Featured
ವಿಚಿತ್ರವಾದರೂ ಸತ್ಯ..! ಸಮೋಸ ತಂದ ಸಾವು..! ಹೀಗೂ ಉಂಟೆ…!
![](https://risingkannada.com/wp-content/uploads/2020/06/Buddist-Savu.jpg)
ರೈಸಿಂಗ್ ಕನ್ನಡ:-
ಕಾರಾವಾರ:-ಸಾವು ಮನುಷ್ಯನಿಗೆ ಹೇಗೆ ಬರುತ್ತದೆ ಎಂದು ಉಹಿಸುವುದು ಕೂಡ ಅಸಾಧ್ಯ. ಒಂದು ಸಾಮಾನ್ಯ ಸಮೋಸಾ ಸಾವಿಗೆ ಕಾರಣವಾಗುತ್ತದೆ ಅಂದ್ರೆ ನಂಬ್ತಿರಾ… ನಂಬಲೇ ಬೇಕು ಯಾಕಂದ್ರೆ ವಿಧಿಯಾಟ ಭಯಾನಕವೂ ಹೌದು, ವಿಚಿತ್ರವೂ ಹೌದು…!
ಅಂದಹಾಗೇ ಕಾರಾವಾರ ಜಿಲ್ಲೆಯ ಮುಂಡಗೋಡದಲ್ಲಿ ಆಗಿದ್ದು ಇಷ್ಟು. ಮುಂಡಗೋಡದ ಟಿಬೆಟಿಯನ್ ಕ್ಯಾಂಪ್ ನಂಬರ್2ರ ಗೋಮಾಂಗ್ ವಸತಿ ನಿಲಯದಲ್ಲಿ ವಾಸವಿದ್ದ ಮಂಗೋಲಿಯಾ ದೇಶದ ಬಿಕ್ಕು ಬಯಾರ್ಜವಖ್ಲನ್ ದಾಶ್ದೋರ್ಜ ಸಮೋಸ ತಿಂದಿದ್ದಾನೆ. ಇನ್ನೇನು ಸಮೋಸವನ್ನು ಬಾಯಿಗೆ ಇಟ್ಟುಕೊಂಡ ಅದರ ರುಚಿ ಸವಿಯಬೇಕು ಅನ್ನುವಾಗಲೇ ಬಿಕ್ಕಳಿಕೆ ಶುರುವಾಗಿದೆ. ಬಿಕ್ಕಳಿಕೆಯನ್ನು ಸುಲಭವಾಗಿ ಕಂಟ್ರೋಲ್ ಮಾಡಬಹುದು ಅನ್ನುವಷ್ಟರಲ್ಲಿ ಉಸಿರಾಡಲು ತೊಂದರೆಯಾಗಿದೆ. ಸಮೋಸಾ ಗಂಟಲಲ್ಲೇ ಸಿಕ್ಕಿಕೊಂಡಿದೆ. ಸ್ವಲ್ಪ ಹೊತ್ತಿನಲ್ಲೇ ಉಸಿರು ಕಟ್ಟಿ ಬಿಕ್ಕು ಸಾವನಪ್ಪಿದ್ದಾನೆ. ಈ ವಿಚಿತ್ರ ಘಟನೆ ಮುಂಡಗೋಡಿನ ಟಿಬೆಟಿಯನ್ ಕ್ಯಾಂಪ್ ನಲ್ಲಿ ನಡದಿದೆ.
ಅಂದಹಾಗೇ, ಈ ವಿಚಿತ್ರ ಘಟನಗೆ ಎಲ್ಲರನ್ನೂ ದಂಗುಬಡಿಸಿದ. ವಿಧಿಯ ಆಟಕ್ಕೆ ಎಲ್ಲರೂ ಹಿಡಿಶಾಪ ಹಾಕ್ತಿದ್ದಾರೆ. ಸದ್ಯ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?
ಪ್ರಭಾಸ್ ಫ್ಯಾನ್ಸ್ ದಿಲ್ ಖುಷ್ : ಈ ವರ್ಷ ರಾಧೆ ಶ್ಯಾಮ್.. ಮುಂದಿನ ವರ್ಷ ಸಲಾರ್ ರಿಲೀಸ್ಗೆ ಮುಹೂರ್ತ ಫಿಕ್ಸ್