Featured
ಡಿಕೆಶಿ ಪದ ಗ್ರಹಣಕ್ಕೆ ಮುಖಂಡರ ಸಿದ್ದತೆ-ಪ್ರತಿಜ್ಞಾ ಕಾರ್ಯಕ್ರಮ ಲೈವ್ ನೋಡಲು ಫುಲ್ ವ್ಯವಸ್ಥೆ
![](https://risingkannada.com/wp-content/uploads/2020/07/YDG-CHENNA.jpg)
ದುರ್ಗೆಶ್ ಮಂಗಿಹಾಳ, ಯಾದಗಿರಿ
ಕೆಪಿಸಿಸಿ ನೂತನ ಸಾರಥಿ ಡಿಕೆ ಶಿವಕುಮಾರ್ ಪದಗ್ರಹಣ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದಕ್ಕಾಗಿ ಯಾದಗಿರಿ ಕ್ಷೇತ್ರದಲ್ಲಿ ಹಿರಿಯ ಮುಖಂಡ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ವಿಧಾನಸಭಾ ಕ್ಷೇತ್ರದಾದ್ಯಂತ ಸಂಚರಿಸಿ ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಹಲವು ಕಾಂಗ್ರೆಸ್ಸಿಗರನ್ನು ಒಟ್ಟು ಸೇರಿಸಿದ್ದಾರೆ. ಡಿಕೆಶಿ “ಪ್ರತಿಜ್ಞಾ” ಕಾರ್ಯಕ್ರಮ ಲೈವ್ ವೀಕ್ಷಿಣೆಗೆ ಅನುವು ಮಾಡಿಕೊಟ್ಟಿದ್ದಾರೆ. ಯಾದಗಿರಿ ಮತ ಕ್ಷೇತ್ರದಲ್ಲಿ 50ಕ್ಕೂ ಹೆಚ್ವು ಟಿವಿ ಪರದೆ ಅಳವಡಿಸಲಾಗ್ತಿದೆ. ಕ್ಷೇತ್ರದ ಆಯಾ ಗ್ರಾಮ, ಹೋಬಳಿ ಹಾಗೂ ಪಟ್ಟಣದಲ್ಲಿ ಕಾರ್ಯಕರ್ತರು ಮುಖಂಡರು ಎಲ್ಲಾ ವ್ಯವಸ್ಥೆ ಮಾಡುತ್ತಿದ್ದಾರೆ.
ರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ಬೆಂಗಳೂರಿಗೆ ಹೋಗಿ ಶುಭಾಶಯ ಕೋರಲು ಸಾಧ್ಯವಾಗ್ತಿಲ್ಲ. ಹೀಗಾಗಿ ಆಯಾ ಗ್ರಾಮ, ಪಂಚಾಯತ್ ಮುಂಭಾಗ, ಬಡಾವಣೆಯಲ್ಲಿ ಕಾರ್ಯಕ್ರಮದ ನೇರ ಪ್ರಸಾರಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ.
- ಚೆನ್ನಾರೆಡ್ಡಿ ತನ್ನೂರು, ಮಾಜಿ ಎಂ.ಎಲ್.ಸಿ, ಕಾಂಗ್ರೆಸ್ ಮುಖಂಡ
ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಕಳೆದ ನಾಲ್ಕು ದಶಕಗಳಿಂದ ರಾಜಕೀಯದಲ್ಲಿ ಸಕ್ರೀಯವಾಗಿದ್ದಾರೆ. ಅವರ ಅನುಭವಕ್ಕೆ ಸಾಟಿಯಾಗುವುದಿಲ್ಲ. ಯಾದಗಿರಿ ಮತಕ್ಷೇತ್ರದಲ್ಲಿ ಅವರ ಒಡನಾಟ ಹೆಚ್ಚಾಗಿದೆ. ಯಾವುದೇ ಕಾಂಟ್ರಾಕ್ಟರ್ ಕೆಲಸ ಮಾಡಿಸಲ್ಲ, ರಾಜಕೀಯ ಲಾಭವನ್ನು ಪಡೆದಿಲ್ಲ. ಆದ್ರು ಅವರಿಗೆ “ಜನರ ಸೇವೆ ಜೀವಾಳವಾಗಿದೆ”.
![](https://risingkannada.com/wp-content/uploads/2020/07/YDG-CHENNAREDDY-1.jpg)
ಚೆನ್ನಾರೆಡ್ಡಿ ತನ್ನೂರು, ಕಾಂಗ್ರೆಸ್ ಮುಖಂಡ
ಇಂದಿಲ್ಲ ನಾಳೆ ಜನರ ಆಶಯಗಳನ್ನು ಈಡೇರಿಸುವ ನಾಯಕ ನಾಗಬೇಕು ಎಂಬ ಹಂಬಲವಿದೆ. ಈಗಾಗಲೇ ಎಲ್ಲಾ ಅಧಿಕಾರವನ್ನು ಅನುಭವಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಎ.ಬಿ ಮಾಲಕರೆಡ್ಡಿ ಸೋತ ನಂತರ, ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿದ್ರು. ಈಗ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರು ಹಾಗೂ ಅನುಭವಸ್ಥ ನಾಯಕರು ಯಾರು ಇಲ್ಲ. ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಪಕ್ಷದಲ್ಲಿ ಹಿರಿಯರಾಗಿದ್ದಾರೆ. ಅಲ್ಲದೆ 1987ರಿಂದ ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಜಿಲ್ಲಾ ಪಂಚಾಯತ್ ಕಮಿಟಿ ಸದಸ್ಯರಾಗಿ ಹಾಗೂ ಎರಡು ಬಾರಿ ಎಪಿಎಂಸಿ ನಿರ್ದೇಶಕರಾಗಿದ್ದಾರೆ. ಕೋರಿ ಸಿದ್ದೇಶ್ವರ ಟ್ರಸ್ಟ್ ಅಧ್ಯಕ್ಷರಾಗಿ ಮತ್ತು ಮಲ್ಲನಗೌಡ ಶಿಕ್ಷಣ ಸಂಸ್ಥೆ ಅಧ್ಯಕ್ಷರು ಆಗಿದ್ದಾರೆ. 1998ರಲ್ಲಿ ಕಲಬುರಗಿ ಜಿಲ್ಲೆ ಇರುವಾಗ ಎಂ.ಎಲ್.ಸಿ ಆಗಿ ಆಯ್ಕೆಯಾಗಿ ಐದು ವರ್ಷಗಳ ಸೇವೆ ಸಲ್ಲಿಸಿದ್ರು. ಎಂತಹ ಸಂದರ್ಭ ಬಂದ್ರೂ ಪಕ್ಷಬಿಟ್ಟು ಹೋಗದೆ. ಪಕ್ಷಕ್ಕೆ ನೈಜತೆಯಿಂದ ದುಡಿದಿದ್ದಾರೆ. ಹೀಗಾಗಿ ಮುಂದಿನಗಳಲ್ಲಿ ಚೆನ್ನಾರೆಡ್ಡಿ ಪಾಟೀಲ್ ಅವರಿಗೆ ಪಕ್ಷದಲ್ಲಿ ಪ್ರಮುಖ ಹುದ್ದೆ ಸಿಗುವ ನಿರೀಕ್ಷೆ ಇದೆ. ಈಗಾಗಲೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಂತೆ ಕ್ಷೇತ್ರದಲ್ಲೆಲ್ಲಾ ಓಡಾಟ ನಡೆಸಿ ಜನರ, ಕಾರ್ಯಕರ್ತರ ಸಮಸ್ಯೆಯನ್ನು ಆಲಿಸುತ್ತಿದ್ದಾರೆ.
ಕೃಷ್ಣಾ ನದಿ ಪ್ರವಾಹ ಹಾಗೂ ಕೊರೋನಾ ದಂತ ಸಮಸ್ಯೆ ಉದ್ಭವಿಸಿದ್ದಾಗ, ಜನರ ಸಂಕಷ ಮರುಗಿ ಅನ್ನ, ನೀರು ಹಾಗೂ ರೇಷನ್ ಕಿಟ್ಗಳನ್ನು ವಿತರಿಸಿ ಕಾಂಗ್ರೆಸ್ ಪಕ್ಷದಲ್ಲಿ ಮಾದರಿ ನಾಯಕರಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಡಿಕೆಶಿ ಶಿವಕುಮಾರ್, ಆರ್.ವಿ ದೇಶಪಾಂಡೆ, ಜಿ. ಪರಮೇಶ್ವರ್ ಸೇರಿದಂತೆ ಅನೇಕ ಹಿರಿಯ ನಾಯಕರ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಡಿಕೆಶಿ ಶಿವಕುಮಾರ್ ಕೆಪಿಸಿಸಿ ಪಟ್ಟಕ್ಕೇರಿದ ಮೇಲೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿಯನ್ನು ಹೆಚ್ಚಿಸುತ್ತಿದ್ದಾರೆ. ಒಟ್ಟಿನಲ್ಲಿ ಚೆನ್ನಾರೆಡ್ಡಿ ಪಾಟೀಲ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ.
![](https://risingkannada.com/wp-content/uploads/2020/04/RISING-KANNADA-logo-150px.jpg)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?