Featured
ಅನ್ನದಾತನಾದ ಮಹೇಂದ್ರ ಸಿಂಗ್ ಧೋನಿ – ಸಾವಯವ ಕೃಷಿಯಲ್ಲಿ ಬ್ಯುಸಿ..!
![](https://risingkannada.com/wp-content/uploads/2020/07/WhatsApp-Image-2020-07-08-at-4.26.49-PM.jpeg)
ರೈಸಿಂಗ್ ಕನ್ನಡ :
ಸ್ಪೋರ್ಟ್ಸ್ ಡೆಸ್ಕ್ :
ಕೊರೊನಾ ನಡುವೆ ಧೋನಿ, ಸಾವಯವ ಕೃಷಿಯಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲಿ ತಮ್ಮದೇ ಬ್ರಾಂಡಿನ ಪರಿಸರ ಸ್ನೇಹಿ ರಸಗೊಬ್ಬರವನ್ನು ಪರಿಚಯಿಸಲಿದ್ದಾರೆ. ಕಳೆದ ಒಂದು ವರ್ಷದಿಂದ ಕ್ರಿಕೆಟ್‌ನಿಂದ ದೂರ ಇರೋ ಮಾಹಿ, ರಾಂಚಿಯಲ್ಲಿನ ತಮ್ಮ ನಿವಾಸದಲ್ಲಿ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಧೋನಿ ಮುಂದಿನ ನಿರ್ಧಾರದ ಬಗ್ಗೆ, ಅವರ ಮ್ಯಾನೇಜರ್ ಹಾಗೆ ಬಾಲ್ಯದ ಗೆಳೆಯ ಮಿಹಿರ್ ದಿವಾಕರ್ ತಿಳಿಸಿದ್ದಾರೆ.
ದೇಶಭಕ್ತಿ ಅನ್ನೋಗು ಧೋನಿಯ ರಕ್ತದಲ್ಲಿಯೇ ಇದೆ. ಅದು ಕೇವಲ ಕ್ರಿಕೆಟ್‌ಗಷ್ಟೇ ಸೀಮಿತವಲ್ಲ, ನೆಲ-ಜಲ-ಗಡಿ ವಿಚಾರದಲ್ಲೂ ಮಾಹಿ ದೇಶಭಕ್ತಿ ಮೆರೆಯುತ್ತಾರೆ. ಇದೀಗ 40 ರಿಂದ 50 ಎಕರೆ ಕೃಷಿ ಭೂಮಿ ಹೊಂದಿದ್ದು, ಪರಂಗಿ, ಬಾಳೆ ಹಣ್ಣಿನಂತಹ ಸಾವಯವ ಕೃಷಿಯಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ ಎಂದು ದಿವಾಕರ್ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಯಾವುದೇ ಕಮರ್ಷಿಯಲ್ ಜಾಹೀರಾತುಗಳಲ್ಲಿ ಧೋನಿ ಕಾಣಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ನಿಯೋ ಗ್ಲೋಬಲ್ ಹೆಸರಿನ ಕಂಪನಿ ಅಂಡಿ ಸದ್ಯದಲ್ಲಿಯೇ ಸಾವಯ ರಸಗೊಬ್ಬರನ್ನೂ ಪರಿಚಯಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಇತ್ತೀಚಿಗೆ ಧೋನಿ ಕೆಲ ವೀಡಿಯೋಗಳಲ್ಲಿ ಟ್ರ್ಯಾಕ್ಟರ್ ಓಡಿಸೋದನ್ನೂ ನಾವೆಲ್ಲರೂ ನೋಡಿದ್ದೇವೆ.
ಧೋನಿ ನಿವೃತ್ತಿ ಪ್ರಶ್ನೆಗೆ ಉತ್ತರಿಸಿದ ಮಿಹಿರ್ ದಿವಾಕರ್, ನಾವು ಕ್ರಿಕೆಟ್ ಬಗ್ಗೆ ಅವರ ಬಳಿ ಏನನ್ನೂ ಕೇಳೋದಿಲ್ಲ ಎಂದಿದ್ದಾರೆ. ಆದ್ರೆ ಒಂದಂತೂ ನಿಜ, ಮಾಹಿ ಐಪಿಎಲ್ ಬಗ್ಗೆ ತುಂಬಾನೆ ಉತ್ಸುಕರಾಗಿದ್ದರು. ಅದಕ್ಕಾಗಿ ಚೆನ್ನೈನಲ್ಲೂ ಕಾಣಿಸಿಕೊಂಡಿದ್ದರು. ಆದ್ರೆ ಕೊರೊನಾ ಎಲ್ಲಕ್ಕೂ ಬ್ರೇಕ್ ಹಾಕಿದೆ ಅನ್ನೋದನ್ನ ನೆನಪಿಸಿಕೊಳ್ಳಬಹುದು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?