Featured
ಜಿಲ್ಲಾಧಿಕಾರಿ ಕಚೇರಿಗೂ ಕೊರೊನಾ ಅಟ್ಯಾಕ್- ರೇಷ್ಮೇನಗರಿಯಲ್ಲಿ ಮಹಾಮಾರಿಯ ಕೋವಿಡ್19 ಕೇಕೆ
ರೈಸಿಂಗ್ ಕನ್ನಡ:
ಹರೀಶ್, ರಾಮನಗರ:
ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಕೊರೊನಾ ಮಾಹಾಮಾರಿಯ ಅಬ್ಬರ ಮುಂದುವರೆದಿದೆ. ಜಿಲ್ಲಾಧಿಕಾರಿ ಕಚೇರಿಗೂ ಕೋವಿಡ್19 ಮಾಹಾಮಾರಿ ವಕ್ಕರಿಸಿದೆ. ಜಿಲ್ಲಾಡಳಿತ ಭವನದ ಕೆಜಿಐಡಿ ವಿಭಾಗದ ಓರ್ವ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಸಾರ್ವಜನಿಕರಲ್ಲಿ ಆತಂತ ಮತ್ತಷ್ಟು ಹೆಚ್ಚಿದೆ.
ರಾಮನಗರ ಜಿಲ್ಲೆಯಲ್ಲಿ ಈಗಾಗಲೇ 210 ಕ್ಕೂ ಹೆಚ್ವು ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿದೆ. ಆರಂಭದಲ್ಲಿ ಒಂದೇ ಒಂದು ಕೊರೊನಾ ಪಾಸಿಟಿವ್ ಇಲ್ಲದ ಜಿಲ್ಲೆ, ಈಗ ಕೊರೊನಾ ಮಾಹಾಮಾರಿಯಿಂದ ಕಂಗೆಟ್ಟಿದೆ. ಜಿಲ್ಲಾಡಳಿತ ಭವನದ ಕೆಜಿಐಡಿ ವಿಭಾಗದ ಸಿಬ್ಬಂಧಿಗೆ ಒಬ್ಬರಿಗೆ ಕೊರೋನಾ ಪಾಸಿಟಿವ್ ಹಿನ್ನಲೆಯಲ್ಲಿ ಡಿಸಿ ಕಚೇರಿ ಕಟ್ಟಡ ಸಂಪೂರ್ಣ ಸ್ಯಾನಿಟೈಸರ್ ಮಾಡಲಾಗಿದೆ.
ಅಗತ್ಯ, ತುರ್ತು ಸೇವೆಗಳಿಗಾಗಿ ಡಿಸಿ ಕಚೇರಿಯ ಮೊದಲ ಮಹಡಿ ಕಚೇರಿಗಳು ಓಪನ್ ಆಗಿದೆ. 2ನೇ ಹಾಗೂ 3ನೇ ಮಹಡಿ ಕಚೇರಿಗಳು ಸಂಪೂರ್ಣ ಬಂದ್ ಆಗಿದೆ. ಅತ್ಯವಶ್ಯಕ ಕೆಲಸಗಳಿದ್ದರೆ ಮಾತ್ರ ಡಿಸಿ ಕಚೇರಿಗೆ ಹೊಗಲು ಅವಕಾಶ ಕಲ್ಪಿಸಲಾಗಿದೆ. ಸೋಕಿಂತ ವ್ಯಕ್ತಿಯ ಸಂಪರ್ಕ ಇನ್ನ ಪತ್ತೆ ಹಚ್ಚಲಾಗುತ್ತಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?