Featured
ಕುರಿಗಳಿಗೂ ಕ್ವಾರಂಟೈನ್ – ಕುತೂಹಲ ಮೂಡಿಸಿದ ಚಿಕ್ಕನಾಯಕನಹಳ್ಳಿಯ ಗ್ರಾಮವೊಂದರ ಪ್ರಕರಣ
ರೈಸಿಂಗ್ ಕನ್ನಡ :
ಕೆ.ಆರ್ ಬಾಬು, ತುಮಕೂರು :
ಕೊರೋನಾದಿಂದಾಗಿ ಎಲ್ಲರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಒಬ್ಬರಿಗೆ ಬಂತು ಅಂದ್ರೆ ಅವರ ಸುತ್ತ ಮುತ್ತ ಇರುವವರನ್ನೆಲ್ಲರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಇಷ್ಟು ದಿನ ಕ್ವಾರಂಟೈನ್ ಅನ್ನೋದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಿತ್ತು. ಆದ್ರೀಗ ಪ್ರಾಣಿಗಳಿಗೂ ಕ್ವಾರಂಟೇನ್ ಎದುರಾಗಿದೆ.
ಕುರಿಗಾಹಿಯೊಬ್ಬರಿಗೆ ಅತಿಯಾದ ಜ್ವರ ಬಂದಿದ್ದ ಕಾರಣ ಆತನ ಜೊತೆಯಲ್ಲಿದ್ದ 43 ಮೇಕೆಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆಯಲ್ಲಿ ನಡೆದಿದೆ. ಜೊತೆಗೆ ಆರೋಗ್ಯವಾಗಿದ್ದ 5 ಮೇಕೆಗಳು ಕೂಡ ಏಕಾಏಕಿ ಸಾವನ್ನಪ್ಪಿವೆ. ಹೀಗಾಗಿ ಇಡೀ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಕುರಿಗಾಹಿಗೆ ವಿಪರೀತ ಜ್ವರವಿದ್ದ ಹಿನ್ನೆಲೆ ಆತನನ್ನು ಸ್ನೇಹಿತರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದ್ದರು. ಆತನಿಗೆ ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೇ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಮೇಕೆಗಳಿಗೂ ಕೊರೊನಾ ಟೆಸ್ಟ್ ಮಾಡಿಸಲು ಸೂಚಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?