Featured
ಧೋನಿ ಟೀಮ್ ಇಂಡಿಯಾ ಕಮ್‌ಬ್ಯಾಕ್ – ಡೀನ್ ಜೋನ್ಸ್ ಭವಿಷ್ಯ ಏನು ಗೊತ್ತಾ?
![](https://risingkannada.com/wp-content/uploads/2020/07/dhoni-scaled.jpg)
ರೈಸಿಂಗ್ ಕನ್ನಡ :
ಸ್ಪೋರ್ಟ್ಸ್ ಡೆಸ್ಕ್ :
ಐಪಿಎಲ್ ಡೇಟ್ ಫಿಕ್ಸ್ ಆಯ್ತು. ಡೇಟ್ ಕೂಡ ಅನೌನ್ಸ್ ಆಯ್ತು. ಸೆಪ್ಟೆಂಬರ್ 19 ರಿಂದ ಟೂರ್ನಿಯೂ ಆರಂಭವಾಗಲಿದೆ. ಈ ಬಾರಿಯ ಟೂರ್ನಿಯಲ್ಲಿ ಯುಎಇ ಆತಿಥ್ಯವಹಿಸಲಿದೆ ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಷ್ ಪಟೇಲ್ ತಿಳಿಸಿದ್ದಾರೆ. ಇನ್ನೂ ಖುಷಿ ವಿಷ್ಯ ಅಂದ್ರೆ, ಈ ಬಾರಿಯ ಐಪಿಎಲ್‌ನೊಂದಿಗೆ ಧೋನಿಯ ಟೀಮ್ ಇಂಡಿಯಾ ಕಮ್‌ಬ್ಯಾಕ್ ಭವಿಷ್ಯವೂ ನಿರ್ಧಾರವಾಗಲಿದೆಯಂತೆ.
ಎಂಎಸ್ ಧೋನಿ ಭಾರತ ತಂಡದಲ್ಲಿ ಮುಂದುವರಿಯುತ್ತಾರೋ ಅಥವಾ ಇಲ್ಲವೋ ಅನ್ನೋದನ್ನ ಐಪಿಎಲ್ ನಿರ್ಧರಿಸಲಿದೆ ಎಂದು ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಡೀನ್ ಜೋನ್ಸ್ ಅಭಿಪ್ರಾಯಪಟ್ಟಿದ್ದಾರೆ. ಕೊರೊನಾದಿಂದಾಗಿ ಐಪಿಎಲ್ ಅತಂತ್ರವಾಗಿತ್ತು. ಇದ್ರೊಂದಿಗೆ ಧೋನಿ ಟೀಮ್ ಇಂಡಿಯಾ ಭವಿಷ್ಯ ಕೂಡ ಡೋಲಾಯಮಾನವಾಗಿತ್ತು. ಆದ್ರೀಗ, ಐಪಿಎಲ್ ನಡೆಯೋದು ಪಕ್ಕಾ ಆಗಿದೆ. ಸೋ, ಧೋನಿ ಭವಿಷ್ಯ ಕೂಡ ಇಲ್ಲೇ ನಿರ್ಧಾರವಾಗಲಿದೆ ಎಂದಿದ್ದಾರೆ ಡೀನ್ ಜೋನ್ಸ್.
![](https://risingkannada.com/wp-content/uploads/2020/07/ms-dhoni-1444035948-800.jpg)
ಕಳೆದ ವರ್ಷದ ಏಕದಿನ ವಿಶ್ವಕಪ್‌ನ ಸೆಮೀಸ್‌ನಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಮುಗ್ಗರಿಸಿತ್ತು. ಧೋನಿ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದು ಅದೇ ಕೊನೆ. ಆದ್ರೀಗ ವಿಶ್ವಕಪ್ ಟೂರ್ನಿಯನ್ನು 2022ಕ್ಕೆ ಮುಂದೂಡಲಾಗಿದ್ದು ಆ ಅವಧಿಯಲ್ಲಿ ಐಪಿಎಲ್ ಟೂರ್ನಿ ನಡೆಯಲಿದೆ. ಹೀಗಾಗಿ 2021ರಲ್ಲಿ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪರ ಧೋನಿ ಆಡಬೇಕಾದರೆ ಈ ಬಾರಿಯ ಐಪಿಎಲ್ ಮತ್ತು 2021ರ ಐಪಿಎಲ್ ಟೂರ್ನಿಗಳಲ್ಲಿ ನೀಡುವ ಪ್ರದರ್ಶನ ನಿರ್ಣಾಯಕವಾಗಲಿದೆ ಎಂದಿದ್ದಾರೆ ಡೀನ್ ಜೋನ್ಸ್.
“ಸದ್ಯಕ್ಕೆ ಟೀಮ್ ಇಂಡಿಯಾ ಸೆಲೆಕ್ಟರ್ಸ್ ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಅವರನ್ನು ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸ್ಥಾನಕ್ಕೆ ನೆಚ್ಚಿಕೊಂಡಿದ್ದಾರೆ. ಒಂದು ವೇಳೆ ಧೋನಿ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದರೆ ಮಾತ್ರವೇ ಅವರಿಗೆ ಟೀಮ್ ಇಂಡಿಯಾ ಬಾಗಿಲು ತೆರೆಯಲಿದೆ. ಇಲ್ಲವಾದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಅವರಿಗೆ ಎಲ್ಲ ಬಾಗಿಲು ಮುಚ್ಚಿದಂತೆ. ಎಲ್ಲಕ್ಕಿಂತ ಹೆಚ್ಚಾಗಿ 40ರ ವಯಸ್ಸಿನಲ್ಲಿ ಕಮ್‌ಬ್ಯಾಕ್ ಮಾಡುವುದು ಸುಲಭವಲ್ಲ. ಎಂದು ಡೀನ್ ಜೋನ್ಸ್ ತಿಳಿಸಿದ್ದಾರೆ.
13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಸೆಪ್ಟೆಂಬರ್ 19ರಿಂದ ನವೆಂಬರ್ 8ರವರೆಗೆ 51 ದಿನಗಳ ಕಾಲ ಯುಎಇ ಅಂಗಣದಲ್ಲಿ ನಡೆಯುವುದು ಖಾತ್ರಿಯಾಗಿದೆ. ಎಲ್ಲ ಫ್ರಾಂಚೈಸಿ ತಂಡಗಳು ಆಗಸ್ಟ್ 20 ರಿಂದ ತಮ್ಮ ಶಿಬಿರ ಆರಂಭಿಸಲಿವೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?