Featured
ಬಾಕ್ಸಾಫೀಸ್ನಲ್ಲೇ ಅಲ್ಲ, ಟಿವಿಯಲ್ಲೂ ದರ್ಶನ್ ನಂಬರ್ 01..! ಕುರುಕ್ಷೇತ್ರ ಸಿನಿಮಾಗೆ ಅತೀ ಹೆಚ್ಚು ರೇಟಿಂಗ್..!
![](https://risingkannada.com/wp-content/uploads/2020/01/trp.jpg)
ಡಿ ಬಾಸ್ ದರ್ಶನ್ ತಾನು ಬಾಕ್ಸಾಫೀಸ್ ಸುಲ್ತಾನ ಅಷ್ಟೇ ಅಲ್ಲ, ಕಿರುತೆರೆಯಲ್ಲೂ ನಾನೇ ಸುಲ್ತಾನ ಅನ್ನೋದನ್ನ ಸಾಬೀತು ಮಾಡಿದ್ದಾರೆ. ದರ್ಶನ್ ಅಭಿನಯಿಸಿದ್ದ ಕುರುಕ್ಷೇತ್ರ ಸಿನಿಮಾ ಇತ್ತೀಚೆಗಷ್ಟೇ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಕುರುಕ್ಷೇತ್ರ ಸಿನಿಮಾವನ್ನ ಅತ್ಯಂತ ಹೆಚ್ಚು ಜನ ವೀಕ್ಷಣೆ ಮಾಡಿರೋದಾಗಿ ಬಾರ್ಕ್ ಅನ್ನೋ ಸಂಸ್ಥೆ ನೀಡುವ ಟಿಆರ್ಪಿ ವರದಿಯಲ್ಲಿ ಬಹಿರಂಗವಾಗಿದೆ. ಟಿವಿಗಳ ಜನಪ್ರಿಯತೆಯನ್ನ ಟಿಆರ್ಪಿ ಹಾಗೂ ಜಿಆರ್ಪಿಯಲ್ಲಿ ಅಳೆಯಲಾಗುತ್ತೆ. ಪ್ರತಿವಾರ ಟಿವಿಗಳ ಟಿಆರ್ಪಿ ಬಿಡುಗಡೆ ಆಗುತ್ತೆ. ಅದರಂತೆ ಈ ವಾರ ಬಿಡುಗಡೆ ಆಗಿರೋ ಟಿಆರ್ಪಿಯಲ್ಲಿ ಕುರುಕ್ಷೇತ್ರ ನಂಬರ್ ಒನ್ ಸ್ಥಾನವನ್ನ ಪಡೆದುಕೊಂಡಿದೆ.
ಸಾಮಾನ್ಯವಾಗಿ ಕನ್ನಡದಲ್ಲಿ ಜೊತೆ ಜೊತೆಯಲಿ ಹಾಗೂ ಮಂಗಳಗೌರಿ ಮದುವೆ ನಂಬರ್ 1 ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ವು. ಆದ್ರೆ, ಎಲ್ಲಾ ಸೀರಿಯಲ್ಗಳನ್ನ ಹಿಂದಕ್ಕೆ ಹಾಕಿರೋ ದರ್ಶನ್ ಕುರುಕ್ಷೇತ್ರ ನಂಬರ್ 1 ಸ್ಥಾನಕ್ಕೇರಿದೆ. ಪ್ರತಿ ಅರ್ಧ ಗಂಟೆಗೆ ಕುರುಕ್ಷೇತ್ರ ಸಿನಿಮಾವನ್ನ 1 ಕೋಟಿ 24 ಲಕ್ಷದ 26 ಸಾವಿರ ವೀಕ್ಷಕರು ನೋಡಿದ್ದಾರೆ ಎಂದು ಬಾರ್ಕ್ ವರದಿಯಲ್ಲಿ ಗೊತ್ತಾಗಿದೆ.
ಈ ಮೂಲಕ ಎಲ್ಲಾ ಸೀರಿಗಳನ್ನ ಹಿಂದಿಕ್ಕಿರೋ ಕುರುಕ್ಷೇತ್ರ ಕೇವಲ ಬಾಕ್ಸಾಫೀಸ್ನಲ್ಲೇ ಅಲ್ಲದೆ, ಕಿರುತೆರೆಯ ಟಿಆರ್ಪಿಯಲ್ಲೂ ನಂಬರ್ ಒನ್ ಅನ್ನೋದನ್ನ ಸಾಬೀತು ಮಾಡಿದ್ದು, ಹೊಸ ದಾಖಲೆ ಮಾಡಿದ್ದಾರೆ. ದರ್ಶನ್ ಟಿವಿಯಲ್ಲಿ ದಾಖಲೆ ಮಾಡ್ತಿರೋದು ಇದೇ ಮೊದಲಲ್ಲ. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಿದ್ದ ವೀಕ್ ಎಂಡ್ ವಿತ್ ರಮೇಶ್ ಶೋನಲ್ಲಿ ದರ್ಶನ್ ಭಾಗಿಯಾಗಿದ್ರು.
ಆ ಸಮಯದಲ್ಲೂ ದರ್ಶನ್ ಭಾಗಿಯಾಗಿದ್ದ ವೀಕ್ ಎಂಡ್ ವಿತ್ ರಮೇಶ್ ಶೋಗೆ ಅತೀ ಹೆಚ್ಚಿನ ಟಿಆರ್ಪಿ ಬಂದಿತ್ತು. ಈವರೆಗೆ ವೀಕ್ ಎಂಡ್ ವಿತ್ ರಮೇಶ್ ಶೋನಲ್ಲಿ ಅತೀ ಹೆಚ್ಚು ರೇಟಿಂಗ್ ಬಂದಿರೋ ಎಪಿಸೋಡ್ ಅಂದ್ರೆ, ಅದು ದರ್ಶನ್ ಅವರದ್ದು ಎಂದು ಝೀ ವಾಹಿನಿಯೇ ಹೇಳಿತ್ತು. ಇದೀಗ ದರ್ಶನ್ ಅವರ ಕುರುಕ್ಷೇತ್ರ, ಟಿವಿ ಮಾಧ್ಯಮಗಳ ದಾಖಲೆಗಳನ್ನ ಧೂಳೀಪಟ ಮಾಡಿ, ನಂಬರ್ ಒನ್ ಸ್ಥಾನದಲ್ಲಿದೆ.
ಎಷ್ಟರ ಮಟ್ಟಿಗೆ ಅಂದ್ರೆ, ಕುರುಕ್ಷೇತ್ರ ಹಾಗೂ ಖ್ಯಾತ ಧಾರವಾಹಿಗಳಾದ ಮಂಗಳಗೌರಿ ಮದುವೆ ಮತ್ತು ಜೊತೆ ಜೊತೆಯಲಿ ಸೀರಿಯಲ್ಗಳ ಒಟ್ಟು ವೀಕ್ಷಕರನ್ನ ಕುರುಕ್ಷೇತ್ರ ಸಿನಿಮಾ ಒಂದೇ ಮೀರಿಸಿದೆ. ಅದೇನೇ ಆಗ್ಲಿ, ದರ್ಶನ್ ಎಲ್ಲೇ ಇದ್ರೂ, ಎಲ್ಲೇ ಹೋದ್ರೂ ಬೇರೆ ದಾಖಲೆಗಳು ಧೂಳೀಪಟ ಆಗುತ್ವೆ ಅನ್ನೋದು ಮತ್ತೆ ಮತ್ತೆ ಸಾಬೀತಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?