Featured
ಹಬ್ಬದ ಸಮಯದಲ್ಲಿ ಡಯಾಬಿಟೀಸ್ ಇರುವವರು ಸಿಹಿ ತಿನಿಸು ತಿನ್ನಬಹುದಾ..?
![](https://risingkannada.com/wp-content/uploads/2019/10/sweets.jpeg)
ರೈಸಿಂಗ್ ಕನ್ನಡ : ಯಾವುದೇ ಹಬ್ಬಬರಲಿ, ಸಿಹಿ ಹಂಚಿಕೊಳ್ಳೋದು ಕಾಮನ್. ಆದ್ರೆ, ಡಯಾಬಿಟೀಸ್ ಇರುವವರು ಏನು ಮಾಡಬೇಕು..? ಸ್ವೀಟ್ ತಿನ್ನಬಹುದಾ..? ಬೇಡ್ವಾ..? ತಿನ್ನೋದಾದ್ರೆ, ಎಷ್ಟು ತಿನ್ನಬೇಕು.? ಯಾವುದನ್ನ ತಿನ್ನಬೇಕು ಅನ್ನೋ ಗೊಂದಲ ಸಾಮಾನ್ಯವಾಗಿ ಹುಟ್ಟಿಕೊಳ್ಳುತ್ತೆ. ತಮಗಿರೋ Blood sugar levelಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಏನು ಮಾಡಬೇಕು ಅನ್ನೋದನ್ನ ನಾವೀಗ ನೋಡೋಣ.
ಏನೇ ಸಂಭ್ರಮ ಇದ್ರೂ, ಪಾರ್ಟಿ ಇದ್ರೂ ಅಲ್ಲಿ ಸಿಹಿ ತಿನ್ನೋದು, ಕೂಲ್ ಡ್ರಿಂಕ್ಸ್ ಇದ್ದೇ ಇರುತ್ತೆ. ನಾಲ್ಕು ಜನರ ಮಧ್ಯೆ ಇರುವಾಗ ಸಿಹಿ ತಿನಿಸುಗಳನ್ನು ತಿನ್ನದೇ ಇರುವುದು ಸರಿಯಲ್ಲ ಅಂತಾರೆ ಜನ. ಆದ್ರೆ, ಡಯಾಬಿಟೀಸ್ ಇರುವವರಿಗೆ ಇದು ದೊಡ್ಡ ಸಮಸ್ಯೆಯೇ ಸರಿ. ವರು ನಿರಂತರವಾಗಿ blood sugar level ಚೆಕ್ ಮಾಡಿಸಬೇಕು. ಡಯಾಬಿಟೀಸ್ ಇರುವವರು ಸ್ವಲ್ಪ ಪ್ರಮಾಣ ಸಿಹಿಯನ್ನು ಮಾತ್ರ ಸೇವಿಸಬೇಕು. ಇಲ್ಲದೇ ಹೋದಲ್ಲಿ, ದೇಹದಲ್ಲಿ ಇನ್ಸುಲೀನ್ ಉತ್ಪತ್ತಿ ಕಡಿಮೆಯಾಗುತ್ತದೆ. ಅದು ಉತ್ಪತ್ತಿ ಕಡಿಮೆಯಾದರೆ ರಕ್ತದಲ್ಲಿ ಗ್ಲೂಕೋಸ್ ಲೇವೆಲ್ ಹೆಚ್ಚಾಗುತ್ತದೆ.
ಎಷ್ಟು ತಿನ್ನಬೇಕು : ಸಿಹಿಯನ್ನು ತಿನ್ನಬೇಕು ಆದ್ರೆ, ಸ್ವಲ್ಪ ಮಿತಿಯಲ್ಲಿ ತಿನ್ನಬೇಕು. ಒಂದು ಅಥವಾ ಎರಡು ಸಿಹಿಯನ್ನು ತಿಂದು, ನಂತರ ಉಪ್ಪಿನಿಂದ ಮಾಡಿದ ತಿಂಡಿ ತಿಂದರೆ ಮನಸ್ಸಿಗೆ ನೆಮ್ಮದಿ ಇರುತ್ತದೆ. ಏನೇ ತಿಂದರೂ ಊಟ ಆದ ಮೇಲೆ ತಿನ್ನಬೇಕು. ಆದ್ದರಿಂದ ಜಾಸ್ತಿ ತಿನ್ನೋ ಅವಶ್ಯಕತೆ ಇರೋದಿಲ್ಲ. ಹಾಗೇ ಸಾಯಂಕಾಲ 6 ಗಂಟೆ ಮೇಲೆ ತಿಂದರೆ ಒಳ್ಳೆಯದು. ಯಾಕೆಂದರೆ ಆ ಸಮಯದಲ್ಲಿ ಜೀರ್ಣ ಶಕ್ತಿ ಸರಿಯಾಗಿರುತ್ತದೆ. ಒಂದೇ ಸಾರಿ sugar level ಜಾಸ್ತಿಯಾಗುವುದಿಲ್ಲ. ಡಯಾಬಿಟೀಸ್ ಇರುವವರು ಸಹ blood sugar level normal ಇರುವಾಗ ಹಾಗೂ ನಿಯಂತ್ರಣದಲ್ಲಿ ಇರುವಾಗ ಸಿಹಿಯನ್ನು ತಿನ್ನಬಹುದು. ಆದ್ರೆ, ನಿಯಂತ್ರಣದಲ್ಲಿ ಇಲ್ಲದೇ ಇರುವಾಗ ಸಿಹಿಯಿಂದ ದೂರವಿರುವುದು ತುಂಬಾ ಒಳ್ಳೆಯದು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?