Featured
ದೇಶಾದ್ಯಂತ 63,489 ಹೊಸ ಕೇಸ್, 994 ಮಂದಿ ಬಲಿ: ಸಾವಿನ ಸಂಖ್ಯೆ 49,980ಕ್ಕೆ ಏರಿಕೆ

ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ದೇಶಾದ್ಯಂತ ಕೊರೊನಾ ಆರ್ಭಟ ಮುಂದುವರೆಸಿದ್ದು ಕಳೆದ ಒಂದೇ ದಿನದಲ್ಲಿ 63 ಸಾವಿರ ಕೊರೊನಾ ಸೋಂಕು ಪ್ರಕರಣ ದಾಖಲಾಗಿದೆ.
ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ಶನಿವಾರ 63,489 ಹೊಸ ಕೊರೊನಾ ಕೇಸ್ ದಾಖಲಾಗಿದೆ. ಇದರೊಂದಿಗೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 25,89,682ಕ್ಕೆ ಏರಿದೆ.
ಕಳೆದ 24 ಗಂಟೆಯಲ್ಲಿ ದಾಖಲೆ 944 ಮಂದಿ ಕೋವಿಡ್ 19ಗೆ ಬಲಿಯಾಗಿದ್ದಾರೆ. ಸಾವನಪ್ಪಿದವರ ಪೈಕಿ ಓರ್ವ ವಿದೇಶದಿಂದ ಬಂದವರೆಂದು ತಿಳಿದು ಬಂದಿದೆ. ದೇಶದಲ್ಲಿ ಕೊರೊನಾ ಒಟ್ಟು ಬಲಿಯಾದವರ ಸಂಖ್ಯೆ 49,980ಕ್ಕೆ ಏರಿದೆ.
ಸದ್ಯ ದೇಶದಲ್ಲಿ 6,77,444 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಅತಿ ಹೆಚ್ಚು ಕೊರೊನಾದಿಂದ ಬಳಲುತ್ತಿರುವ ಮಹಾರಾಷ್ಟ್ರದಲ್ಲಿ ಸೋಂಕಿನ ಸಂಖ್ಯೆ 6 ಲಕ್ಷ ಗಡಿ ಸಮೀಪಿಸುದ್ದು 5,84,754 ಸೋಂಕಿನ ಪ್ರಕರಣಗಳಿವೆ. 19,427 ಮಂದಿ ಬಲಿಯಾಗಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?