Featured
ಒಂದೇ ದಿನ ಕೊರೊನಾ ಸೋಂಕಿತರ ಸಂಖ್ಯೆ 7.67ಲಕ್ಷಕ್ಕೆ ಏರಿಕೆ, 21,129 ಮಂದಿ ಬಲಿ

ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್ :
ದೇಶಾದ್ಯಂತ ಅನ್ಲಾಕ್ ಮಾಡಿದ್ದೆ ತಡ ಹೆಮ್ಮಾರಿ ಕೊರೊನಾ ತನ್ನ ಕ್ರೂರ ಅಟ್ಟಹಾಸ ಮೆರೆಯುತ್ತಿದೆ.ಮಹಾಮಾರಿ ಕೊರೊನಾ ಕಾಡ್ಗಿಚ್ಚಿನಂತೆ ಹರಡುತ್ತಿದ್ದು ಇಡೀ ದೆಶವನ್ನೆ ಬೆಚ್ಚಿ ಬೀಳಿಸಿದೆ. ಗುರುವಾರ ಒಂದೇ ದಿನ ದೇಶಾದ್ಯಂತ24,879 ಸೋಂಕು ತಗುಲಿ ದಾಖಲೆ ಬರೆದಿದೆ. ಇದರೊಂದಿಗೆ ದೇಶಾದ್ಯಂತ7,67,296 ಏರಿಕೆಯಾಗಿದೆ.

ನಿನ್ನೆ ದಾಖಲಾದ 24,879 ಸೋಂಕು ಎರಡನೇ ದೈನಂದಿನ ಗರಿಷ್ಠ ಎನಿಸಿಕೊಂಡಿದೆ. 487 ಮಂದಿ ಸಾವಿಗೀಡಾಗಿದ್ದಾರೆ.ಮೃತರ ಸಂಖ್ಯೆ 21,129 ತಲುಪಿದೆ.
7,67,296 ಸೋಂಕಿತರ ಪೈಕಿ 47,6378 ಮಂದಿ ಸೋಂಕಿನಿಂದ ಬಿಡುಗಡೆ ಹೊಂದಿದ್ದಾರೆ. ಇನ್ನು 269789 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.
ಕೋವಿಡ್ 19ಗೆ ಅತಿ ಹೆಚ್ಚು ಹಾನಿಗೀಡಾದ ರಾಜ್ಯವೆಂದರೆ ಅದು ಮಹಾರಾಷ್ಟ್ರ. ಅಲ್ಲಿ 6,603 ಮಂದಿ ಕೊರೊನಾಗೆ ಬಲಿಯಾಗಿದ್ದು ಸೋಂಕಿತರ ಸಂಖ್ಯೆ 2,23,724 ಕ್ಕೆ ಏರಿಕೆಯಾಗಿದೆ. 198 ಸಾವಿನೊಂದಿಗೆ ಮೃತರ ಸಂಖ್ಯೆ 9448ಕ್ಕೆ ಏರಿದೆ.ಇನ್ನು ಎರಡು ಮೂರು ದಿನಗಳಲ್ಲಿ 10 ಸಾವಿರ ಗಡಿ ಮುಟ್ಟಿದರೆ ಅಚ್ಚರಿ ಪಡಬೇಕಿಲ್ಲ.
You may like
ಕರ್ನಾಟಕದಲ್ಲಿ ಕೆಆರ್ ಕೆ ಸಂಸ್ಥೆಯಿಂದ ಪ್ರಭಾಸ್ ಆದಿಪುರುಷ್ ಬಿಡುಗಡೆ
ಕರ್ನಾಟಕದಲ್ಲಿ ಒಂದೇ ದಿನ 21,390 ಕೊರೋನಾ.! ಲಾಕ್ಡೌನ್ ಫಿಕ್ಸಾ.?
ಸಿಎಂ ಬೊಮ್ಮಾಯಿ ಸೇರಿ ಸಂಪುಟದ ಐವರಿಗೆ ಕೊರೋನಾ ಶಾಕ್..!
ದೆಹಲಿ ಮಾದರಿ ಲಾಕ್ ಆಗುತ್ತಾ ಬೆಂಗಳೂರು.? ಯಾಕೆ..? ಏನಾಗ್ತಿದೆ ಬೆಂಗಳೂರಲ್ಲಿ.?
ಕರ್ನಾಟಕದಲ್ಲಿ ಕೊರೋನಾ ಮಹಾ ಸ್ಫೋಟ. ದೆಹಲಿ ಮೀರಿಸುತ್ತಾ ಬೆಂಗಳೂರು.?
ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊರೋನಾ ಪಾಸಿಟಿವ್