Featured
ಡಿಕೆ ಶಿವಕುಮಾರ್ ದಕ್ಷಿಣ ಯಾತ್ರೆಗೆ ಭರ್ಜರಿ ಸ್ವಾಗತ : ಡಿಕೆಶಿ ಉದ್ದೇಶವಾದರೂ ಏನು.?

ಮೈಸೂರು/ಮಂಡ್ಯ : ಎರಡು ದಿನಗಳಿಂದ ಮಾಜಿ ಸಚಿವ ಡಿಕೆ ಶಿವಕುಮಾರ್ ದಕ್ಷಿಣ ದಂಡ ಯಾತ್ರೆ ನಡೆಸಿದ್ದಾರೆ. ಅರ್ಥಾತ್ ದಕ್ಷಿಣ ಕರ್ನಾಟಕ ಅದರಲ್ಲೂ ಮೈಸೂರು ಭಾಗದಲ್ಲಿ ತನ್ನ ಶಕ್ತಿ ಪ್ರದರ್ಶನ ಮಾಡ್ತಿದ್ದಾರೆ. ಸಿದ್ದರಾಮಯ್ಯ ಕೋಟೆ ಮೈಸೂರಿನಲ್ಲಿ ಶಕ್ತಿ ಪ್ರದರ್ಶನ ಮಾಡಿ ಸಕ್ಸಸ್ ಆದ ಡಿಕೆಶಿ, ಇವತ್ತು ಮಂಡ್ಯ ಭಾಗದಲ್ಲೂ ದಂಡಯಾತ್ರೆ ನಡೆಸಿದ್ರು.
ಡಿಕೆ ಶಿವಕುಮಾರ್ ಹೋದ ಕಡೆಯಲ್ಲೆಲ್ಲಾ ಹೂವಿನ ಸುರಿಮಳೆಯೇ ಸುರಿಸಲಾಯ್ತು.
ವಿಶೇಷ ಎನ್ನುವಂತೆ ಮಂಡ್ಯ, ಶ್ರೀರಂಗಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರೇ ಡಿಕೆಶಿಗೆ ಭರ್ಜರಿ ಸ್ವಾಗತ
ನೀಡಿದ್ರು. ದೊಡ್ಡ ದೊಡ್ಡ ಸೇವಿನ ಹಾರ ಹಾಕಿ ಸ್ವಾಗತ ಕೋರಿದ್ರು. ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ
ಮತ್ತು ಜೆಡಿಎಸ್ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹಾಗೂ ಕೈ ಕಾರ್ಯಕರ್ತರಿಂದ
ಡಿಕೆಶಿಗೆ ಅದ್ದೂರಿ ಸ್ವಾಗತ ಕೋರಿದ್ರು.
ಬಳಿಕ ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ, ನಿಮಿಷಾಂಭ ದೇವಾಲಯಗಳಿಗೆ ಭೇಟಿ
ನೀಡಿದ ಡಿಕೆಶಿ ಆಶೀರ್ವಾದ ಪಡೆದ್ರು. ಇಷ್ಟೇ ಅಲ್ಲದೆ, ಮಂಡ್ಯ ನಗರದ ಕಾಳಿಕಾಂಭ ದೇವಾಲಯಕ್ಕೆ ಭೇಟಿ
ಪೂಜೆ ಸಲ್ಲಿಸಿದ್ರು. ಡಿಕೆಶಿ ಆಗಮಿಸ್ತಿದ್ದಂತೆ ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಬೈಕ್
ರ್ಯಾಲಿ ನಡೆಸಿದ್ರು.
ಒಟ್ಟಿನಲ್ಲಿ ಜೈಲುವಾಸದಿಂದ ವಾಪಸಾಗಿರೋ ಡಿಕೆಶಿಗೆ ಹೋದಕಡೆಯೆಲ್ಲಾ ಅದ್ಧೂರಿ ಸ್ವಾಗತ ನೀಡಲಾಗ್ತಿದೆ. ಮುಂದಿನ ಪ್ಲಾನ್ ಏನು ಅನ್ನೋದನ್ನ ಕಾದುನೋಡೋಣ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?