Featured
ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಶವ ಕೊಡಲು ವಿಜಯಪುರದ ಖಾಸಗಿ ಆಸ್ಪತ್ರೆ ಹಿಂದೇಟು, ಆರೋಪ
ರೈಸಿಂಗ್ ಕನ್ನಡ :
ವಿಜಯಪುರ:
ಕೊರೊನಾದಿಂದ ಸಾವನಪ್ಪಿದ ವ್ಯಕ್ತಿಯೊಬ್ಬನ ಶವವನ್ನ ಕೊಡಲು ವಿಜಯಪುರದ ಖಾಸಗಿ ಆಸ್ಪತ್ರೆಯೊಂದು ಹಿಂದೇಟು ಹಾಕಿದೆ ಎಂಬ ಆರೋಪ ಕೇಳಿ ಬಂದಿದೆ.
ಬೆಳಗಾವಿ ಜಿಲ್ಲೆ ಸಂಕೇಶ್ವರ ಮೂಲಕ ವ್ಯಕ್ತಿ ಕಳೆದ 12 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. 40 ವರ್ಷದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದರು.
ಖಾಸಗಿ ಆಸ್ಪತ್ರೆಯವರು 8 ಲಕ್ಷ ರೂ. ಬಿಲ್ ಮಾಡಿದ್ದರು. ಬಾಕಿ 3 ಲಕ್ಷ ರೂಪಾಯಿ ಬಿಲ್ ಭರಿಸಿ ಮೃತ ದೇಹ ತೆಗೆದುಕೊಂಡು ಹೋಗವಂತೆ ಮೃತನ ಸಂಬಂಧಿಕರಿಗೆ ಖಾಸಗಿ ಆಸ್ಪತ್ರೆಯವರು ಸೂಚಿಸಿದ್ಧಾರೆ. ಮೃತನ ಸಂಬಂಧಿಕರು 4.87 ಲಕ್ಷ ರೂಪಾಯಿ ಮಾತ್ರ ಬಿಲ್ ಪಾವತಿಸಿದ್ದರು.
ಬಾಕಿ ಬಿಲ್ ಪಾವತಿಸಿ ಶವ ತೆಗೆದುಕೊಂಡು ಹೋಗುವಂತೆ ಮೃತ ಸಂಬಂಧಿಕರಿಗೆ ಖಾಸಗಿ ಆಸ್ಪತ್ರೆಯವರು ಸೂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ವೈದ್ಯರ ನಡೆ ಖಂಡಿಸಿ ಮೃತನ ಸಂಬಂಧಿಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ. ತಮಟೆ ಬಾರಿಸಿ ಆಸ್ಪತ್ರೆಯವರ ನಡೆ ಖಂಡಿಸಿದ್ದಾರೆ. ಸ್ಥಳಕ್ಕೆ ಆದರ್ಶನಗರ ಪೊಲೀಸರು ಬಂದು ವಿಚಾರಣೆ ನಡೆಸುತ್ತಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?