Featured
ಸರ್ಕಾರದ ಸಂಶಯಾಸ್ಪದ ನಡೆಯಿಂದ ಕಿಟ್ ಹಗರಣ ನಡೆದಿದೆ: ಮಾಜಿ ಸಚಿವ ಯು.ಟಿ.ಖಾದರ್ ಆರೋಪ

ರೈಸಿಂಗ್ ಕನ್ನಡ :
ಕೊಪ್ಪಳ :
ರಾಜ್ಯದಲ್ಲಿರುವ ಬಿಜೆಪಿ ಸರಕಾರ ಕೊರೊನಾ ನಿಯಂತ್ರಣದಲ್ಲಿ ವಿಫಲವಾಗಿದ್ದು ಸಂಶಯಾಸ್ಪದ ನಡೆಯಿಂದ ಹಗರಣ ಆಗಿರುವುದು ಬಹುತೇಕ ಸ್ಪಷ್ಟ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಮಾಜಿ ಸಚಿವ ಯು.ಟಿ.ಖಾದರ್, ಕೊರೊನಾ ಹಗರಣದಲ್ಲಿ ಸರ್ಕಾರ ಸಂಶಯಾಸ್ಪದ ನಡೆಯಿಂದ ಹಗರಣ ಆಗಿರುವುದು ಸ್ಪಷ್ಟವಾಗಿದೆ. ತನಿಖೆ ಸರಿಯಾಗಿ ನಡೆದಿಲ್ಲ. ನಾಲ್ಕೈದು ಮಂತ್ರಿಗಳು ಡೈಲಾಗ್ ಹೊಡೆದದ್ದೇ ಸಾಧನೆಯಾಗಿದೆ.
ಸ್ವಚ್ಛ, ಪಾರದರ್ಶಕ ಸರಕಾರ ನಡೆಸಬೇಕಾದರೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು.ಜನರಿಗೆ ಕೊರೊನಾ ನಿಯಂತ್ರಣ, ನಿರ್ವಹಣೆಯ ಲೆಕ್ಕಾಚಾರ ಜನರಿಗೆ ತಿಳಿಸಲಿಎಂದು ಸವಾಲು ಹಾಕಿದರು.
ಸರ್ಕಾರ ಕ್ವಾಲಿಟಿ ಇಲ್ಲದ ಪಿಪಿಇ ಕಿಟ್, ಮಾಸ್ಕ್‌ಗಳನ್ನು ಡಾಕ್ಟರ್, ವೈದ್ಯಕೀಯ ಸಿಬ್ಬಂದಿಗೆ ಕೊಟ್ಟಿದೆ. ಲಾಕ್‌ಡೌನ್ ವೇಳೆ ಸರಕಾರಕ್ಕೆ ಪ್ರತಿಪಕ್ಷದವರು ಸಹಕಾರ ನೀಡಿದ್ದೇವೆ.
ರಾಜ್ಯದ ಜನರು ಬದುಕಬೇಕೆಂದರೆ ದೇವರೇ ಕಾಪಾಡಬೇಕು ಅಂತ ಆರೋಗ್ಯ ಮಂತ್ರಿಗಳೇ ಕೈ ಚೆಲ್ಲುತ್ತಾರೆ. ಮಾಡಿರುವ ಹಗರಣವನ್ನು ಸರಕಾರ ಒಪ್ಪಿಕೊಳ್ಳಬೇಕು. ತನಿಖೆಗೂ ಸರಕಾರ ಒಪ್ಪಬೇಕು.ಕಾಂಗ್ರೆಸ್ ಸರಕಾರ ಇದ್ದಾಗ ಆರೋಪ ಬಂದಾಗ ಪ್ರತಿಪಕ್ಷದ ಬೇಡಿಕೆಗೆ ಸ್ಪಂದಿಸುತ್ತಿತ್ತು.
ಈ ಸರಕಾರ ಆರೋಪಗಳನ್ನು ಸಹಿಸುತ್ತಿಲ್ಲ, ಸಹಕಾರವನ್ನು ನೀಡುತ್ತಿಲ್ಲಸರಿಯಾದ ಆಡಳಿತ ನಡೆಸಲು ಪ್ರತಿಪಕ್ಷದವರು ನೀಡುತ್ತಿರುವ ಇಂಜೆಕ್ಷನ್ ಇದು.ಕಾಯಿಲೆ ಹೆಚ್ಚುತ್ತಿರುವುದಕ್ಕೆ, ಸಾವು ಹೆಚ್ಚುತ್ತಿರುವುದಕ್ಕೆ, ಅಮಾನವೀಯ ಶವಸಂಸ್ಕಾರಕ್ಕೆ ಸರಕಾರದ ನಿರ್ವಹಣೆ ಕೊರತೆ ಕಾರಣ ಇಲ್ಲಿ ಎದ್ದು ಕಾಣುತ್ತದೆ ಎಂದರು.
ಮಂತ್ರಿಗಳ ನಡುವೆ ಇರುವ ಆಂತರಿಕ ರಾಜಕೀಯ ಗೊಂದಲದಿಂದ ಜನರು ಯಾಕೆ ಶಿಕ್ಷೆ ಅನುಭವಿಸಬೇಕು. ಕಳೆದ ಮೂರು ತಿಂಗಳಲ್ಲಿ ಕೊರೊನಾಗೆ ಸಂಬಂಧಿಸಿದಂತೆ ಎಷ್ಟು ಆದೇಶಗಳನ್ನು ಸರಕಾರ ಹೊರಡಿಸಿದೆ ಎಂಬುದನ್ನು ಸ್ಪಷ್ಟಪಡಿಸಲಿಇದು ಮಾನವಿಯತೆ, ಕರುಣೆ ಇಲ್ಲದ ಸರಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ರಾಜ್ಯ ಸರಕಾರದ ಈ ಧೋರಣೆಯನ್ನು ಖಂಡಿಸುತ್ತದೆ.
ಜನರ ಕಷ್ಟ ಅರಿಯಲು ಪ್ರತಿ ಜಿಲ್ಲೆಯಲ್ಲೂ ಕೆಎಎಸ್ ಅಧಿಕಾರಿಗಳ ಸಮೇತ ಸಮಿತಿ ಮಾಡಲಿ.ಐಎಎಸ್ ಅಧಿಕಾರಿ ಕಮಿಟಿಯ ನೇತೃತ್ವ ವಹಿಸಲಿವೆಂಟಿಲೇಟರ್ ಸಂಜೀವಿನಿ ಅಲ್ಲ. ಸಾವು-ಬದುಕು ದೇವರ ಕೈಯಲ್ಲಿದೆ ಎಂದರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?