ ಜೈಲೇ ಗತಿ : ಶನಿವಾರ ಮತ್ತೆ ಜಾಮೀನು ಅರ್ಜಿ ವಿಚಾರಣೆ
![](https://risingkannada.com/wp-content/uploads/2019/09/dk-shivakumar.jpg)
ನವದೆಹಲಿ : ಅದ್ಯಾಕೋ ಮಾಜಿ ಸಚಿವ ಡಿಕೆ ಶಿವಕುಮಾರ್ಗೆ ಬಹುತೇಕ ಜೈಲೇ ಫಿಕ್ಸ್ ಆಗೋ ಎಲ್ಲಾ ಲಕ್ಷಣಗಳು ಕಾಣ್ತಿವೆ. ಅದರಲ್ಲೂ ಇವತ್ತು ಇಡಿ ಪರ ವಕೀಲ ನಟರಾಜ್ ಅವರ ವಾದ ನೋಡಿದ್ರೆ, ಡಿಕೆಶಿಗೆ ಎಷ್ಟು ವರ್ಷ ಜೈಲಾಗುತ್ತೋ ಏನೋ ಅನುಮಾನಕ್ಕೆ ಕಾರಣವಾಗಿದೆ. ಸದ್ಯ, ಇವತ್ತಿನ ವಾದ-ಪ್ರತಿವಾದ ಮುಗಿದ್ದಿದ್ದು, ಬೇಲ್ ಅರ್ಜಿ ವಿಚಾರಣೆ ಶನಿವಾರಕ್ಕೆ ಮುಂದೂಡಲಾಗಿದೆ. ಶನಿವಾರ ಬೆಳಗ್ಗೆ 11 ಗಂಟೆಗೆ ಮತ್ತೆ ಡಿಕೆಶಿ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ.
ಆರೋಪಿಯ ಅಪರಾಧ ಸಾಬೀತು ಆಗುವ ತನಕ ನಾವು ವಿಚಾರಣೆ ಮಾಡುತ್ತೇವೆ. ಅಲ್ಲಿವರೆಗೆ ಅವರನ್ನ ಕೋರ್ಟ್ ಜಾಮೀನಿನ ಮೇಲೆ ಹೊರಗೆ ಬೀಡಬಹುದು. ಆದ್ರೆ, ಡಿಕೆಶಿ ತಪ್ಪು ಮಾಡಿಲ್ಲ ಅಂತ ಕೋರ್ಟ್ಗೆ ಅನ್ನಿಸಬೇಕು ಎಂದು ಇಡಿ ಪರ ವಕೀಲ ನಟರಾಜ್ ವಾದ ಮಂಡಿಸಿದ್ರು.
![](https://risingkannada.com/wp-content/uploads/2019/09/dkshi-02.jpeg)
ಡಿಕೆಶಿ ಮಾಡಿರುವ ಅಕ್ರಮ ಆಸ್ತಿ ದೇಶದ ಬೊಕ್ಕಸಕ್ಕೆ ನಷ್ಟವನ್ನು ಉಂಟು ಮಾಡಿದೆ. ಇದು ಆರ್ಥಿಕ ಅಪರಾಧ ಎಂದು ವಕೀಲ ನಟರಾಜ್ ಆರೋಪ ಮಾಡಿದ್ರು. ಇದಕ್ಕೆ ಬೇಕಾ ಎಲ್ಲಾ ಸಾಕ್ಷ್ಯಗಳು ಇಡಿ ಬಳಿ ಇವೆ ಎಂದು, ಇಡಿ ಅಧಿಕಾರಿಗಳು ಕೊಟ್ಟಿದ್ದ ವಿಚಾರಣೆಯ ವರದಿಯನ್ನ ಕೋರ್ಟ್ ಗಮನಕ್ಕೆ ತಂದ್ರು.
ಡಿಕೆಶಿ ತನ್ನ ತಾಯಿ, ಮಗಳು, ಸಹೋದರ ಸೇರಿದಂತೆ ಹಲವರ ಹೆಸರಿನಲ್ಲಿ ಅಕ್ರಮ, ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಇಡಿ ಪರ ವಕೀಲರು ವಾದ ಮಂಡಿಸಿದ್ರು. ಡಿಕೆಶಿ ಕೃಷಿಕ ಎಂದು ತೋರಿಸಿಕೊಂಡಿದ್ದಾರೆ. ಇಷ್ಟೊಂದು ನೂರಾರು ಕೋಟಿ ಮಾಡಿದ್ದು ಹೇಗೆ ಸಾಧ್ಯವಾಯ್ತು ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಇಡಿ ಪರ ವಕೀಲ ನಟರಾಜ್ ವಾದ ಮುಗಿಯದೇ ಇದ್ದ ಕಾರಣ, ಅರ್ಜಿ ವಿಚಾರಣೆಯನ್ನ ಶನಿವಾರಕ್ಕೆ ಮುಂದೂಡಲಾಯ್ತು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?