Featured
ಕೊರೊನಾ ಸ್ಫೋಟ: ರಾಜ್ಯದಲ್ಲಿ ದಾಖಲೆಯ 10,453 ಹೊಸ ಕೇಸ್:136 ಬಲಿ
![](https://risingkannada.com/wp-content/uploads/2020/08/tumkur-corona-3.jpg)
ರೈಸಿಂಗ್ ಕನ್ನಡ:
ಬೆಂಗಳೂರು:
ರಾಜ್ಯದಲ್ಲಿ ಮತ್ತೆ ಕೊರೊನಾ ‘ಮಹಾ’ಸ್ಫೋಟ ಆಗಿದ್ದು ಕಳೆದ 24 ಗಂಟೆಯಲ್ಲಿ ದಾಖಲೆಯ 10,453 ಹೊಸ ಸೋಂಕಿನ ಪ್ರಕರಣಗಳು ದಾಖಲೆಯಾಗಿವೆ.
ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ಮಂಗಳವಾರ ಬರೋಬ್ಬರಿ 10,453 ಹೊಸ ಕೊರೊನಾ ವೈರಾಣು ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,92,911ಕ್ಕೆ ಏರಿದೆ.
ಸಂಗ್ರಹ ಚಿತ್ರ
ಇನ್ನು ಸಾವಿನಲ್ಲೂ ಕೊರೊನಾ ಅಬ್ಬರಿಸಿದೆ ಮಂಗಳವಾರ ರಾಜ್ಯಾದ್ಯಂತ ಕ್ರೂರಿ ಹೊಡೆತಕ್ಕೆ 136 ಮಂದಿ ಬಲಿಯಾಗಿದ್ದಾರೆ. ಈವರೆಗೂ ರಾಜ್ಯದಲ್ಲಿ ಕೊರೊನಾಗೆ ಬಲಿಯಾದವರ ಒಟ್ಟು ಸಂಖ್ಯೆ 8,777ಕ್ಕೆ ಏರಿದೆ.
ರಾಜ್ಯದಲ್ಲಿ ಒಟ್ಟು 1,07,737 ಸಕ್ರಿಯ ಪ್ರಕರಣಗಳಿವೆ.ಮಂಗಳವಾರ 6,628 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೂ 4,76,378 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಇನ್ನು ರಾಜಧಾನಿ ಬೆಂಗಳೂರಿನಲ್ಲಿ 4,868 ಹೊಸ ಕೊರೊನಾ ವೈರಾಣು ಪತ್ತೆಯಾಗಿದೆ. ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 2,28,437ಕ್ಕೆ ಏರಿದೆ.
ಇನ್ನು ಸಾವಿನಲ್ಲೂ ಕೊರೊನಾ ಆರ್ಭಟಿಸಿದ್ದು ಮಂಗಳವಾರ ನಗರದಲ್ಲಿ 67 ಮಂದಿ ಸಾವನಪ್ಪಿದ್ದಾರೆ. ನಗರದಲ್ಲಿ ಈವರೆಗೂ ಕೋವಿಡ್ 19ಗೆ ಬಲಿಯಾದವರ ಒಟ್ಟು ಸಂಖ್ಯೆ 2,912ಕ್ಕೆ ಏರಿದೆ. ನಗರದಲ್ಲಿ ಒಟ್ಟು 46,610 ಸಕ್ರಿಯ ಪ್ರಕರಣಗಳಿವೆ.
ಮಂಗಳವಾರ ಸೋಂಕಿನಿಂದ ಚೇತರಿಸಿಕೊಂಡ ಹಿನ್ನಲೆಯಲ್ಲಿ 2,373 ಮಂದಿಯನ್ನ ಡಿಸ್ಚಾರ್ಜ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಈವರೆಗೂ ಒಟ್ಟು 1,78,914 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?