Connect with us

Featured

ಕೊರೊನಾ ಜೊತೆಗೆ ಮತ್ತೊಂದು ಡೇಂಜರ್- ಕೀಟದ ಕಾಟಕ್ಕೆ ಬೆಚ್ಚಿಬಿದ್ದ ರಾಷ್ಟ್ರರಾಜಧಾನಿ – ಪಾಕ್, ಚೀನಾದ ಅಟ್ಯಾಕ್​ಗೂ ಹೆದರದ ಭಾರತಕ್ಕೆ ಹೊಸ ಸವಾಲು

ರೈಸಿಂಗ್​ ಕನ್ನಡ:

ಬೆಂಗಳೂರು:

Advertisement

ಚೀನಾ ಹುಟ್ಟುಹಾಕಿದ ಕೊರೊನಾ ವೈರಸ್​​ ಇಡೀ ವಿಶ್ವವನ್ನೇ ನಡುಗಿಸಿದೆ. ಅಮೆರಿಕಾ, ಇಂಗ್ಲೆಂಡ್​​, ಫ್ರಾನ್ಸ್​, ಇಟಲಿಯಂತಹ ಬಲಿಷ್ಟ ದೇಶಗಳೇ ಕೊರೊನಾ ಮಹಾಮಾರಿಗೆ ಹೆದರಿ ಕಂಗೆಟ್ಟಿವೆ. ಭಾರತದಲ್ಲಂತೂ ದಿನದಿಂದ ದಿನಕ್ಕೆ ಕೋವಿಡ್​ 19 ಪಾಸಿಟಿವ್​ ಪ್ರಕರಣಗಳು ಹೆಚ್ಚಾಗುತ್ತಿವೆ. ಕೇಂದ್ರ ಸರಕಾರ ಲಾಕ್​ ಡೌನ್​​ ಮಾಡಿದ್ರೂ ಹೆಚ್ಚಿನ ಪ್ರಯೋಜನ ಆಗಿರಲಿಲ್ಲ. ಈಗ ಅನ್​ ಲಾಕ್​ ಸಮಯದಲ್ಲಿ ಕೊರೊನಾ ನಿಯಂತ್ರಣ ಮಾಡುವುದೇ ಸವಾಲಿನ ಕೆಲಸವಾಗುತ್ತಿದೆ.

ಭಾರತ ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ಸಮಯದಲ್ಲೇ ಮತ್ತೊಂದು ಅಟ್ಯಾಕ್​​ ನಡೆದಿದೆ. ಚೀನಾ ಮತ್ತು ಪಾಕ್​ ಬೆದರಿಕೆಗಳನ್ನು ಗಡಿಯಲ್ಲೇ ಮಟ್ಟಹಾಕಿದ್ದ ಭಾರತ ಈಗ ಕೀಟದ ಕಾಟಕ್ಕೆ ಹೆದರಿದೆ. ರಾಜಧಾನಿ ದೆಹಲಿ ಲೊಕಸ್ಟ್​​ ಕೀಟಕ್ಕೆ ಕಂಗೆಟ್ಟಿದೆ. ಮೊದಲೇ ಕೊರನಾಕ್ಕೆ ಹೆದರಿ ಮನೆಯೊಳಗೆ ಕುಳಿತಿದ್ದವರು ಈಗ ಕಿಟಕಿ ಬಾಗಿಲುಗಳನ್ನು ಕೂಡ ಮುಚ್ಚಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ.

Advertisement

3ದಶಕಗಳ ಬಳಿಕ ಭಾರತದಲ್ಲಿ ಈ ರೀತಿಯ ಕೀಟಗಳು ರೈತರ ಪಾಲಿಗೆ ಯಮರೂಪಿಯಾಗಿವೆ. ಕೀಟಗಳಿಂದ ರೈತರ ಬೆಳೆಗಳನ್ನು ರಕ್ಷಿಸಲು ಕೆಲವು ರಾಜ್ಯ ಸರಕಾರಗಳು ಡ್ರೋಣ್​ ಪ್ರಯೋಗವನ್ನೂ ಮಾಡಿದ್ದವು. ಆದ್ರೆ ಈ ಲೊಕಸ್ಟ್​ಗಳ ಕಂಟ್ರೋಲ್​ ಮಾತ್ರ ಇನ್ನೂ ಸಾಧ್ಯವಾಗಿಲ್ಲ.

ಏನಿದು  ಲೊಕಸ್ಟ್​​..?

ಲೊಕಸ್ಟ್​​ ದೈತ್ಯ ಕೀಟ. ಇದರ ಟಾರ್ಗೆಟ್​​ ರೈತರು ಬೆಳೆಯುವ ಬೆಳೆಗಳು. ಅದ್ರಲ್ಲೂ ಸೀಸನಲ್​ ಬೆಳೆಗಳ ಮೇಲೆ ಈ ಲೊಕಸ್ಟ್​ಗಳು ಅಟ್ಯಾಕ್​ ಮಾಡ್ತು ಅಂದ್ರೆ ಸಾಕು ಆ ಬೆಳೆಗಳ ಕಥೆ ಮುಗಿದ ಹಾಗೆಯೇ. ಕೇವಲ ಹಸಿರು ಬೆಳೆಗಳನ್ನು ನಾಶಪಡಿಸುವ ಈ ಕೀಟಗಳು ರೈತರ ಪಾಲಿಗೆ ಯಮದೂತ.  ಗುಂಪು ಗುಂಪಾಗಿ ಹಾರುವ ಈ ಕೀಟಗಳು ಗಾಳಿ ಹೇಗೆ ಚಲಿಸುತ್ತದೋ ಅದೇ ಮುಖದಲ್ಲಿ ಚಲಿಸಿಬಿಡುತ್ತವೆ. ದಿನಕ್ಕೆ ಸರಿಸುಮಾರು 150 ಕಿಲೋಮೀಟರ್​ ಚಲಿಸುವ ಈ ಲೊಕಸ್ಟ್​ಗಳು  ಕೊರೊನಾದ ಜೊತೆ ರೈತರ ಹೊಟ್ಟೆಗೆ ಚೆನ್ನಾಗಿ ಹೊಡೆಯುತ್ತಿವೆ.

Advertisement

ಎಲ್ಲಿಂದ ಬಂತು..? ಎಲ್ಲೆಲ್ಲಾಗಿತ್ತು ಅಟ್ಯಾಕ್​..?

ಅಂದಹಾಗೇ, ಈ ಲೊಕಸ್ಟ್​ ಕೀಟಗಳು ಆಫ್ರಿಕಾದಲ್ಲಿ ತಿಂದು ತೇಗಿವೆ. ಅಲ್ಲಿಂದ ಇರಾನ್​, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳಲ್ಲಿ ಬೆಳದ ಬೆಳೆಗಳನ್ನು ನೆಲಸಮ ಮಾಡಿಬಿಟ್ಟಿವೆ. ಬಕಾಸುರ ಹೊಟ್ಟೆಯ ಈ ಲೊಕಸ್ಟ್​ಗಳು ಭಾರತದಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್​, ರಾಜಸ್ಥಾನ, ಹರ್ಯಾಣ ಮತ್ತು ಉತ್ತರ ಪ್ರದೇಶದಲ್ಲಿ ತನ್ನ ಕೆಲಸ ಮುಗಿಸಿ ಈಗ ರಾಷ್ಟ್ರರಾಜಧಾನಿಯತ್ತ ಎಂಟ್ರಿಕೊಡುತ್ತಿದೆ.  ಹಗಲಿನ ವೇಳೆಯಲ್ಲಿ ಮಾತ್ರ ಚಲಿಸುವ ಈ ಕೀಟಗಳನ್ನು ಕಂಟ್ರೋಲ್​ ಮಾಡಲು ಸರಕಾರಗಳು ಹರಸಾಹಸ ಮಾಡುತ್ತಿದೆ.

ರಾಜಧಾನಿಯಲ್ಲಿ ವಾರ್ನಿಂಗ್​​:

ಉತ್ತರ ಪ್ರದೇಶದ ಗಾಝಿಯಬಾದ್ ಮೂಲಕ ರಾಷ್ಟ್ರರಾಜಧಾನಿ ದೆಹಲಿ ಪ್ರವೇಶಕ್ಕೆ ಲೊಕಸ್ಟ್​ಗಳು ಸಜ್ಜಾಗುತ್ತಿರುವಾಗಲೇ ಗುರ್​ ಗಾಂವ್​ ಸ್ಥಳೀಯ ಆಡಳಿತ  ಜನರಿಗೆ ಎಲ್ಲಾ ಕಿಟಿಕಿ ಬಾಗಿಲುಗಳನ್ನು ಮುಚ್ಚುವಂತೆ ಸೂಚನೆ ನೀಡಿದೆ. ಅಷ್ಟೇ ಅಲ್ಲ ಈ ಕೀಟಗಳನ್ನು ಜೋರಾದ ಶಬ್ದದಿಂದ ಮಾತ್ರ ದೂರವಿಡಲು ಸಾಧ್ಯವಿರುವುದರಿಂದ​​ ಆದಷ್ಟು ಶಬ್ದ ಮಾಡುವಂತೆ ಸೂಚನೆ ನೀಡಿದೆ.

Advertisement

ಒಂದು ಕಡೆ ಕೊರೊನಾ ಮತ್ತೊಂದು ಕಡೆ ಲೊಕಸ್ಟ್​. ಸರಕಾರಗಳ ಪಾಲಿಗೆ ಕೊರೊನಾ ಕಟ್ಟಿಹಾಕುವುದೇ ಸವಾಲಿನ ಕೆಲಸವಾಗಿರುವ ಈ ಸಮಯದಲ್ಲಿ ಕೀಟಗಳ ಕಾಟವನ್ನು ಹೇಗೆ ತಪ್ಪಿಸುವುದು ಅನ್ನೋದು ಮತ್ತೊಂದು ಚಿಂತೆಯಾಗಿದೆ.

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ