Featured
ಹಸಿದವರ ಪಾಲಿಗೆ ಇವರೇ ದೇವರು- ಕೊರೊನಾ ಸಂಕಷ್ಟಕ್ಕೆ ನೆರವಾಗುವ ಮಹಾನುಭಾವರು..!
ರೈಸಿಂಗ್ ಕನ್ನಡ:
ಬೀದರ್:
ಕೈಯಲ್ಲಿದ್ದಾಗ ಸಹಾಯ ಮಾಡಬೇಕು. ಅದರಲ್ಲೂ ಅವಶ್ಯಕತೆ ಇರುವಾಗ ಸಹಾಯ ಮಾಡದೇ ಇದ್ದರೆ ಮನುಷ್ಯತ್ವಕ್ಕೆ ಬೆಲೆಯೇ ಇಲ್ಲ. ಕೊರೊನಾದಿಂದಾಗಿ ಸಾಕಷ್ಟು ಜನರ ಬದುಕು ಬೀದಿಪಾಲಾಗಿದೆ. ಒಂದು ಹೊತ್ತಿನ ಊಟಕ್ಕೂ ಪರದಾಟ ನಡೆಸಬೇಕಾದ ಸ್ಥಿತಿಗೆ ಬಂದು ತಲುಪಿದ್ದಾರೆ. ಹಸಿವಿನಿಂದ ಬಳಲಿದವರಿಗೆ ಊಟನ ನೀಡುವುದೇ ದೇವರ ಕೆಲಸ. ಬೀದರ್ನಲ್ಲಿ ಹಸಿದ ಹೊಟ್ಟೆಗಳನ್ನು ತನ್ನ ಕೈಯಲ್ಲಾದಷ್ಟು ತುಂಬಿಸ್ತಾ ಇದ್ದಾರೆ ಸಮಾಜ ಸೇವಕರು.
ಕೊರೊನಾ ಲಾಕ್ ಡೌನ್ನಿಂದಾಗಿ ಜನ ತೀರಾ ಸಂಕಷ್ಟಕ್ಕೆಒಳಗಾಗಿದ್ದಾರೆ. ದಿನಗೂಲಿ ನೌಕರ ಪರಿಸ್ಥಿತಿ ಹೇಳ ತಿರದ್ದಾಗಿದ್ದು ಅದರಲ್ಲೂ ಅಲೆಮಾರಿ ಜನಾಂಗದವರ ಬದುಕು ಮೂರಾಬಟ್ಟೆಯಾಗಿದೆ. ಅಲೆಮಾರಿ ಜನಾಂಗದ ಜನರಿಗೆ ಬಟ್ಟೆ ಹಾಗೂ ಇತರೆ ವಸ್ತುಗಳನ್ನ ನೀಡುವ ಮೂಲಕ ಸಮಾಜ ಸೇವಕರು ಎಲೆಮರೆಯಕಾಯಿಯಂತೆ ಕೆಲಸ ಮಾಡುತ್ತಿದ್ದಾರೆ. ಬೀದರ್ ಜಿಲ್ಲೆಯ ಹಲವು ಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಲೆಮಾರಿ ಜನಾಂಗದವರು ವಾಸವಾಗಿದ್ದಾರೆ. ಜಿಲ್ಲೆಯ ಕಮಠಾಣ ಗ್ರಾಮದಲ್ಲಿ ಸಮಾಜ ಸೇವಕರಾದ ಬಸವರಾಜ್ ಬುಳ್ಳಾರವರು ಹಾಗೂ ಅವರ ಸಂಘಟನೆ ಕಮಠಾಣ ಸೇರಿದಂತೆ ಹಲವು ಗ್ರಾಮದಲ್ಲಿ ಸುತ್ತಾಡಿ ಅಲೆಮಾರಿ ಸಮುದಾಯದ ಮಕ್ಕಳಿಗೆ ಬಟ್ಟೆ ವಿತರಣೆ ಮಾಡಿದರು. ಸಮಾಜ ಸೇವಕರಾದ ಶಂಕರ ಬಾವಗೆ,.ಲಕ್ಷ್ಮೀ ಬಾವಗೆ ಸೇರಿದಂತೆ ಹಲವರು ಅಲೆಮಾರಿ ಸಮುದಾಯದ ಜನರಿಗೆ ಆಸರೆಯಾಗಿದ್ದಾರೆ.
You may like
ಚಕ್ರವರ್ತಿಗೆ ನಿರ್ಬಂಧ: ಪ್ರಿಯಾಂಕ್ ವಿರುದ್ಧ ಸಿಡಿದ ಸೂಲಿಬೆಲೆ
ನಾರಂಜ ಸಹಕಾರಿ ಸಕ್ಕರೆ ಕಾರ್ಖಾನೆಯ ನೂತನ ಅಧ್ಯಕ್ಷರಾಗಿ ಸಿದ್ರಾಮ್ ಅವಿರೋಧ ಆಯ್ಕೆ
ನೀಟ್ ಪರೀಕ್ಷೆಯಲ್ಲಿ 9ನೇ ಸ್ಥಾನ : ಉಸ್ತುವಾರಿ ಸಚಿವ ಪ್ರಭುಚೌಹಾಣ್ರಿಂದ ಅಭಿನಂದನೆ
ದಾವಣಗೆರೆ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ ಉಚಿತ ಮಾಸ್ಕ್ ವಿತರಣೆ
ಯಾದಗಿರಿಯಲ್ಲಿ ಕೊರೊನಾ ವಾರಿಯರ್ ಸಾವು: ಆರೋಗ್ಯ ಸಚಿವ ಶ್ರೀರಾಮುಲು ಸಂತಾಪ
ಬೀದರ್ನ ಕಾರಂಜ ಜಲಾಶಯಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಭೇಟಿ:ನೀರಿನ ಮಟ್ಟ ಪರಿಶೀಲಿಸಿದ ಕೈ ನಾಯಕ