Featured
ಹೀಗೂ ಉಂಟೆ..? ಹಳೆಯ ಟಿವಿಗೆ ಕೊಡ್ತಾರಂತೆ 10 ಲಕ್ಷ..! ಮಂಡ್ಯದಲ್ಲಿ ಜನ ಮರುಳೋ, ಜಾತ್ರೆ ಮರುಳೋ..?
ರೈಸಿಂಗ್ ಕನ್ನಡ:
ಮೋಹನ್ ರಾಜ್, ಮಂಡ್ಯ
ಬ್ಲ್ಯಾಕ್ & ವೈಟ್ ಟಿವಿ ಇದೆಯಾ..? ಹಳೆಯ ಮಾಡೆಲ್ನದ್ದಾಗಿರಬೇಕು..? ವರ್ಕಿಂಗ್ ಕಂಡೀಷನ್ ನಲ್ಲಿ ಇದ್ರೆ ಸಾಕು..ಜೊತೆಗೆ ಹಳೆಯ ರೇಡಿಯೋ, ಟೇಪ್ ರೆಕಾರ್ಡರ್ ಇದೆಯಾ..? ಅದಕ್ಕೂ ಲಕ್ಷಾಂತರ ರೂಪಾಯಿ. ಒಂದೆರಡು ಬ್ಲ್ಯಾಕ್ ಅಂಡ್ ವೈಟ್ ಟಿವಿ, ರೇಡಿಯೋ ಮತ್ತು ಟೇಪ್ ರೆಕಾರ್ಡರ್ ಇದ್ರೆ ಸಾಕು ನೀವು ಕುಂತಲ್ಲೇ ಲಕ್ಷಾಧಿಪತಿಗಳಾಗಿ ಹೋಗ್ತಿರ. ಯಸ್ ಇಂತಹದ್ದೊಂದು ಸುದ್ದಿ ಹಬ್ಬಿದ್ದು ಮಂಡ್ಯ ಜಿಲ್ಲೆಯಲ್ಲಿ. ಈ ಸುದ್ದಿ ಯಾಕೆ ಹರಡಿತ್ತು, ಯಾರಿಂದ ಹರಡಿತ್ತು, ಇದ್ರಿಂದ ಲಾಭ ಏನು ಅಂತ ಯಾರಿಗೂ ಗೊತ್ತಿಲ್ಲ. ಆದ್ರೆ ಮಂಡ್ಯ ಜಿಲ್ಲೆಯಲ್ಲಿ ಜನ ಮಾತ್ರ ಬ್ಲಾಕ್ & ವೈಟ್ ಟಿವಿಯ ಹಿಂದೆ ಬಿದ್ದಿದ್ದು ಸುಳ್ಳಲ್ಲ.
ಅಂದಹಾಗೇ ಬ್ಲ್ಯಾಕ್ & ವೈಟ್ ಟಿವಿ ಹಾಗೂ ಓಲ್ಡ್ ಮೇನಿಯಾಕ್ಕೆ ಇದ್ದಕ್ಕಿದ್ದ ಹಾಗೇ ಬೆಲೆ ಇದೆ ಅಂತ ಸುದ್ದಿ ಹಬ್ಬಿದ್ದೇ ತಡ, ಮಂಡ್ಯದ ಜನ ಹಳೆಯ ಬ್ಲಾಕ್& ಟಿವಿ ಕೇಳಿಕೊಂಡು ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ಸಂಚಾರ ಕೂಡ ಮಾಡಿಬಿಟ್ಟರು, ಹಳೆಯ ಟಿವಿಗೆ ೧೦ ಲಕ್ಷ ಕೊಡ್ತಾರೆಂದು ಹಬ್ಬಿರೋ ವದಂತಿ ಹಿಂದೆ ಜನ ಸುತ್ತಾಡ ತೊಡಗಿದ್ರು. ಹಳೆಯ ಟಿವಿಗಳ ಪೈಕಿ ಡೋರ್ ಇರೋ ಕಂಡೀಷನ್ ಟಿವಿಗೆ ಡಿಮ್ಯಾಂಡ್ ಹೆಚ್ಚಿತ್ತು. ಮಂಡ್ಯ ಜಿಲ್ಲೆಯಲ್ಲಿ ರಾತ್ರೋ ರಾತ್ರಿ ಶುರುವಾದ ಹೊಸ ವದಂತಿ ಬಗ್ಗೆ ಜನ ಹಿಂದೆ ಮುಂದೆ ಒಂಚೂರು ಯೋಚನೆ ಮಾಡದೇ ಇದ್ದಿದ್ದು ಮಾತ್ರ ದುರಂತ.
ವದಂತಿ ನಂಬಿ ಹಳೆಯ ಬ್ಲಾಕ್ & ವೈಟ್ ಟಿವಿ ಹಿಂದೆ ಬಿದ್ದಿರೋ ಜನ ಇನ್ನೂ ಅದನ್ನು ಹುಡುಕಾಡ್ತನೇ ಇದ್ದಾರೆ. ಇದ್ರ ಜೊತೆ ಹಳೆಯ ಟೇಪ್ ರೆಕಾರ್ಡರ್ ಮತ್ತು ರೇಡಿಯೋ ಇದೆಯಾ ಅಂತನೂ ಹಳ್ಳಿ ಹಳ್ಳಿಯಲ್ಲಿ ಕೇಳ್ತಿದ್ದಾರೆ. ಅಸಲಿ ಕಾರಣ ತಿಳಿಯಲಾಗದೆ ಟಿವಿ ಇಟ್ಟುಕೊಂಡು ಕೊಡಲಾಗದೆ ಯೋಚಿಸ್ತಿರೋ ಜನ ಕೂಡ ಇದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಹಳೆಯ ಬ್ಲಾಕ್ & ವೈಟ್ ಟಿವಿಗಳ ಚಿತ್ರ ಓಡಾಡ್ತಿದೆ. ಅಷ್ಟಕ್ಕೂ ಇಲ್ಲಿಯ ತನಕ ಈ ಬ್ಲ್ಯಾಕ್ ಅಂಡ್ ವೈಟ್ ಟಿವಿ ಡಿಮ್ಯಾಂಡ್ನ ಅಸಲಿ ಕಾರಣವಂತೂ ಯಾರಿಗೂ ಬಿಡಿಸಲಾಗಲಿಲ್ಲ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?