Connect with us

Featured

ಸೋನಿಯಾ ಗಾಂಧಿ ತುಂಬಿದ ಧೈರ್ಯದಿಂದ ಆತ್ಮವಿಶ್ವಾಸ ಇಮ್ಮಡಿಯಾಯ್ತು – ಭಾಷಣದಲ್ಲಿ ಭಾವುಕರಾದ ಡಿಕೆಶಿ

ರೈಸಿಂಗ್ ಕನ್ನಡ :

ಬೆಂಗಳೂರು :

ಸೋನಿಯಾ ಗಾಂಧಿ ಅಂಬಿಕಾ ಸೋನಿಯವರ ಜೊತೆಯಲ್ಲಿ ಜೈಲಿಗೆ ಬಂದು, ಒಂದು ಗಂಟೆ ಮಾತನಾಡಿ ನನಗೆ ಧೈರ್ಯ ತುಂಬಿದ್ರು ಅನ್ನೋ ಡಿ.ಕೆ ಶಿವಕುಮಾರ್ ಮಾತಿನಲ್ಲಿ, ತಾನು ಎಲ್ಲಕ್ಕೂ ಸನ್ನದ್ಧ ಅನ್ನೋ ಸಂದೇಶವಿತ್ತು. ಅವರ ಆತ್ಮ ವಿಶ್ವಾಸ ಅಂದಿನಿಂದಲೇ ಇಮ್ಮಡಿಯಾಗಿದೆ ಅನ್ನೋ ಎಚ್ಚರಿಕೆಯೂ ಇತ್ತು.

ರಾಜಕಾರಣದಲ್ಲಿ ಅನೇಕ ಹುದ್ದೆಗಳನ್ನ ನೋಡಿರೋ, ಡಿ.ಕೆ ಶಿವಕುಮಾರ್ ಇದೀಗ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಆದ್ರೂ, ಅವರ ಮನಸ್ಸಿನಲ್ಲಿ ತಾನೂ ಇನ್ನೂ ಕೂಡ ಒಬ್ಬ ಸಾಮಾನ್ಯ ಕಾರ್ಯಕರ್ತ ಅನ್ನೋ ಸಂದೇಶವಿತ್ತು.
ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಭಾಷಣ ಮಾಡಿದ ಅವರು, ಪಕ್ಷವೇ ನನಗೆ ಎಲ್ಲ. ಜೀವನಪೂರ್ತಿ ಪಕ್ಷಕ್ಕಾಗಿ ದುಡಿಯುತ್ತೇನೆ ಅಂದರು. ವಿದ್ಯಾರ್ಥಿಯಾದಾಗಿನಿಂದಲೂ ನನ್ನ ಬದುಕನ್ನ ಜನಸೇವೆಗಾಗಿ ಮುಡಿಪಿಟ್ಟಿದ್ದೇನೆ, ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ, ಅದನ್ನೇ ಮುಂದುವರಿಸುತ್ತೇನೆ ಎಂದರು.

ನನಗೆ ಯಾವತ್ತೂ ಕೆಪಿಸಿಸಿ ಅಧ್ಯಕ್ಷನಾಗೋ ಹಂಬಲ ಇರಲಿಲ್ಲ, ಆದ್ರೆ, ಸಿಕ್ಕಿರೋ ಅವಕಾಶವನ್ನ ಸದುಪಯೋಗಪಡಿಸಿಕೊಂಡು, ಎಲ್ಲಾ ಸವಾಲುಗಳನ್ನು ಉತ್ಸಾಹದಿಂದ ಎದುರಿಸುತ್ತೇನೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ರು.  ನನ್ನನ್ನ ಜೈಲಿಗೆ ಕಳುಹಿಸಿ ಜೈಲಿಗೆ ಡಿಕೆಶಿ ರಾಜಕೀಯವಾಗಿ ಮುಗಿದೇಹೋದ್ರು ಅಂತ ಬಿಂಬಿಸಿದ್ರು,  ಆ ಸಂದರ್ಭದಲ್ಲಿ ಸೋನಿಯಾ ಗಾಂಧಿ‌ ಜೈಲಿಗೆ ಬಂದು ನಿನ್ನ ಜೊತೆ ಇದ್ದೇನೆ ಎಂದು ಧೈರ್ಯ ತುಂಬಿದರು ಅನ್ನೋ ಮಾತನ್ನ ತಮ್ಮ ಭಾಷಣದ ವೇಳೆ ನೆನಪಿಸಿಕೊಂಡ್ರು.


ಸಾಮೂಹಿಕ ನಾಯಕತ್ವದ ಮೇಲೆ ನನಗೆ ನಂಬಿಕೆ ಇದೆ. ಒಗ್ಗಟ್ಟಿನಿಂದ ಪಕ್ಷವನ್ನ ಮುನ್ನೆಡಸುತ್ತೇನೆ, ಯಾರಿಗೂ ನಾನು ರಾಜಕೀಯದಲ್ಲಿ ದ್ರೋಹ ಮಾಡಿಲ್ಲ, ಅಧಿಕಾರ ಸಿಗದೇ ಇದ್ದಾಗಲೂ ಯಾವತ್ತಿಗೂ ಯಾವುದೇ ಅಸಮಾದಾನ ತೋರಿಸಿಲ್ಲ, ಎಲ್ಲರೂ ಒಟ್ಟಾಗಿ ದುಡಿಯೋಣ ಅಂತ ಕರೆ ನೀಡಿದ್ರು.
ಕೇರಳ ಮಾದರಿಯಲ್ಲಿ ಪಕ್ಷ ಸಂಘಟನೆ, ಬೂತ್ ಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಕೆಲಸ ಮಾಡೋಣ, ಇಲ್ಲಿ ವ್ಯಕ್ತಿ ಪೂಜೆ ಬೇಡವೇ ಬೇಡ ಅಂತ ಹೇಳಿದ್ರು.

Advertisement

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ