Featured
ಅನರ್ಹರು ಚುನಾವಣೆಗೆ ನಿಂತರೂ ಜನ ಸೋಲಿಸ್ತಾರೆ : ಸ್ಪೀಕರ್ ನಿರ್ಧಾರ ಸರಿ ಎಂದು ಸುಪ್ರೀಂ ಹೇಳಿದೆ, ಸಿದ್ದರಾಮಯ್ಯ
ಬೆಂಗಳೂರು : ಅನರ್ಹರ ಪ್ರಕರಣದಲ್ಲಿ ಸ್ಪೀಕರ್ ನಿರ್ಧಾರವನ್ನ ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಅನರ್ಹತೆಯನ್ನ ಒಪ್ಪಿಕೊಂಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸುಪ್ರೀಂ ತೀರ್ಪಿನ ಬಳಿಕ ಬೆಂಗಳೂರಿನಲ್ಲಿ ಮಾತ್ನಾಡಿದ ಸಿದ್ದು, ಪ್ರಜಾಪ್ರಭುತ್ವದಲ್ಲಿ ಒಂದು ಪಕ್ಷದಿಂದ ಗೆದ್ದು, ರಾಜೀನಾಮೆ ಕೊಡಬಾರದು ಅಂತೇನಿಲ್ಲ. ಆದ್ರೆ, ಯಾವುದೇ ಒತ್ತಡ ಇಲ್ಲದೆ, ಪ್ರಮಾಣಿಕವಾಗಿ ರಾಜೀನಾಮೆ ಕೊಡ್ಬಹುದು. ಅನರ್ಹರ ಪ್ರಕರಣದಲ್ಲಿ ಅದ್ಯಾವುದು ಪಾಲನೆ ಆಗಿಲ್ಲ. ಎಲ್ಲವೂ ಅನೈತಿಕವಾಗಿ ಆಗಿದೆ ಎಂದು ಸಿದ್ದು ವಾಗ್ದಾಳಿ ನಡೆಸಿದ್ದ.
ಇದೇ ವೇಳೆ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಪಕ್ಷಾಂತರವನ್ನ ಒಪ್ಪಿಲ್ಲ. ಸ್ಪೀಕರ್ ನಿರ್ಧಾರ ಸರಿ ಇದೆ ಎಂದು ಹೇಳಿದೆ. ಅನರ್ಹರು ಚುನಾವಣೆಗೆ ನಿಲ್ಲಬಹುದು ಅನ್ನೋ ಆದೇಶವನ್ನೂ ಸ್ವಾಗತ ಮಾಡ್ತೇನೆ. ಆದ್ರೆ, ಜನದ್ರೋಹ ಮಾಡಿದವರನ್ನ ಜನರು ಒಪ್ಪಲ್ಲ. ಅನರ್ಹರು ಚುನಾವಣೆಗೆ ನಿಂತರೂ, ಜನರೇ ಅವರನ್ನು ಸೋಲಿಸ್ತಾರೆ. ಈ ಹಿಂದೆ ಗುಜರಾತ್, ಮಹಾರಾಷ್ಟ್ರದಲ್ಲೂ ಇದೇ ರೀತಿ ಆಗಿದೆ ಎಂದು ಹೇಳಿದ್ರು.
ಇನ್ನು, ಮತ್ತೊಮ್ಮೆ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕಿಲ್ಲ. ಮೇಲ್ಮನವಿ ಹೋಗಬೇಕಿಲ್ಲ ಅನ್ನೋದು ನನ್ನ ಅಭಿಪ್ರಾಯ. ಮುಂದಿನ ನಿರ್ಧಾರದ ಕುರಿತು ಪಕ್ಷದಲ್ಲಿ ಕೂತು ಚರ್ಚೆ ಮಾಡ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?