Featured
ತುಮಕೂರಿನಲ್ಲಿ ಕೊರೊನಾಗೆ ಮೂವರ ಬಲಿ: 700ರ ಗಡಿ ತಲುಪಿದ ಸೋಂಕಿತರ ಸಂಖ್ಯೆ
![](https://risingkannada.com/wp-content/uploads/2020/07/corona-tumkur-1807-2-1.jpg)
ರೈಸಿಂಗ್ ಕನ್ನಡ:
ತುಮಕೂರು:
ಜಿಲ್ಲೆಯಲ್ಲಿ ಭಾನುವಾರ 46 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದ್ದು ಸೊಂಕಿತರ ಸಂಖ್ಯೆ 700 ರ ಗಡಿ ತಲುಪಿದೆ. ಕೊರೊನಾಗೆ ಮೂವರು ಸೊಂಕಿತರು ಬಲಿಯಾಗಿದ್ದು ಸಾವಿನ ಸಂಖ್ಯೆ 23 ಕ್ಕೇ ಏರಿಕೆಯಾಗಿದೆ. ಗುಡ್ ನ್ಯೂಸ್ ಅಂದ್ರೆ ಕೊರೊನಾದಿಂದ ಗುಣ ಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದ್ದು ಭಾನುವಾರ ಒಂದೇ ದಿನ 71 ಮಂದಿ ಕೊವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಭಾನುವಾರ ಕೊರೊನಾಗೆ ಮೂವರ ಬಲಿ
ಜಿಲ್ಲೆಯಲ್ಲಿ ಭಾನುವಾರ ಮೂವರು ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಪಾವಗಡ ತಾಲ್ಲೂಕಿನ ಹೊಸಹಳ್ಳಿ ತಾಂಡ ಗ್ರಾಮದ 60 ವರ್ಷದ ವೃದ್ದ ಮತ್ತು ತುಮಕೂರು ತಾಲ್ಲೂಕಿನ ಭೀಮಸಂದ್ರ 62 ವರ್ಷದ ವೃದ್ದ ಹಾಗೂ ಚಿ. ನಾ. ಹಳ್ಳಿ ತಾಲ್ಲೂಕಿನ ಹುಳಿಯಾರಿನ 55 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 23ಕ್ಕೇ ಏರಿಕೆಯಾಗಿದೆ.
ರಾಜ್ಯದಲ್ಲಿ ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದ್ರೆ ತುಮಕೂರು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದಲ್ಲಿದ್ದು ಜನರು ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ನಿಯಮಗಳನ್ನ ಅನುಸರಿದ್ರೆ ಇನ್ನಷ್ಟು ನಿಯಂತ್ರಣಕ್ಕೆ ಬರಲಿದೆ. ಜನರು ಮನೆಯಲ್ಲಿಯೇ ಇದ್ದು ಅವಶ್ಯಕತೆ ಇದ್ದಲ್ಲಿ ಮಾತ್ರ ಮನೆಯಿಂದ ಹೊರಗೆ ಬನ್ನಿ. ಅನಾವಶ್ಯಕವಾಗಿ ಹೊರಗೆ ಬಂದು ಅಡ್ಡಾಡಿದ್ರೆ ಕೊರೊನಾ ನಿಮ್ಮ ಮನೆಯ ಅತಿಥಿಯಾಗುವುದರಲ್ಲಿ ಯಾವುದೇ ಸಂಶಯ ಇಲ್ಲಾ.
ತಾಲ್ಲೂಕುವಾರು ಸೋಂಕಿತರ ಸಂಖ್ಯೆ
ತುಮಕೂರು ತಾಲ್ಲೂಕಿನಲ್ಲಿ ಇಂದು ಅತಿಹೆಚ್ಚು ಕೊರೊನಾ ಸೊಂಕಿತರು ಕಂಡುಬಂದಿದ್ದು ತಿಪಟೂರು ಹೊರತು ಪಡಿಸಿ ಉಳಿದ ಎಲ್ಲಾ ತಾಲ್ಲೂಕುಗಳಲ್ಲಿಯೂ ಭಾನುವಾರ ಸೋಂಕಿತರು ಪತ್ತೆಯಾಗಿದ್ದಾರೆ.
ತುಮಕೂರು 25
ಚಿಕ್ಕನಾಯಕನಹಳ್ಳಿ 4
ಪಾವಗಡ 4
ಮಧುಗಿರಿ 3
ಶಿರಾ 3
ಕುಣಿಗಲ್ 3
ಕೊರಟಗೆರೆ 2
ತುರುವೇಕೆರೆ 1
ಗುಬ್ಬಿ 1
ತಿಪಟೂರು 0
ಮಗು, ಗರ್ಭಿಣಿಯರು, ಪೊಲೀಸರಿಗೆ ಸೊಂಕು
ಜಿಲ್ಲೆಯಲ್ಲಿ ಭಾನುವಾರ ಪತ್ತೆಯಾಗಿರುವ 46 ಹೊಸ ಕೊರೊನಾ ಸೊಂಕಿತ ಪ್ರಕರಣಗಳಲ್ಲಿ 3 ಜನ ಗರ್ಭಿಣಿಯರು, 1 ಮಗು, 2 ಪೊಲೀಸರು ಹಾಗೂ 60 ವರ್ಷ ದಾಟಿದ 7 ಜನ ವೃದ್ದರಿಗೆ ಸೊಂಕು ದೃಡಪಟ್ಟಿದೆ.
700 ರ ಗಡಿ ತಲುಪಿದ ಸೊಂಕಿತರು
ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 700ರ ಗಡಿ ತಲುಪಿದ್ದು ಈವರೆಗೆ 699 ಜನ ಕೊರೊನಾ ಸೊಂಕಿತರು ಪತ್ತೆಯಾಗಿದ್ದಾರೆ. ಗುಡ್ ನ್ಯೂಸ್ ಅಂದ್ರೆ ಕೊರೊನಾದಿಂದ ಗುಣಮುಖರಾದ 71 ಜನರು ಭಾನುವಾರ ಒಂದೇ ದಿನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಒಟ್ಟು ಸೊಂಕಿತರ ಅರ್ಧದಷ್ಟು 358 ಜನರು ಈವರೆಗೆ ಗುಣಮುಖರಾಗಿದ್ದಾರೆ.
ಬಾಕಿ 318 ಜನ ಸೊಂಕಿತರು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಕೊರೊನಾ ನಿಯಂತ್ರಿಸಲು ಜಿಲ್ಲಾಡಳಿತ ಎಲ್ಲಾ ರೀತಿಯ ಕಟ್ಟು ನಿಟ್ಟಿನ ಕ್ರಮಗಳನ್ನ ಅನುಸರಿಸಿದ್ರು ಸೊಂಕಿತರ ಸಂಖ್ಯೆ ದಿನೆ ದಿನೆ ಹೆಚ್ಚಾಗುತ್ತಲೇ ಇದೆ. ಇದೇ ರೀತಿ ಮುಂದುವರಿದರೆ ಕೆಲವೇ ದಿನಗಳಲ್ಲಿ ಸೊಂಕಿತರ ಸಂಖ್ಯೆ ಸಾವಿರ ಗಡಿ ತಲುಪಿದ್ರು ಅಚ್ಚರಿಯಿಲ್ಲ ಎಂಬಂತಾಗಿದೆ.
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಕರ್ನಾಟಕದಲ್ಲಿ ಕೆಆರ್ ಕೆ ಸಂಸ್ಥೆಯಿಂದ ಪ್ರಭಾಸ್ ಆದಿಪುರುಷ್ ಬಿಡುಗಡೆ
ಕರ್ನಾಟಕದಲ್ಲಿ ಒಂದೇ ದಿನ 21,390 ಕೊರೋನಾ.! ಲಾಕ್ಡೌನ್ ಫಿಕ್ಸಾ.?