Featured
ನವೆಂಬರ್16ಕ್ಕೆ ಶಬರಿಮಲೆ ಓಪನ್- ಕೊರೊನಾ ನೆಗಟಿವ್ ಸರ್ಟಿಫಿಕೇಟ್ ಇದ್ದವರಿಗೆ ದರ್ಶನ..!
![](https://risingkannada.com/wp-content/uploads/2020/08/SHABARIMALA.jpg)
ಕೊರೊನಾ ಭೀತಿಯಿಂದ ದೇವಸ್ಥಾನಗಳಲ್ಲಿ ಜನಜಂಗುಳಿ ನಿಷೇಧಿಸಲಾಗಿದೆ. ಆದ್ರೆ ಪವಿತ್ರ ಶಬರಿಮಲೆಯ ಯಾತ್ರೆ ಈ ಬಾರಿ ಸಮಸ್ಯೆ ಇಲ್ಲದೆ ನಡೆಯಲಿದೆ. ಕೇರಳದ ಶಬರಿಮಲೆ ದೇವಸ್ಥಾನ ನವೆಂಬರ್16ರಂದು ಬಾಗಿಲು ತೆರೆಯಲಿದ್ದು, ದೇವರ ದರ್ಶನ ಮಾಡಬೇಕಾದರೆ ಕೊರೊನಾ ಪರೀಕ್ಷೆಯ ನೆಗಟಿವ್ ವರದಿ ಅತ್ಯಗತ್ಯ ಎಂದು ದೇವಸ್ಥಾನದ ಆಡಳಿತ ಮಂಡಲಿ ತಿಳಿಸಿದೆ.
ನವೆಂಬರ್ 16 ರಿಂದ ಎರಡು ತಿಂಗಳು ಕಾಲ ವಾರ್ಷಿಕ ಪೂಜೆ ಹಿನ್ನೆಲೆ ದೇವಾಲಯದ ಬಾಗಿಲು ತೆರೆಯಲಾಗುತ್ತೆ. ಈ ಹಿನ್ನೆಲೆ ಭಕ್ತರಿಗೂ ದೇವಾಲಯ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತೆ. ಆದರೆ ಈ ಬಾರಿ ದೇವರ ದರ್ಶನ ಅಥವಾ ದೇವಾಲಯ ಪ್ರವೇಶಕ್ಕೆ ಕೊರೊನಾ ನೆಗೆಟಿವ್ ಸರ್ಟಿಫಿಕೇಟ್ ಅಗತ್ಯ
- ಕಡಕಂಪಳ್ಳಿ ಸುರೇಂದ್ರನ್, ಕೇರಳ ದೇವಸ್ವಂ ಸಚಿವ
ಶಬರಿಮಲೆ ದೇಗುಲದ ಒಳಗೆ ವರ್ಚುವಲ್ ಕ್ಯೂ ವ್ಯವಸ್ಥೆ ಮಾಡಲಾಗುತ್ತದೆ. ಕೊರೊನಾ ಗೈಡ್ಲೈನ್ಸ್ ಪ್ರಕಾರ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಕೊರೊನಾ ಹಿನ್ನೆಯಲ್ಲಿ ಭಕ್ತರು ಕೊರೊನಾ ಟೆಸ್ಟ್ ಮಾಡಿಸಿ,ಅದರ ನೆಗೆಟಿವ್ ವರದಿಯಲ್ಲಿ ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಸನ್ನಿದಾನದಲ್ಲಿ ಯಾವುದೇ ನೂಕು ನುಗ್ಗಲು ಇಲ್ಲದಂತೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶಬರಿಮಲೆ ಆಡಳಿತ ಮಂಡಳಿ ತಿಳಿಸಿದೆ.
![Puranik Full](https://risingkannada.com/wp-content/uploads/2020/07/full-plate.jpg)
You may like
ಹರಾಜಿಗೂ ಮುನ್ನ ಸ್ಟಾರ್ ಕನ್ನಡಿಗರನ್ನ ಕೈಬಿಡಲು ಮುಂದಾದ ಕಿಂಗ್ಸ್ ಇಲೆವೆನ್ ಪಂಜಾಬ್..?
ಬ್ರಿಟನ್ ಕೊರೋನಾಗೆ ಕರ್ನಾಟಕವೇ ಹಾಟ್ ಸ್ಪಾಟ್ ಆಗುತ್ತಾ.? : ರೂಪಾಂತರಿ ಅಟ್ಟಹಾಸ..!
ಭಾರತದಲ್ಲಿ 34 ಲಕ್ಷ ದಾಟಿದ ಕೊರೊನಾ ಕೇಸ್: 24 ಗಂಟೆಯಲ್ಲಿ 1,021 ಸಾವು
ವಿಶ್ವವಿದ್ಯಾಲಯಗಳು ಪರೀಕ್ಷೆ ನಡೆಸಬೇಕು- ಯುಜಿಸಿ ಸುತ್ತೋಲೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್
ಮೈದಾನಕ್ಕಿಳಿದ ರೆಡ್ ಆರ್ಮಿ: ಬ್ಲೂಪ್ರಿಂಟ್ ರೆಡಿ ಮಾಡಿದ ತ್ರಿಮೂರ್ತಿಗಳು…!
ಯಾದಗಿರಿಯಲ್ಲಿ ದಿಢೀರ್ರಾಗಿ ಜಿಲ್ಲಾಧಿಕಾರಿ ವರ್ಗಾವಣೆ: ನೂತನ ಜಿಲ್ಲಾಧಿಕಾರಿ ಡಾ. ರಾಗಾಪ್ರಿಯಾ ಅಧಿಕಾರ ಸ್ವೀಕಾರ