Featured
ಕಿಮ್ಸ್ ವೈದ್ಯ ಹಾಗೂ ಇಬ್ಬರು ಮಕ್ಕಳಿಗೂ ತಗುಲಿದ ಕೊರೊನಾ ಸೋಂಕು- ಹುಬ್ಬಳ್ಳಿಯಲ್ಲೂ ಕೋವಿಡ್ 19 ಆರ್ಭಟ

ರೈಸಿಂಗ್ ಕನ್ನಡ:
ಹುಬ್ಬಳ್ಳಿ:
ಕೊರೊನಾ ಮಹಾಮಾರಿ ವೈದ್ಯರನ್ನು ಕೂಡ ಕಾಡುತ್ತಿದೆ . ಕಿಮ್ಸ್ ಆಸ್ಪತ್ರೆಯ ಪ್ಯಾಥಾಲಜಿ ವಿಭಾಗದ ವೈದ್ಯರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅದಲ್ಲದೆ ಅವರ ಇಬ್ಬರು ಮಕ್ಕಳಿಗೂ ಕೊರೊನಾ ಸೋಂಕು ತಗುಲಿದೆ. ಶನಿವಾರ ವೈದ್ಯನಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಇದಾದ ಬಳಿಕ ಅವರ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿದಾಗ ಇವರ ಪುತ್ರರಾದ 25 ವರ್ಷದ ಯುವಕ ಹಾಗೂ 15 ವರ್ಷದ ಬಾಲಕನಿಗೂ ಸೋಂಕು ತಗುಲಿದೆ.
Advertisement

ವೈದ್ಯನಿಗೆ ಸೋಂಕು ತಗುಲಿರುವದು ಕಿಮ್ಸ್ ನಲ್ಲಿ ಆತಂಕ ನಿರ್ಮಾಣವಾಗಿದೆ. ಇವರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ. ಇದಲ್ಲದೆ ಅವರ ಮಕ್ಕಳ ಸಂಪರ್ಕಿತರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಈ ಮೂಲಕ ನಗರದಲ್ಲಿ ಕೊರೊನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
Continue Reading
Advertisement
You may like
Click to comment