Featured
ಕೊರೊನಾ ಸೊಂಕಿತರಿಗಾಗಿ ವಿಶ್ವದ ದೊಡ್ಡ ಆರೈಕೆ ಕೇಂದ್ರ : ಈ ಹಾಸ್ಪಿಟಲ್ ಸ್ಪೆಷಾಲಿಟಿ ಏನ್ ಗೊತ್ತಾ ?
![](https://risingkannada.com/wp-content/uploads/2020/07/hospital-2-1.jpg)
ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ತಮಕೂರು ರಸ್ತೆಯಲ್ಲಿ ವಿಶ್ವದ ಅತಿ ದೊಡ್ಡ ಆರೈಕೆ ಕೇಂದ್ರ ಉದ್ಘಾಟನೆಗೆ ಸಜ್ಜಾಗಿದೆ. ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) 10,100 ಹಾಸಿಗೆ ಸಾಮರ್ಥ್ಯದ ವಿಶ್ವದ ಅತಿ ದೊಡ್ಡ ಕೋವಿಡ್ 19 ಆರೈಕೆ ಕೇಂದ್ರ ಇನ್ನು ಒಂದು ವಾರದಲ್ಲಿ ಉದ್ಘಾಟನೆಯಾಗಲಿದೆ.
![](https://risingkannada.com/wp-content/uploads/2020/07/FULL-PLATE-10-1024x576.png)
ಈ ಆಸ್ಪತ್ರೆಯಲ್ಲಿ 2,200 ವೈದ್ಯಕೀಯ ಸಿಬ್ಬಂದಿಗಳನ್ನ ನಿಯೋಜಿಸಲಾಗುವುದೆಂದು ಈಗಾಗಲೇ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಇತ್ತೀಚೆಗೆ ಈ ಆಸ್ಪತ್ರೆಗೆ ಭೇಟಿ ಕೊಟ್ಟ ಸಿಎಂ ಯಡಿಯೂರಪ್ಪ ಬಿಐಇಸಿಯಲ್ಲಿ ಹತ್ತು ಸಾವಿರದ ನೂರು ಹಾಸಿಗೆ ಸೌಲಭ್ಯದ ಕೋವಿಡ್ ನಿಗಾ ಸ್ಥಾಪಿಸಲಾಗುತ್ತಿದೆ. ಇನ್ನು ಒಂದು ವಾರದಲ್ಲಿ ಕೇಂದ್ರ ಸಿದ್ಧವಾಗುತ್ತದೆ.ಇಲ್ಲಿ 100 ರೋಗಿಗೆ ಒಬ್ಬ ವೈದ್ಯ, ಒಬ್ಬ ಸಹಾಯಕ, ಇಬ್ಬರು ನರ್ಸ್, ಒಬ್ಬ ಸ್ವಚ್ಛತಾ ಸಿಬ್ಬಂದಿ, ಮತ್ತು ಇಬ್ಬರು ಮಾರ್ಷಲ್ಗಳು ಸೇರಿದಂತೆ ಒಟ್ಟು 2,200 ಸಿಬ್ಬಂದಿಗಳನ್ನ ನಿಯೋಜಿಸಬಹುದೆಂದು ಮಾಹಿತಿ ನೀಡಿದ್ದಾರೆ.
![](https://risingkannada.com/wp-content/uploads/2020/07/hospital.jpg)
ಈ ಆಸ್ಪತ್ರೆಗೆ ಕಡಿಮೆ ಸೋಂಕಿರುವ ವ್ಯಕ್ತಿಗಳು ಮತ್ತು ಬೇರೆ ಕಾಯಿಲೆಯ ಲಕ್ಷಣ ಇಲ್ಲದವರು ಇಲ್ಲಿ ದಾಖಲಾಗಬಹುದು.ಈ ಕೇಂದ್ರದಲ್ಲಿ ಎಲ್ಲ ರೀತಿವೈದ್ಯಕೀಯ ಸೌಲಭ್ಯ, ಐಸಿಯು ಚಿಕಿತ್ಸಾ ಘಟಕ, ಇಸಿಜಿ, ಆಕ್ಸಿಜನ್ ಸೌಕರ್ಯಗಳಿವೆ. ಆಸ್ಪತ್ರೆಯೊಂದರ ಸಹಾಯ ಪಡೆದು ಈ ಆಸ್ಪತ್ರೆ ದಿನದ 24 ಗಂಟೆಗಳಲ್ಲೂ ಸೋಂಕಿತರಿಗಾಗಿ ಕಾರ್ಯನಿರ್ವಹಿಸಲಿದೆ.
ಇಲ್ಲಿ ತ್ಯಾಜ್ಯ ವಿಂಗಡಣೆ, ವಿಲೆವಾರಿ, ಸೋಂಕಿತರ ಬೆಡ್ಶೀಟ್, ಬ್ಲಾಂಕೆಟ್ ತೊಳೆಯಲು ಲಾಂಡ್ರಿ ವ್ಯವಸ್ಥೆ ಇದೆ. ಬೇಸರವಾದಾಗ ಟಿವಿ, ಇಂಟರ್ನೆಟ್ಗಳನ್ನ ಬಳಸಬಹುದಾಗಿದೆ. ಅತ್ಯಾಧುನಿಕ ರೋಬೊಟ್ ಮೂಲಕ ತಜ್ಱ ವೈದ್ಯರನ್ನ ವಿಡಿಯೋ ಕಾನ್ಫೆರೆನ್ಸ್ ಮೂಲಕ ಕಾಯಿಲೆಗೆ ಔಷಧಿ ಪಡೆಯಬಹುದಾಗಿದೆ.
You may like
ದೆಹಲಿ ಮಾದರಿ ಲಾಕ್ ಆಗುತ್ತಾ ಬೆಂಗಳೂರು.? ಯಾಕೆ..? ಏನಾಗ್ತಿದೆ ಬೆಂಗಳೂರಲ್ಲಿ.?
ದಾವಣಗೆರೆ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ ಉಚಿತ ಮಾಸ್ಕ್ ವಿತರಣೆ
ಕೊರೊನಾ ದಾಖಲೆ: 10,145 ಹೊಸ ಕೇಸ್: ಬೆಂಗಳೂರಿನಲ್ಲಿ 4,340 ನಂಬರ್
ಕೊರೊನಾ ಆರ್ಭಟ: ಲಕ್ಷಕ್ಕಿಂತಲೂ ಹೆಚ್ಚು ಸಾವು: ಮೂರನೇ ಸ್ಥಾನ ಪಡೆದ ಭಾರತ
ಇಳಿಕೆ ಕಂಡ ಕೊರೊನಾ: 81,484 ಹೊಸ ಕೇಸ್, 1,095 ಬಲಿ
ಕೊರೊನಾ ಆರ್ಭಟ: 86,821 ಹೊಸ ಕೇಸ್: 63 ಲಕ್ಷ ದಾಟಿದ ಸೋಂಕಿತರ ನಂಬರ್