Featured
ಸುರಪುರ ಸಾರಿಗೆ ನೌಕರರಲ್ಲಿ ಕೊರೊನಾ ಪಾಸಿಟಿವ್:ಬಸ್ ಸಂಚಾರ ಸ್ಥಗಿತ, ಪ್ರಯಾಣಿಕರಿಲ್ಲಿ ಹೆಚ್ಚಾದ ಆತಂಕ

ರೈಸಿಂಗ್ ಕನ್ನಡ:
ದುರ್ಗೇಶ್ ಮಂಗಿಹಾಳ, ಯಾದಗಿರಿ:
ಜಿಲ್ಲೆಯ ಸುರಪುರ ತಾಲೂಕಿನ ಸಾರಿಗೆ ಸಂಸ್ಥೆ ಸಿಬ್ಬಂದಿಗಳಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾದ ಪರಿಣಾಮ ಸುರಪುರ ಬಸ್ ಡಿಪೋ ಸೀಲ್ ಡೌನ್ ಮಾಡಲಾಗಿದೆ. ಸುರಪುರ ಬಸ್ ಡಿಪೋದಿಂದ ಯಾವುದೇ ಬಸ್ ಹೊರ ಹೊಗುತ್ತಿಲ್ಲ.
ಈಶಾನ್ಯ ಸಾರಿಗೆ ಸಂಸ್ಥೆಯ ಸುರಪುರ ಬಸ್ ಘಟಕದ ಕಂಡಕ್ಟರ್ ನಿಂದ 7 ಜನ ಸಾರಿಗೆ ಸಿಬ್ಬಂದಿಗಳಿಗೆ ಹಾಗೂ ಪ್ರಾಥಮಿಕ ಸಂಪರ್ಕ ಹೊಂದಿದ್ದ 9 ಜನರಿಗೆ ಕೊರೊನಾ ವಕ್ಕರಿಸಿದೆ. ಬಸ್ ಚಾಲಕ, ಕಂಡಕ್ಟರ್ ಹಾಗೂ ಸಿಬ್ಬಂದಿಗಳಲ್ಲಿ ಮತ್ತೆ ಕೊರೊನಾ ಆತಂಕ ಹೆಚ್ಚಾಗಿದೆ.

ಸುರಪುರ ಬಸ್ ಘಟಕದಲ್ಲಿ 335 ಸಿಬ್ಬಂದಿಗಳು ಇಲ್ಲಿಯವರೆಗೆ ಕರ್ತವ್ಯ ನಿರ್ವಹಿಸಿದ್ದು. ಸಾರಿಗೆ ಘಟಕದಿಂದ 300 ಜನರ ಸ್ಯಾಂಪಲ್ ಸಂಗ್ರಹಿಸಿದ್ದು ವರದಿ ಬರಬೇಕಿದೆ. ಮುಂಜಾಗ್ರತಾ ವಹಿಸಿ ಸುರಪುರ ಡಿಪೋ ಸೀಲ್ ಡೌನ್ ಮಾಡಲಾಗಿದೆ. ಶಹಾಪುರ,ಯಾದಗಿರಿ ಬಸ್ ಘಟಕದಿಂದ ಸುರಪುರಗೆ ಬಸ್ ಸಂಚಾರ ಬಸ್ ಸಂಚಾರಸ ಸ್ಥಗಿತಗೊಂಡಿದೆ.
ಸುರಪುರ ಬಸ್ ನಿಲ್ದಾಣದಿಂದ ಬಸ್ ನಲ್ಲಿ ಪ್ರಯಾಣ ಮಾಡಲು ಜನರ ಹಿಂದೇಟು ಹಾಕುತ್ತಿದ್ದಾರೆ. ಪಾಸಿಟಿವ್ ಬಂದ್ ಬಸ್ ಚಾಲಕ, ನಿರ್ವಾಹಕನಿಂದ ಅದೆಷ್ಟು ಜನರಿಗೆ ಕೊರೋನಾ ಹರಡಿದೆ ಎನ್ನುವುದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ.
You may like
ಕರ್ನಾಟಕದಲ್ಲಿ ಕೆಆರ್ ಕೆ ಸಂಸ್ಥೆಯಿಂದ ಪ್ರಭಾಸ್ ಆದಿಪುರುಷ್ ಬಿಡುಗಡೆ
ಕರ್ನಾಟಕದಲ್ಲಿ ಒಂದೇ ದಿನ 21,390 ಕೊರೋನಾ.! ಲಾಕ್ಡೌನ್ ಫಿಕ್ಸಾ.?
ಸಿಎಂ ಬೊಮ್ಮಾಯಿ ಸೇರಿ ಸಂಪುಟದ ಐವರಿಗೆ ಕೊರೋನಾ ಶಾಕ್..!
ದೆಹಲಿ ಮಾದರಿ ಲಾಕ್ ಆಗುತ್ತಾ ಬೆಂಗಳೂರು.? ಯಾಕೆ..? ಏನಾಗ್ತಿದೆ ಬೆಂಗಳೂರಲ್ಲಿ.?
ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊರೋನಾ ಪಾಸಿಟಿವ್
ದಾವಣಗೆರೆ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ ಉಚಿತ ಮಾಸ್ಕ್ ವಿತರಣೆ