Featured
ಬಡವರ ಪಾಲಿಗೆ ಕರುಣಾಮಯಿ ಸೇವ್ ದಿ ಚೈಲ್ಡ್:ಹುಮನಾಬಾದ್ನಲ್ಲಿ 100 ಮಂದಿ ಬಡವರಿಗೆ ಆಹಾರದ ಕಿಟ್
![](https://risingkannada.com/wp-content/uploads/2020/08/bidar-save-the-child-1.jpg)
ರೈಸಿಂಗ್ ಕನ್ನಡ :
ಬೀದರ್:
ಬಡವರ ಪಾಲಿಗೆ ಕರುಣಾಮಯಿಯಾಯಿತು ಸೇವ್ ದಿ ಚೈಲ್ಡ್ ಸಂಘಟನೆ.ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬೀದರ್ನ ಹುಮನಾಬಾದ್ ಪಟ್ಟಣದಲ್ಲಿ ಸುಮಾರು ನೂರಾರು ಜನ ನಿರ್ಗತಿಕರಿಗೆ ಸೇವ್ ದಿ ಚೈಲ್ಡ್ ಆಫ್ ಇಂಡಿಯಾ ಸಂಘಟನೆ ವತಿಯಿಂದ ಆಹಾರ ಧಾನ್ಯಗಳನ್ನ ವಿತರಿಸಲಾಯಿತು.
ಕಳೆದ ಮೂರು ನಾಲ್ಕು ತಿಂಗಳಿಂದ ಕೊರೊನ ಮಾಹಾಮಾರಿಗೆ ತತ್ತರಿಸಿದ ದಿನಗೂಲಿ ನೌಕರರು ಹಾಗೂ ನಿರ್ಗತಿಕರು ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿದ್ದು, ಅಂಥವರ ಸಹಾಯಕ್ಕೆ ಈಗ ಸೇವ್ ದಿ ಚೈಲ್ಡ್ ಸಂಘಟನೆ ಮುಂದಾಗಿದೆ.ಹುಮನಾಬಾದ್ ಪಟ್ಟಣದಲ್ಲಿ ಸುಮಾರು 100 ಜನ ಅಸಹಾಯಕರಿಗೆ ಆಹಾರದ ಕಿಟ್ ವಿತರಿಸಲಾಯಿತು.
![](https://risingkannada.com/wp-content/uploads/2020/08/bidar-save-the-child-2-1024x768.jpg)
ಮಹಿಳೆಯರಿಗೆ ಆಹಾರದ ಕಿಟ್ ಜೊತೆಗೆ ಪ್ಯಾಡಗಳು ವಿತರಿಸಿದರು.
ವಿಶಾಲರೆಡ್ಡಿ ಜಂಪಾ ಕೌನ್ಸಿಲರ್ ಸೇವ್ ದಿ ಚೈಲ್ಡ್ ಆಫ್ ಇಂಡಿಯಾ ಇವರ ನೇತೃತ್ವದಲ್ಲಿ, ರವಿ ಕಾಂಟಮ್ ಶೆಟ್ಟಿ ಫೌಂಡರ್, ಸುನಂದಾ ಸೂರ್ಯ ಡೈರೆಕ್ಟರ್ ಆಫ್ ಪರಿ & ಸೇವ್ ದಿ ಚೈಲ್ಡ್ ನ ನಿರ್ದೇಶಕರಾಗಿದ್ದು ದೇಶದ ಎಲ್ಲ ಕಡೆ ಅನೇಕ ಕಾರ್ಯಕ್ರಮ ಹಮ್ಮಿಕೊಂಡು ಸಮಾಜದ ಕೆಳವರ್ಗದ, ಅಸಹಾಯಕರ ಬಾಳಿಗೆ ಬೆಳಕಾಗುವ ಕೆಲಸಕ್ಕೆ ಮುಂದಾಗಿದ್ದಾರೆ..
ಕಾರ್ಯಕ್ರಮದಲ್ಲಿ ಸೇವ್ ದಿ ಚೈಲ್ಡ್ ಕಾರ್ಯಕರ್ತರು. ಪೋಲಕ್ಕಿ ಚಂಟಿ ,ಗುರುರಾಜ ಕಟ್ಟಿಮನಿ,ಸಮೀರ ಜಮಾದಾರ,ಪ್ರೀತಿ ಉಪ್ಪಳ್ಳಿ, ಸಿತಾರ, ಅಭಿಷೇಕ್, ಸೋಯಲ್ ಅಹ್ಮದ್ ಮುಂತಾದವರಿದ್ದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?