Featured
ದೈನಂದಿನ ರಾಶಿ ಭವಿಷ್ಯ|ಶುಕ್ರವಾರ| ಜುಲೈ03, 2020
ಮೇಷ:
ಆತ್ಮೀಯರ ಆಗಮನದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಮ್ಮ ಪ್ರತಿಭೆಗೆ ತಕ್ಕ ಫಲ ಸಿಗುತ್ತದೆ. ಹಳೆಯ ಹಣ ವಸೂಲಿ ಸಾಧ್ಯತೆ. ಆಧ್ಯಾತ್ಮಿಕ ವಿಚಾರದಲ್ಲಿ ಹಿರಿಯರ ಬೆಂಬಲ.
ವೃಷಭ:
ಮನೆಯಲ್ಲಿ ಅಶಾಂತಿ ಇದ್ದರೂ ಕೆಲಸ ಕಾರ್ಯಗಳಲ್ಲಿ ಜಯ ಸಿಗಲಿದೆ. ಉದ್ಯೋಗದಲ್ಲಿ ಭಡ್ತಿ, ವಿವಾಹದ ಯೋಗವಿದೆ. ಖರ್ಚು ಮಿತಿಮೀರುವ ಸಾಧ್ಯತೆ. ಆರೋಗ್ಯದಲ್ಲಿ ಏರುಪೇರು, ಭೂಮಿ ಖರೀದಿಸುವ ಯೋಜನೆ ಸಾಧ್ಯತೆ.
ಮಿಥುನ:
ದಾನ-ಧರ್ಮದಲ್ಲಿ ಆಸಕ್ತಿ ಇರಲಿದೆ. ಶತ್ರು ನಾಶವಾಗಿ ಸುಖ ಜೀವನ ಪ್ರಾಪ್ತಿಯಾಗಲಿದೆ., ಮೃತ್ಯು ಭಯ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯೆಯಲ್ಲಿ ಆಸಕ್ತಿ, ವಿದೇಶ ಪ್ರಯಾಣ ಯೋಗವಿದೆ. ಮಾತಿನ ಮೇಲೆ ಹಿಡಿತ ಅಗತ್ಯವಿರಲಿ.
ಕಟಕ:
ವ್ಯವಹಾರದಲ್ಲಿ ಏರುಪೇರಾಗುವ ಸಾಧ್ಯತೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಂಭವ. ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಲಿದೆ. ಶೀತ ಸಂಬಂಧಿತ ರೋಗ ಕಾಣಿಸಿಕೊಳ್ಳುವ ಸಾಧ್ಯತೆ.
ಸಿಂಹ:
ಸಿನಿಮಾ ಕ್ಷೇತ್ರದವರಿಗೆ ಸುಸಮಯ. ನೆರೆಹೊರೆಯವರ ಜೊತೆ ಸುತ್ತಾಟ, ಹಣಕಾಸು ವೆಚ್ಚವಾಗಲಿದೆ. ಸುಗಂಧ ದ್ರವ್ಯ ವ್ಯಾಪಾರಿಗಳಿಗೆ ಲಾಭವಿದೆ. ಷೇರುವಹಿವಾಟು ಬೇಡ. ಎಚ್ಚರಿಕೆಯ ನಡೆ ಇರಲಿ.
ಕನ್ಯಾ :
ಹಳೇ ಗೆಳೆಯರ ಭೇಟಿ ಸಾಧ್ಯತೆ. ವೃತ್ತಿ ಕ್ಷೇತ್ರದಲ್ಲಿ ಯಶಸ್ಸು, ಮಗಳಿಂದ ಶುಭ ಸುದ್ದಿ ಸಿಗಲಿದೆ. ಹಿತಶತ್ರುಗಳ ಬಗ್ಗೆ ಎಚ್ಚರಿಕೆ ಇರಲಿ.
ತುಲಾ :
ಕೃಷಿಕರಿಗೆ ಈ ದಿನ ಲಾಭವಾಗಲಿದೆ. ಗೆಳೆಯರಿಂದ ಕಷ್ಟ ಎದುರಾಗಲಿದೆ. ಭೂ ಲಾಭ, ಮನಸ್ಸಿನಲ್ಲಿ ಗೊಂದಲ ಇರಲಿದೆ. ಮಾನಸಿಕ ನೆಮ್ಮದಿ ಕಡಿಮೆ ಇರಲಿದೆ.
ವೃಶ್ಚಿಕ :
ಆತ್ಮೀಯರಿಂದ ಸಹಾಯ ಸಿಗಲಿದೆ. ವಾಹನ ಚಾಲನೆಯಲ್ಲಿ ಎಚ್ಚರ ಅಗತ್ಯ. ಉದ್ಯೋಗದಲ್ಲಿ ಕಿರಿಕಿರಿಯಾಗಲಿದೆ. ನಂಬಿಕಸ್ಥರಿಂದ ದ್ರೋಹವಾಗಲಿದೆ. ಮಹಾವಿಷ್ಣುವಿನ ಪೂಜೆ ಮಾಡಿ.
ಧನಸ್ಸು:
ಸ್ವಪ್ರಯತ್ನದಿಂದ ಕಾರ್ಯ ಸಿದ್ಧಿಯಾಗುವುದು ಖಚಿತ. ಸ್ನೇಹಿತರ ಭೇಟಿ ಆಗಲಿದೆ. ಅಧಿಕವಾದ ಖರ್ಚು ತಲೆನೋವು ತರಲಿದೆ. ಚಂಚಲ ಮನಸ್ಸಿನಿಂದ ತೊಂದರೆಗಳು ಎದುರಾಗಲಿವೆ.
ಮಕರ:
ನೂತನ ಕೆಲಸ ಕಾರ್ಯಗಳಿಗೆ ಕೈ ಹಾಕುತ್ತೀರಿ. ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದೆ. ಸಂಗಾತಿಯ ಸಲಹೆಯಿಂದ ಮಾನಸಿಕ ನೆಮ್ಮದಿ ಸಿಗಲಿದೆ.
ಕುಂಭ:
ದೂರ ಪ್ರಯಾಣದಿಂದ ದೇಹಕ್ಕೆ ಅನಾಯಸ. ಮಾನಸಿಕ ಕಿರಿಕಿರಿ ಎದುರಾಗಲಿದೆ. ಗೆಳೆಯರಿಂದಲೂ ಮಾನಸಿಕ ಒತ್ತಡ ಎದುರಾಗಲಿದೆ. ಈಶ್ವರ ಪೂಜೆ ಮಾಡಿ.
ಮೀನ:
ಸ್ತ್ರೀಯರಿಗೆ ಲಾಭವಿರಲಿದೆ. ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ. ಇಲ್ಲ ಸಲ್ಲದ ಅಪವಾದ ಎದುರಾಗಲಿದೆ. ಮಹಾಲಕ್ಷ್ಮಿ ಪೂಜೆಯಿಂದ ಒಳ್ಳೆಯದಾಗಲಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?