Featured
24 ಗಂಟೆಗಳಲ್ಲೇ ಕೊರೊನಾ ವರದಿ – ರಾಜ್ಯದಲ್ಲಿಲ್ಲ ಬೆಡ್, ಆ್ಯಂಬುಲೆನ್ಸ್ ಸಮಸ್ಯೆ – ರಾಜಕೀಯ ಮಾಡದಿರಲು ಪ್ರತಿಪಕ್ಷಗಳಿಗೆ ಸಿಎಂ ಸೂಚನೆ

ರೈಸಿಂಗ್ ಕನ್ನಡ :
ಬೆಂಗಳೂರು :
ಕೊರೊನಾ ವಿಚಾರದಲ್ಲಿ ಭಯ ಬೇಡ. ಹಾಗೆಯೇ ಸೋಂಕಿತರ ವಿಷ್ಯದಲ್ಲಿ ನಿರ್ಲಕ್ಷ್ಯ ಬೇಡ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರೂ ಕಿವಿಮಾತು ಹೇಳಿದ್ದಾರೆ. ರಾಜ್ಯವನ್ನ ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಆತಂಕ ಬೇಡ. ಲಾಕ್‌ಡೌನ್ ಹೊರತಾಗಿಯೂ, ಕಟ್ಟುನಿಟ್ಟಿನ ಕ್ರಮಗಳೊಂದಿಗೆ ನಾವು ಬದುಕಬೇಕಿದೆ ಎಂದಿದ್ದಾರೆ.
ಇನ್ನೂ ಕೊರೊನಾ ತಪಾಸಣೆ ಬಳಿಕ ವರದಿಗಾಗಿ ಹೆಚ್ಚು ಸಮಯ ಕಾಯೋ ಅವಶ್ಯಕತೆ ಇಲ್ಲ. ಆ ನಿಟ್ಟಿನಲ್ಲಿ ಇದ್ದ ಎಲ್ಲಾ ಗೊಂದಲಗಳನ್ನೂ ದೂರಮಾಡಲಾಗಿದೆ. ಪರೀಕ್ಷೆ ನಡೆಸಿದ 24 ಗಂಟೆಗಳಲ್ಲೇ ವರದಿ ಬರಲಿದೆ ಎಂದಿದ್ದಾರೆ. ಇನ್ನೂ ರಾಜ್ಯದಲ್ಲಿ ಬೆಡ್ ಮತ್ತು ಆ್ಯಂಬುಲೆನ್ಸ್ ಕೊರತೆ ಇಲ್ಲ ಎಂದಿರುವ ಸಿಎಂ, ಜನರಲ್ಲಿ ತಪ್ಪುಕಲ್ಪನೆ ಮತ್ತು ಭಯವನ್ನ ಹುಟ್ಟಿಸೋ ಪ್ರಯತ್ನ ನಡೆಸಬಾರದು ಎಂದು ಪ್ರತಿಪಕ್ಷಗಳಲ್ಲಿ ಮನವಿ ಮಾಡಿದ್ದಾರೆ.
ಕೋವಿಡ್ ಚಿಕಿತ್ಸೆಗಾಗಿ 11, 230 ಹಾಸಿಗಳ ವ್ಯವಸ್ಥೆ ಮಾಡಲಾಗಿದೆ, ಇದರಲ್ಲಿ ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು, ಸರ್ಕಾರಿ ಮೆಡಿಕಲ್ ಕಾಲೇಜುಗಳು ಹೀಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ ಸಿಎಂ. ಇನ್ನೂ ಸೋಂಕಿತರಲ್ಲಿ ಕೇವಲ ಶೇ. 5ರಷ್ಟು ಜನರಿಗೆ ಮಾತ್ರ, ವೆಂಟಿಲೇರ್ ಮತ್ತು ಐಸಿಯೂನ ಅಗತ್ಯತೆ ಇರೋದು, ಹೀಗಾಗಿ ಯಾವುದೇ ರೀತಿಯ ವೈದ್ಯಕೀಯ ಸಮಸ್ಯೆಗಳೂ ರಾಜ್ಯದಲ್ಲಿ ಇಲ್ಲ ಎಂದಿದ್ದಾರೆ.

ರಾಜಕೀಯ ಬಿಡಿ, ರಚನಾತ್ಮಕ ಸಲಹೆ ನೀಡಿ..!
ಇನ್ನೂ ಕೊರೊನಾ ಸಂದರ್ಭದಲ್ಲಿ ಖರೀದಿಸಲಾದ ವಸ್ತುಗಳ ಲೆಕ್ಕಾಚಾರದಲ್ಲಿ ಭ್ರಷ್ಟಾಚಾರವಾಗಿದೆ ಅನ್ನೋ ಪ್ರತಿಪಕ್ಷಗಳ ಆರೋಪವನ್ನ ಸಿಎಂ ಬಿಎಸ್ ಯಡಿಯೂರಪ್ಪ ತಳ್ಳಿಹಾಕಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಹೆಸರು ಪ್ರಸ್ತಾಪಿಸಿ ಮಾತನಾಡಿದ ಬಿಎಸ್‌ವೈ ಇಂತಹ ಸಂದರ್ಭದಲ್ಲಿ ಅನವಶ್ಯಕ ಆರೋಪ ಸಲ್ಲದು ಎಂದಿದ್ದಾರೆ. ಅನಾವಶ್ಯಕ ಆರೋಪ ಮಾಡೋದನ್ನ ಬಿಟ್ಟು, ರಚನಾತ್ಮಕ ಸಲಹೆಗಳನ್ನ ನೀಡಿ ಎಂದಿದ್ದಾರೆ. ಅಲ್ಲದೇ ಸಿದ್ದರಾಮಯ್ಯನವರಿಗೆ ಯಾವಾಗ ಬೇಕಾದ್ರೂ ಬಂದು ಎಲ್ಲಾ ಲೆಕ್ಕಪತ್ರಗಳನ್ನ ಪರಿಶೀಲಿಸಬಹುದು ಎಂದ ಆಹ್ವಾನ ನೀಡಿದ್ದಾರೆ.
ಮಾಧ್ಯಮ ಮತ್ತು ಪ್ರತಿಪಕ್ಷಕ್ಕೆ ಧನ್ಯವಾದ..!
ಕೋವಿಡ್ ಆರಂಭವಾದಾಗಿನಿಂದಲೂ ಮಾಧ್ಯಮದವರು ಮತ್ತು ಪ್ರತಿಪಕ್ಷದವರು ಸರ್ಕಾರಕ್ಕೆ ಉತ್ತಮ ಸಲಹೆಗಳನ್ನ ನೀಡುತ್ತಾ ಬಂದಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲರಿಗೂ ಧನ್ಯವಾದ ಅರ್ಪಿಸೋದಾಗಿ ಸಿಎಂ ತಿಳಿಸಿದ್ರೂ. ಇನ್ನೂ ರಾಜ್ಯದಲ್ಲಿ ಕೋವಿಡ್ ಸಂದರ್ಭದಲ್ಲೇ SSLC ಪರೀಕ್ಷೆಯನ್ನ ಯಶಸ್ವಿಯಾಗಿ ಮುಗಿಸಿದ್ದೇವೆ. 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ರು.
ಒಟ್ಟಿನಲ್ಲಿ ಬುಧವಾರದಿಂದ ರಾಜ್ಯದಲ್ಲಿ ಯಾವುದೇ ರೀತಿಯ ಲಾಕ್‌ಡೌನ್ ಇರೋದಿಲ್ಲ. ಕೊರೊನಾ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ, ಆದರೆ ಸೋಂಕಿತರ ವಿಚಾರದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಬೇಡ ಎಂದು ತಮ್ಮ ಭಾಷಣ ಮುಗಿಸಿದ್ರು.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















