Featured
ವಿಶ್ವದೆಲ್ಲೆಡೆ ಕೊರೊನಾ ವೈರಸ್ ಕಾಟ- ಭಾರತದಲ್ಲಿ 9ಲಕ್ಷಕ್ಕೂ ಅಧಿಕ ಸೋಂಕಿತರು- ಕರ್ನಾಟಕಕ್ಕೆ ಸೋಂಕಿತರ ಪಟ್ಟಿಯಲ್ಲಿ 5ನೇ ಸ್ಥಾನ
![](https://risingkannada.com/wp-content/uploads/2020/07/coronavirus-4833616_640.jpg)
ರೈಸಿಂಗ್ ಕನ್ನಡ, ನ್ಯೂಸ್ ಡೆಸ್ಕ್:
ಕೊರೊನಾ ವೈರಸ್ ಜಗತ್ತಿನ ಜೀವ ಹಿಂಡುತ್ತಿದೆ. ಅಮೆರಿಕಾ ಸೇರಿದಂದತೆ ಜಗತ್ತಿನ ಎಲ್ಲಾ ರಾಷ್ಟ್ರಗಳನ್ನು ಈ ಮಹಮಾರಿ ಹಿಂಡಿ ಹಿಪ್ಪೆ ಮಾಡುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಿದೆ. ಭಾರತದಲ್ಲೂ ಈ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಅತೀ ಹೆಚ್ಚು ಕೊರೊನಾ ಸೋಂಕಿತ ರಾಜ್ಯಗಳ ಪೈಕಿ ಕರ್ನಾಟಕ 5ನೇ ಸ್ಥಾನದಲ್ಲಿದೆ.
ಕರ್ನಾಟಕದಲ್ಲಿ 41581 ಜನರು ಕೊರೊನಾ ಸೋಂಕಿಗೆ ಒಳಗಾಗಾಗಿದ್ದಾರೆ. ಈ ಪೈಕಿ 757 ಜನರು ಪ್ರಾಣಕಳೆದುಕೊಂಡಿದ್ದರೆ, 16248 ಜನರು ಕೊರೊನಾ ಗೆದ್ದವರು. 24572 ಆ್ಯಕ್ಟೀವ್ಕೇಸ್ಗಳನ್ನು ಕರ್ನಾಟಕ ಹೊಂದಿದೆ. ಬೆಂಗಳೂರು ನಗರದಲ್ಲಿ 19702 ಜನರು ಕೋವಿಡ್19ಗೆ ತುತ್ತಾಗಿದ್ದಾರೆ. 15052 ಸಕ್ರೀಯ ಪ್ರಕರಣಗಳು ಬೆಂಗಳೂರಿನಲ್ಲಿದೆ.
ಭಾರತದಲ್ಲೂ ಕೋವಿಡ್ ಪ್ರಕರಣಗಳು ಏರಿಕೆಯಾಗಿದೆ. 907645 ಕೋವಿಡ್ ಪ್ರಕರಣಗಳೂ ಭಾರತದಲ್ಲಿ ದಾಖಲಾಗಿದೆ. ಈ ಮೂಲಕ ಕೊರೊನಾ ಸೋಂಕಿತ ದೇಶಗಳ ಪೈಕಿ ಭಾರತಕ್ಕೆ 3ನೇ ಸ್ಥಾನ. 572112 ಜನರು ಕೋವಿಡ್ನಿಂದ ಮುಕ್ತಿ ಹೊಂದಿದ್ದಾರೆ. 311806 ಆ್ಯಕ್ಟೀವ್ ಕೇಸ್ ಭಾರತದಲ್ಲಿದೆ. 23727 ಜನರು ಕೋವಿಡ್ಗೆ ಬಲಿಯಾಗಿದ್ದಾರೆ.
ವಿಶ್ವದಾದ್ಯಂತ ಒಟ್ಟು 1,32,35,760 ಕೊರೊನಾ ಭಾಧಿತರಿದ್ದಾರೆ. ಈ ಪೈಕಿ 5,75,225 ಜನರು ಕೊರೊನಾದಿಂದ ಮರಣ ಹೊಂದಿದ್ದಾರೆ . 7,696,381 ಜನರು ಕೊರೊನಾದಿಂದ ಮುಕ್ತಿ ಹೊಂದಿದ್ದರೆ, 4,963,854 ಕೇಸ್ಗಳು ಇನ್ನೂ ಆ್ಯಕ್ಟೀವ್ ಆಗಿದೆ.
ಕೊರೊನಾ ಬಾಧಿತ ಟಾಪ್ 5 ರಾಷ್ಟ್ರಗಳು
ದೇಶ ಕೊರೊನಾ+ ಗುಣಮುಕ್ತ ಆ್ಯಕ್ಟೀವ್ ಮರಣ
ಅಮೆರಿಕಾ 3479483 1549469 1791767 138247
ಬ್ರೆಜಿಲ್ 1887959 1213512 601526 72921
ಭಾರತ 907645 572112 311806 23727
ರಷ್ಯಾ 733699 504021 218239 11439
ಪೆರು 330123 221008 218239 12054
ಸೋಂಕಿತರ ಪಟ್ಟಿಯಲ್ಲಿ ಚಿಲಿಗೆ 6ನೇ ಸ್ಥಾನ. ಮೆಕ್ಸಿಕೋ ಸೋಂಕಿತರ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಸ್ಪೇನ್ 8ನೇ ಸ್ಥಾನಕ್ಕೆ ಇಳಿದಿದೆ. ಯುಕೆ ಸೋಂಕಿತರ ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಇಳಿದಿದೆ. ಸೋಂಕಿತರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ 10ನೇ ಸ್ಥಾನಕ್ಕೆ ತಲುಪಿದೆ.
ಒಟ್ಟಿನಲ್ಲಿ ಕೊರೊನಾ ಮಹಾಮಾರಿಯಿಂದ ಇಡೀ ಜಗತ್ತು ತತ್ತರಿಸುತ್ತಿದೆ. ಇದರಿಂದ ಯಾವಾಗ ಮುಕ್ತಿ ಸಿಗುತ್ತದೆ ಅನ್ನುವುದನ್ನು ಎಲ್ಲರೂ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
You may like
ಕರ್ನಾಟಕದಲ್ಲಿ ಕೆಆರ್ ಕೆ ಸಂಸ್ಥೆಯಿಂದ ಪ್ರಭಾಸ್ ಆದಿಪುರುಷ್ ಬಿಡುಗಡೆ
ಕರ್ನಾಟಕದಲ್ಲಿ ಒಂದೇ ದಿನ 21,390 ಕೊರೋನಾ.! ಲಾಕ್ಡೌನ್ ಫಿಕ್ಸಾ.?
ಕರ್ನಾಟಕದಲ್ಲಿ ಕೊರೋನಾ ಮಹಾ ಸ್ಫೋಟ. ದೆಹಲಿ ಮೀರಿಸುತ್ತಾ ಬೆಂಗಳೂರು.?
ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊರೋನಾ ಪಾಸಿಟಿವ್
ಅಕ್ಟೋಬರ್ ಬಳಿಕ ರಾಜ್ಯದಲ್ಲಿ ಮತ್ತೆ ಕೊರೋನಾ ಏರಿಕೆ : ಒಮಿಕ್ರಾನ್ ಅಲರ್ಟ್..!
ಕೋವಿಡ್-19 ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಸಿ.ಎಂ. ಯಡಿಯೂರಪ್ಪ