Featured
ಡಿಕೆಶಿಗೆ ಮತ್ತೆ ಸಂಕಷ್ಟ : ಆದ್ರೂ ಉನ್ನತ ಹುದ್ದೆ ಸಿಗುತ್ತೆ : ಡಿಕೆಶಿಗೆ ವಿನಯ್ ಗುರೂಜಿ ಅಭಯ.!
ಬೆಂಗಳೂರು : ಈಗಾಗಲೇ 50 ದಿನಗ ಜೈಲು ವಾಸ ಅನುಭವಿಸಿ ಬಂದಿರೋ ಮಾಜಿ ಸಚಿವ ಡಿಕೆ ಶಿವಕುಮಾರ್ಗೆ ಮತ್ತೆ ಸಂಕಷ್ಟ ಬರುತ್ತಂತೆ. ಸಂಕಷ್ಟ ಬಂದ್ರೂ, ಡಿಕೆಗೆ ಉನ್ನತ ಹುದ್ದೆ ಸಿಗುತ್ತಂತೆ. ಹೌದು, ಹೀಗಂತ ಭವಿಷ್ಯ ಹಾಗೂ ಅಭಯ ನೀಡಿರೋದು ಸ್ವಘೋಷಿತ ಅವಧೂತ ವಿನಯ್ ಗುರೂಜಿ.
ಶುಕ್ರವಾರ ಸಂಜೆ ವಿನಯ್ ಗುರೂಜಿ ಭೇಟಿಯಾಗಿದ್ದ ಡಿಕೆ ಶಿವಕುಮಾರ್, ಆಶೀರ್ವಾದ ಪಡೆದು ಸುಮಾರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದ್ರು. ಈ ವೇಳೆ ಭವಿಷ್ಯ ನುಡಿದಿರೋ ವಿನಯ್ ಗುರೂಜಿ, ಮುಂದಿನ ದಿನಗಳಲ್ಲಿ ಮತ್ತೆ ನಿಮಗೆ ಸಂಕಷ್ಟ ಎದುರಾಗಲಿದೆ. ಹಾಗೆಯೇ ಎರಡು ಪ್ರಮುಖ ಹುದ್ದೆಗಳು ಸಿಗಲಿವೆ ಎಂದು ಹೇಳಿದ್ದಾರೆ. ಎಲ್ಲಾ ಸಮಸ್ಯೆಗಳು ಬಗೆಹರಿದ ಮೇಲೆ ಪ್ರಮುಖ ಹುದ್ದೆ ಸಿಗಲಿದೆ ಎಂದಿದ್ದಾರೆ.
ಕೆಲವರು ಎಲ್ಲಾ ಸಮಸ್ಯೆಗಳು ಮುಗೀಯಿತು. ಇನ್ನೇನಿದ್ರೂ ನಿಮ್ಮ ಪರ್ವ ಕಾಲ. ಒಳ್ಳೇ ಸ್ಥಾನಮಾನ ಸಿಗುತ್ತೆ ಎಂದು ಕೆಲವು ಹೇಳಿದ್ದಾರೆ ಎಂದು ಡಿಕೆಶಿ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರೋ ವಿನಯ್ ಗುರೂಜಿ, ಅವರು ನಿಮ್ಮನ್ನು ಮೆಚ್ಚಿಸಲು ಹೇಳಿರಬಹುದು. ಆದ್ರೆ, ನಿಮ್ಮಿಂದ ನಾನು ಯಾವುದೇ ಅಪೇಕ್ಷೆಯಿಲ್ಲದೇ ಹೇಳುತ್ತಿದ್ದೇನೆ ಎಂದು ಡಿಕೆಶಿಗೆ ವಿನಯ್ ಗುರೂಜಿ ಹೇಳಿದ್ದಾರೆ ಎನ್ನಲಾಗಿದೆ.
ಹಾಗಿದ್ರೆ, ಡಿಕೆಶಿ ಮತ್ತೆ ಜೈಲಿಗೆ ಹೋಗ್ತಾರಾ..? ಪ್ರಮುಖ ಹುದ್ದೆ ಅಂದ್ರೆ ಯಾವುದು..? ಮುಂದಿನ ದಿನಗಳಲ್ಲಿ ಕಾದು ನೋಡೋಣ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?