Featured
ಇನ್ನೂ ನಾಲ್ಕು ದಿನ ತಿಹಾರ್ ಜೈಲಲ್ಲೇ ಡಿಕೆಶಿ : ಬುಧವಾರ ಜಾಮೀನು ತೀರ್ಪು
ನವದೆಹಲಿ : ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಇನ್ನೂ ನಾಲ್ಕು ದಿನ ತಿಹಾರ್ ಜೈಲಿನಲ್ಲೇ ಕಳೆಯಬೇಕಿದೆ. ಜಾಮೀನು ಅರ್ಜಿ ಕುರಿತಂತೆ ಸೆಪ್ಟೆಂಬರ್ 25 ಅಂದ್ರೆ ಬರುವ ಬುಧವಾರ ತೀರ್ಪು ನೀಡೋದಾಗಿ ಕೋರ್ಟ್ ಹೇಳಿದೆ. ಇದರಿಂದಾಗಿ ಸೆಪ್ಟೆಂಬರ್ 25ಕ್ಕೆ ಅರ್ಜಿ ಮುಂದೂಡಿಕೆ ಆಗಿದ್ದು, ಅಲ್ಲಿವರೆಗೆ ಡಿಕೆ ಶಿವಕುಮಾರ್ ತಿಹಾರ್ ಜೈಲಿನಲ್ಲೇ ಇರಬೇಕಿದೆ.
ಇವತ್ತು ಬೆಳಗ್ಗೆ 11.30ರಿಂದ ಶುರವಾದ ವಾದ-ಪ್ರತಿವಾದವನ್ನ ಆಲಿಸಿದ ಕೋರ್ಟ್, ಸೆಪ್ಟೆಂಬರ್ 25ಕ್ಕೆ ಆದೇಶ ನೀಡೋದಾಗಿ ಹೇಳಿದ್ರು. ಡಿಕೆಶಿ ಪರವಾಗಿ ಅಭಿಷೇಕ್ ಮನು ಸಿಂಘ್ವಿ ಮತ್ತು ಮುಕುಲ್ ರೋಹಟಗಿ ವಾದ ಮಂಡನೆ ಮಾಡಿದ್ರು. ಡಿಕೆಶಿ ಪರ ಬಲವಾಗಿ ವಾದ ಮಂಡನೆ ಮಾಡಿದ ಹಿರಿಯ ವಕೀಲರು, ಡಿಕೆಶಿ ವಿಮಾನದಲ್ಲಿ ಎಲ್ಲೂ ಹಾರಿ ಹೋಗಲ್ಲ. ಇಡಿಗೆ ವಿಚಾರಣೆಗೆ ಬೇಕಿದ್ದರೆ ಹಾಜರಾಗ್ತಾರೆ. ದೆಹಲಿ ಅಥವಾ ಬೆಂಗಳೂರಿನಲ್ಲೇ ಆದ್ರೂ, ಡಿಕೆಶಿ ಇಡಿ ವಿಚಾರಣೆಗೆ ಬೇಕಿದ್ರೆ, ಪ್ರತಿದಿನ ಬರ್ತಾರೆ. ಅವರಿಗೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ರು.
ಒಂದು ಪ್ರಕರಣದಲ್ಲಿ ಬಂಧಿಸಿದಾಗ ಆ ಪ್ರಕರಣದ ವಿಚಾರಣೆ ನಡೆಸಬೇಕು. ಅದು ಬಿಟ್ಟು ತಪ್ಪಿತಸ್ಥರನ್ನಾಗಿ ಮಾಡಲೇಬೇಕು ಅನ್ನೋ ಹಠಕ್ಕೆ ಇಡಿ ಬಿದ್ದಿದೆ. ಹೀಗಾಗಿ, ಮಾಡದಿರೋ ತಪ್ಪನ್ನ ಒಪ್ಪಿಕೊಳ್ಳುವಂತೆ ಡಿಕೆಶಿ ಮೇಲೆ ಒತ್ತಡ ಹೇರುತ್ತಿದೆ ಎಂದು ವಾದ ಮಂಡಿಸಿದ್ರು. ಡಿಕೆಶಿ ತಪ್ಪನ್ನ ಒಪ್ಪಿಕೊಳ್ತಿಲ್ಲ. ವಿಚಾರಣೆಗೆ ಸಹಕರಿಸ್ತಿಲ್ಲ ಎಂದು ಇಡಿ ಪರ ವಕೀಲರು ವಾದ ಮಾಡಿದಾಗ, ಇಡಿ ಹೇಳಿದ್ದನ್ನೆಲ್ಲಾ ಒಪ್ಪಿಕೊಳ್ಳುವ ಅಗತ್ಯವಿಲ್ಲ. ತಪ್ಪು ಮಾಡಿಲ್ಲ, ಮೋಸ ಮಾಡಿಲ್ಲ ಎಂದಾಗ ಯಾಕೆ ಒಪ್ಪಿಕೊಳ್ಳಬೇಕು. ವಿನಾಃ ಕಾರಣ, ಇಡಿ ಈ ವಿಚಾರದಲ್ಲಿ ಬಲವಂತದ ಒತ್ತಾಯ ಮಾಡ್ತಿದೆ ಎಂದು ಡಿಕೆಶಿ ಪರ ವಕೀಲರು ವಾದ ಮಂಡಿಸಿದ್ರು.
ವಾದ-ಪ್ರತಿವಾದ ಆಲಿಸಿದ ಕೋರ್ಟ್, ಬುಧವಾರಕ್ಕೆ ಜಾಮೀನು ಅರ್ಜಿಯ ಆದೇಶ ನೀಡೋದಾಗಿ ಹೇಳಿ, ಮುಂದೂಡಿದ್ರು. ಬುಧವಾರದವರೆಗೆ ಡಿಕೆಶಿ ತಿಹಾರ್ ಜೈಲಿನಲ್ಲೇ ಇರಬೇಕಿದ್ದು, ಬುಧವಾರ ಜೈಲೋ, ಬೇಲೋ ಅನ್ನೋದು ಗೊತ್ತಾಗಲಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?